ಅಂಬಿ ಪುತ್ರ ಅಭಿಷೇಕ್ ಬೆವರು ಇಳಿಸುತ್ತಿರುವುದು ಎಲ್ಲಿ ?

ನಟ ಅಂಬರೀಷ್‌ ಪುತ್ರ ಅಭಿಷೇಕ್‌ ಸಿನಿಮಾ ರಂಗಕ್ಕೆ ಬರಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಿಶ್ರ ಮಾರ್ಷಲ್‌ ಆರ್ಟ್‌ ತರಬೇತಿಗಾಗಿ ಅವರು ಲಾಸ್‌ ಏಂಜಿಲಸ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಅಭಿಷೇಕ್‌ ಜತೆ ತೆಲುಗಿನ ನಟ ಮನೋಜ್‌ ಕುಮಾರ್‌ ಮಂಜು ಕೂಡ ಈ ಕಲೆ ಕಲಿಯುತ್ತಿರುವುದು ವಿಶೇಷ. ತಮ್ಮ ಪುತ್ರ ಮಾರ್ಷಲ್‌ ಕಲೆಯನ್ನು ಕಲಿಯುತ್ತಿರುವ ಕುರಿತು ಸ್ವತಃ ಸುಮಲತಾ ಅಂಬರೀಷ್‌ ಬಹಿರಂಗ ಪಡಿಸಿದ್ದಾರೆ. ಮಾರ್ಷಲ್‌ ಆರ್ಟ್‌ ಕಲಿಯುತ್ತಿರುವ ತಮ್ಮ ಮಗನ ಫೋಟೋವನ್ನು ಟ್ವಿಟ್‌ ಕೂಡ ಮಾಡಿದ್ದಾರೆ. ಜೊತೆಗೆ ತಮ್ಮ ಮುದ್ದು ಮಗನಿಗೆ ಟ್ವಿಟರ್ನಲ್ಲೇ ಹುಟ್ಟುಹಬ್ಬದ ಶುಭಾಶಯವನ್ನೂ ಕೋರಿದ್ದಾರೆ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿಕ್ಕೆ ರೆಬಲ್ ಸ್ಟಾರ್  ಪುತ್ರ ಸಕತ್ ಸಿದ್ಧತೆ ಮಾಡಿಕೊಳ್ಳುತ್ತಿರುವ ಹಾಗೆ ಕಾಣುತ್ತಿದೆ. ಕನ್ನಡಿಗರ ಪ್ರೀತಿಯ ಅಂಬಿ – ಪ್ರತಿಭೆಯೇ ಮೈವೆತ್ತಂತಿರುವ ಸುಮಲತಾ ದಂಪತಿಗಳ ಸುಪುತ್ರನ ಚಿತ್ರರಂಗ ಪ್ರವೇಶ ಅಭಿಮಾನಿಗಳನ್ನ  ಸಾಕಷ್ಟು ಕುತೂಹಲ  ಹಾಗು ನೀರೀಕ್ಷೆಯಲ್ಲಿ ನಿಲ್ಲಿಸಿದೆ .

-Ad-

Leave Your Comments