ಮಕ್ಕಳ ದಿನಾಚರಣೆಗೆ ಜಗ್ಗೆಶ್ ಹೇಳಿದ ನೀತಿ ಕಥೆ ಏನು ಗೊತ್ತಾ?

ಮೊಮ್ಮಗ ಅರ್ಜುನನ ಜತೆ ಜಗ್ಗೆಶ್...

ನವರಸ ನಾಯಕ ಜಗ್ಗೇಶ್ ಅವರು ಮಕ್ಕಳ ದಿನಾಚರಣೆ ದಿನದಂದು ಸಾಮಾಜಿಕ ಜಾಲತಾಣದ ಮೂಲಕ ನೀತಿ ಕಥೆ ಹೇಳಿ ಶುಭಾಶಯ ಕೋರಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಒಂದು ಪುಟ್ಟ ಕಥೆ ಮೂಲಕ ತಿಳಿಸಿದ್ದಾರೆ. ಅವರು ಹೇಳಿರುವ ಕಥೆ ಹೀಗಿದೆ ನೋಡಿ…

ಸರ್ಕಸ್ ನಡೆಸಲಾಗದವ ತನ್ನ ಸಿಂಹಗಳ ಕಾಡಿಗೆ ಬಿಟ್ಟ!

4ದಿನಕ್ಕೆ ಬೇಟೆನಾಯಿ ಸಿಂಹಗಳನ್ನು ಕಚ್ಚಿ ಸಾಯಿಸಿದವು!

ಸಿಂಹಕ್ಕೆ ನಾಯಿಯಿಂದ ಸಾವೇ?

ಹೌದು ಸಮಯಕ್ಕೆ ಸರಿಯಾಗಿ ಮಾಂಸ ತಿಂದು ಬೇಟೆ ಕಲಿಯದೆ ಮನೆ ನಾಯಿಂತೆ ಬೆಳೆದದ್ದು ತಪ್ಪಾಯಿತು.

ಅಂತೆಯೇ ಮಕ್ಕಳನ್ನು ಬೇಟೆಯಾಡುವ ಸಿಂಹದಂತೆ ಬೆಳಸಿ!

ಸಮಯಕ್ಕೆ ಸರಿಯಾಗಿ ಬೇಕಾದುದನ್ನೆಲ್ಲಾ ನೀಡಿ ಸಾಕದಿರಿ!

ಸಮಾಜದ ಕಾಡಲ್ಲಿ ಬೇಟೆ ಬಾರದೆ ಸಾಯುತ್ತಾರೆ!

ಮಕ್ಕಳ ದಿನಾಚರಣೆಯ ಶುಭಾಶಯಗಳು 🙂

-Ad-

Leave Your Comments