ಜಗ್ಗೇಶ್ ಬೇಸರಗೊಂಡಿದ್ದು ಯಾಕೆ? ಛೇ ಹೀಗಾಗಬಾರದಿತ್ತು!

ಜಗ್ಗೇಶ್ ಬೇಸರಗೊಂಡಿದ್ದಾರೆ. ನೋವಲ್ಲಿ ಒಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಹೀಗಿದೆ-
“ನನ್ನ ಮರೆತ ಜಾಣ ಕುರುಡು. ನೀವು ಮರೆತರೂ ನನ್ನ ಜಾಲತಾಣ ವಿಶ್ವಕ್ಕೆ ಮುಟ್ಟಿಸಿದೆ ನನ್ನ ನಡೆ”
ಅದರ ಜೊತೆಗೊಂದು ಡಿಯೋ ಅಪ್‌ಲೋಡ್ ಮಾಡಿದ್ದಾರೆ. ರಾಜಕುಮಾರ ಸಿನಿಮಾದ ನೂರನೇ ದಿನದ ಸಂಭ್ರಮಾಚರಣೆಯ ವೀಡಿಯೋ ಅದು. ಜಗ್ಗೇಶ್‌ಗೆ ನೋವಾಗಲು ಕಾರಣ ಕೂಡ ಅದೇ ವೀಡಿಯೋ.
ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಸಿನಿಮಾದ ೧೦೦ನೇ ದಿನದ ಸಂಭ್ರಮಾಚರಣೆ ನಡೆದಿತ್ತು. ಆ ದಿನ ಹಲವಾರು ಸೆಲೆಬ್ರಿಟಿಗಳು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಆ ಕಾರ್ಯಕ್ರಮದ ಚಿತ್ರೀಕರಣವನ್ನು ಉದಯ ವಾಹಿನಿ  ಮಾಡಿತ್ತು. ಆ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಹಕ್ಕು ಕೂಡ ಉದಯ ವಾಹಿನಿಗೆ ಇತ್ತು. ಹಾಗಾಗಿ ಇವತ್ತು ಉದಯ ಟಿವಿಯವರು ಆ ಕಾರ್ಯಕ್ರಮದ ಪ್ರೋಮೋವನ್ನು ಪ್ರಸಾರ ಮಾಡಿದ್ದರು. ಆ ಪ್ರೋಮೋದಲ್ಲಿ ಸುದೀಪ್, ಸಾದುಕೋಕಿಲ, ಯಶ್, ರಾಧಿಕಾ ಪಂಡಿತ್ ಮತ್ತಿತರರನ್ನೆಲ್ಲಾ ತೋರಿಸಲಾಗಿತ್ತು. ಆದರೆ ಜಗ್ಗೇಶ್‌ರನ್ನು ತೋರಿಸಲಾಗಿಲ್ಲ. ಜಗ್ಗೇಶ್ ಕೂಡ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದಯ ವಾಹಿನಿಯ ಪ್ರೋಮೋದಲ್ಲಿ ಅವರನ್ನು ತೋರಿಸದೇ ಇದ್ದುದು ಅವರಿಗೆ ಬೇಸರವನ್ನುಂಟು ಮಾಡಿದೆ ಅನ್ನಿಸುತ್ತದೆ. ಅದೇ ನೋವಲ್ಲಿ ಅವರು ಟ್ವೀಟ್ ಮಾಡಿದ್ದಾರೆ.
ಸಮಯಸಾಧಕರಿಗೆ ಬೇಕಾಗಿರುವುದು ಸಾಧನೆಯಲ್ಲ ಯಶಸ್ಸು. ಡ್ರಮ್ಮು ಡೋಲಿನ ಸದ್ದಿಗೆ ಬಾಗಿದರೆ ಡೋಲಾಯಮಾನವಾಗುವುದು ಬದುಕು ಎಂದು ಬರೆದಿದ್ದಾರೆ. ಜಗ್ಗೇಶ್ ಇಷ್ಟೊಂದು ನೋವಾಗಿದೆ ಅಂದರೆ ಇದರ ಹಿಂದೆ ದೊಡ್ಡ ಕತೆಯೇ ಇದೆ ಅನ್ನಿಸುತ್ತದೆ. ಆ ಕತೆಯನ್ನು ಅವರೇ ಹೇಳಬೇಕಷ್ಟೇ.
-Ad-

Leave Your Comments