ನಟ ಧೃವ ಸಾವಿಗೆ ಕಾರಣವೇನು ಗೊತ್ತಾ..?

ಸ್ಯಾಂಡಲ್‌ವುಡ್‌ ನಟ, ಸಿಸಿಎಲ್‌ ಆಟಗಾರ ಧ್ರುವ ಶರ್ಮಾ ಕೊನೆಯುಸಿರೆಳೆದಿದ್ದಾರೆ. ಮೂಗ ಮತ್ತು ಕಿವುಡರಾಗಿದ್ದ ಧ್ರುವ ತಮ್ಮ ಅಭಿನಯ ಹಾಗೂ ಕ್ರಿಕೆಟ್‌ನಿಂದ ಎಲ್ಲರ ಗಮನ ಸೆಳೆದಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಧ್ರುವ ಅವರನ್ನು ಶನಿವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಧ್ರುವ ಇಹಲೋಕ ತ್ಯಜಿಸಿದ್ದಾರೆ. ‘ಸ್ನೇಹಾಂಜಲಿ’, ‘ಬೆಂಗಳೂರು 560023’ ‘ನೀನಂದ್ರೆ ಇಷ್ಟ ಕಣೋ’, ‘ತಿಪ್ಪಜ್ಜಿ ಸರ್ಕಲ್‌’, ‘ಹಿಟ್‌ ಲಿಸ್ಟ್‌’ ಸೇರಿದಂತೆ ಹಲವು ಚಿತ್ರಗಳಲ್ಲಿ ಧ್ರುವ ನಟಿಸಿದ್ರು..

ಇನ್ನು ನಟ ಸುದೀಪ್ ಮುಂದಾಳತ್ವದಲ್ಲಿ ಅಸ್ತಿತ್ವಕ್ಕೆ ಬಂದ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ನಲ್ಲಿ ಅತ್ಯುತ್ತಮವಾಗಿ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ರು. ಕರ್ನಾಟಕ ಬುಲ್ಡೋಜರ್ಸ್‌ ತಂಡದಲ್ಲಿ ಅಕ್ರಮಣಕಾರಿ ಬ್ಯಾಟಿಂಗ್ ಹಾಗೂ ಉತ್ತಮ ಬೌಲಿಂಗ್ ಮೂಲಕ ಪ್ರಮುಖ ಆಲ್ರೌಂಡರ್ ಆಗಿದ್ದರು.

ಇಂದು ಸಂಜೆ 4 ಗಂಟೆಗೆ ಕುಂಬ್ರಹಳ್ಳಿಯಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಧ್ರುವ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಸಾವಿನ ಸುತ್ತ ಅನುಮಾನಗಳು ಮೂಡುತ್ತಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಯಾವುದು ಸತ್ಯ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

-Ad-

Leave Your Comments