ಪುನೀತ್ ರಾಜ್ ಕುಮಾರ್  ಜೊತೆ ಹರಿಪ್ರಿಯಾ ಡಂಕಣಕ !!

ನೃತ್ಯ ನಿರ್ದೇಶಕ ಹರ್ಷ ಅವರು ಪುನೀತ್  ರಾಜ್ ಕುಮಾರ್ ನಟನೆಯ ಸಿನಿಮಾ ನಿರ್ದೇಶನ ಮಾಡುತ್ತಿರುವ ಸುದ್ದಿ ಹೊಸತೇನಲ್ಲ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಅಂದಹಾಗೆ ಹರ್ಷ ಸಿನಿಮಾ ಮಾಡುತ್ತಾರೆ ಅಂದ್ರೆ ಅಲ್ಲಿ ಡಾನ್ಸು ಮತ್ತು ಆಂಜನೇಯ ಇರಲೇಬೇಕು. ಹಾಗಾಗಿ ಅವರು ಪುನೀತ್ ರಾಜ್ ಕುಮಾರ್ ನಟನೆಯ ಕಮ್ಮ ಮುಂದಿನ ಸಿನಿಮಾದ ಹೆಸರು ಆಂಜನೇಯ ಅಂತಲೇ ಇಟ್ಟಿದ್ದಾರೆ. ಹಾಗಂತ ಆಂಜನೇಯ ಅಂತಲೇ ತಿಳ್ಕೋಬೇಡಿ. ಆಂಜನೇಯನ ಮತ್ತೊಂದು ಹೆಸರು ಅಂಜನೀಪುತ್ರ.

ಈ ಮೂಲಕ ಹನುಮಂತನನ್ನು ಪೂಜಿಸಿದ ಹರ್ಷ ಈಗ ಡಾನ್ಸ್ ನಲ್ಲಿ ಏನಾದರೂ ಸ್ಪೆಷಲ್ ಮಾಡಲೇಬೇಕು ತಾನೇ. ಅದಕ್ಕಾಗಿ ಹರ್ಷ ಒಳ್ಳೆ ಐಡಿಯಾ ಮಾಡಿದ್ದಾರೆ. ನೀರುದೋಸೆಯ ಕುಮುದಾಳನ್ನೇ ಕರೆದುಕೊಂಡು ಬಂದಿದ್ದಾರೆ. ಲಕ್ಷಾಂತರ ಕನ್ನಡಿಗರ ಮನ ಗೆದ್ದಿರುವ ಹರಿಪ್ರಿಯಾ ಅಂಜನೀಪುತ್ರ ಸಿನಿಮಾದಲ್ಲಿ ಸ್ಪೆಷಲ್ ಸಾಂಗಿಗೆ  ಕುಣಿಯಲಿದ್ದಾರೆ. ಈ ಹಾಡಿನ ಚಿತ್ರೀಕರಣ ಕೂಡ ನಡೆದಿದೆ.

ಒಂದು ಭವ್ಯವಾದ ಸೆಟ್ಟಿನಲ್ಲಿ ಹರಿಪ್ರಿಯಾ ಡಿಫರೆಂಟ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು. ಅದರ ಜೊತೆ ಪುನೀತ್ ಜೊತೆ ಹರಿಪ್ರಿಯಾ ತೆಗೆದ ಸೆಲ್ಫೀ, ಅವರಿಬ್ಬರ ಜೊತೆ ನಿಂತು ಹರ್ಷ ತೆಗೆಸಿಕೊಂಡ ಸೆಲ್ಫೀ ಕೂಡ ಇದೆ .

-Ad-

Leave Your Comments