3 ಬಿಟ್ಟವರು ಊರಿಗೆ ದೊಡ್ಡವರು ಚಿತ್ರದ ಕಟೌಟ್ ಗಳಲ್ಲಿ ಸಿಸಿಟಿವಿ ?

 ಬೆಂಗಳೂರಿನ ೪೦ ಕ್ಕೂ ಹೆಚ್ಚು ಕಡೆ3 ಬಿಟ್ಟವರು ಊರಿಗೆ ದೊಡ್ಡವರು ಚಿತ್ರದ ಕಟೌಟ್ ಗಳು ರಾರಾಜಿಸುತ್ತಿವೆ. ಶೋಭಾ ರಾಜಕೀಯ ಪ್ರೊಡಕ್ಷನ್ ನಿರ್ಮಾಣದ  ಚಿತ್ರವಿದು.ಬಿಜೆಪಿ ಯುವ ಮುಖಂಡ ಎನ್.ಎಸ್ ವಿನಯ್ , ವಕೀಲ ಅಮೃತೇಶ್ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
 ವಿನಯ್ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದ ಸುತ್ತ ಇರುವ ರಾಜಕೀಯ ಕತೆ  ಇಟ್ಟುಕೊಂಡು  ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪಿ.ಎ ಸಂತೋಷ್ ರಿಂದ ವಿನಯ್ ಕಿಡ್ನಾಪ್ ಗೆ ಯತ್ನ ಪ್ರಕರಣದಲ್ಲಿ ಸಂತೋಷ್ ಕೂಡ ಆರೋಪಿಯಾಗಿದ್ದಾರೆ . ಇದೇ ಘಟನೆಯನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದೆಯಂತೆ. ಕವಿ ರಾಜೇಶ್  3 ಬಿಟ್ಟವರು ಊರಿಗೆ ದೊಡ್ಡವರು ಚಿತ್ರದ ನಿರ್ದೇಶಕರು. ಇಡೀ ಚಿತ್ರದಲ್ಲಿ ಬಿ.ಎಸ್ ಯಡಿಯೂರಪ್ಪ ನವರು  ಸಂತೋಷ್ ಗೆ  ಬೆಂಬಲ ನೀಡಿದ್ದಾರೆ ಎಂದು ಪರೋಕ್ಷವಾಗಿ ಉಲ್ಲೇಖ ಮಾಡಲಾಗಿದೆಯಂತೆ.
ಸಿನಿಮಾ ಪ್ರಚಾರದ ಭಾಗವಾಗಿ ಸುಮಾರು ನಲ್ವತ್ತು ಕಡೆಗಳಲ್ಲಿ ಚಿತ್ರದ ಕಟೌಟ್ ಗಳನ್ನು ಹಾಕಲಾಗಿದೆ.ಕಿಡಿಗೇಡಿಗಳು ಫ್ಲೆಕ್ಸ್ ಕಿತ್ತೊಗೆಯಬಹುದು ಎಂಬ ಮುನ್ನೆಚ್ಚರಿಕೆಯಿಂದ ಇದೇ  ಪ್ರಥಮ ಬಾರಿಗೆ CC Tv ಯನ್ನು ಫ್ಲೆಕ್ಸ್ ಗಳಿಗೆ ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಹಾಗೆಯೇ ಕಟೌಟ್ ನಲ್ಲಿ ಕೆಜೆಪಿ ಪಕ್ಷದ ಕಲರ್ ಕೂಡ ಬಳಸಲಾಗಿದೆ.
ಈ ಚಿತ್ರದಲ್ಲಿ ನಿರ್ಮಾಪಕರು, ನಿರ್ದೇಶಕರೂ ಎಲ್ಲರೂ ವಕೀಲರೆ. ಸದ್ದಿಲ್ಲದ ಬೆಂಗಳೂರಿನಲ್ಲಿ ನಡೆಯುತ್ತಿದೆಯಂತೆ ಚಿತ್ರದ ಚಿತ್ರೀಕರಣ.
-Ad-

Leave Your Comments