ನೂರೊಂದು ನೆನಪು ಉಳಿಸಿ ಹೋದ “ಸಾಹಸ ಸಿಂಹ”ನಿಗೆ ಇನ್ನಾದರೂ ಸಿಗಲಿ ಸ್ಮಾರಕ ಭಾಗ್ಯ

ಏಳು ವರುಷಗಳ ಹಿಂದೆ ಇಂಥದ್ದೇ ಒಂದು ಕಡುಕತ್ತಲು  ವಿಷ್ಣು ಅಭಿಮಾನಿಗಳು, ಸ್ನೇಹಿತರು, ಬಂಧುಗಳ  ಮನದಲ್ಲಿ ದುಃಖದ ಕಟ್ಟೆ ಹೊಡೆಸಿತ್ತು. ದಶಕಗಳ ಕಾಲ ಅಭಿನಯವನ್ನೇ ಧ್ಯಾನಿಸಿದ ಅಭಿಜಾತ ಕಲಾವಿದ, ಅಭಿಮಾನಿಗಳ ಸಾಹಸ ಸಿಂಹ ಕಿಂಚಿತ್ ಸುಳಿವು ಕೂಡ ಕೊಡದೆ ಕಣ್ಮರೆಯಾಗಿ ಹೋದರು.

vishnu-last

ನಾಗರಹಾವು, ಬಂಧನ,ಸುಪ್ರಭಾತ , ಮುತ್ತಿನಹಾರ, ಕರ್ಣ,  ನಿಷ್ಕರ್ಷ , ಆಪ್ತಮಿತ್ರ , ಯಜಮಾನ ಒಂದೇ ಎರಡೇ ?ಎಂತೆಂಥ  ಚಿತ್ರಗಳಲ್ಲಿ ಅಭಿನಯಿಸಿ ಬಾಲಿವುಡ್ ಧರ್ಮೇಂದ್ರರಿಂದ ಹಿಡಿದು ಅನೇಕ ಘಟಾನುಘಟಿಗಳಿಂದ ಪ್ರಶಂಸೆ ಪಡೆದಿದ್ದ ಕಲಾವಿದ ಕನ್ನಡದ ಸಂಪತ್ ಕುಮಾರ್. ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಇಂಥ ಮೇರು ನಟ ಆಗಲಿ ಏಳು ವರುಷಗಳಾದರು ಆತನ ಸಾಧನೆ ಸದಾ ಕಾಲ ಉಳಿಸುವಂಥ ತಲೆಮಾರುಗಳಿಗೆ ದಾಟಿಸುವಂಥ  ಒಂದೇ ಒಂದು ಸ್ಮಾರಕ ನಿರ್ಮಿಸಲಾಗಿಲ್ಲವಲ್ಲ. ಇದು ನಮ್ಮವರ ಮನಃಸ್ಥಿತಿಯ, ಇಚ್ಚಾಶಕ್ತಿಯ ಕೊರತೆಯಲ್ಲದೆ ಮತ್ತೆನೂ ಇಲ್ಲ.

vishnu-nagarahaavuvishnu-bandhana vishnu-yajamaanavishnu-standing

ವಿಷ್ಣುವಿನ ಸುತ್ತ ವಿವಾದ 

ಅಂತ್ಯಕ್ರಿಯೆಯೆನೋ ಅಭಿಮಾನ್ ಸ್ಟುಡಿಯೋ ಅಂಗಳದಲ್ಲಿ ಮುಗಿದುಹೋಯಿತು. ಆದ್ರೆ ವಿವಾದಗಳು ? ಹೋದ  ಮೇಲೂ ಬಿಡದೆ ಬೆನ್ನಟ್ಟಿದವಲ್ಲ. ಅಭಿಮಾನ್ ನಲ್ಲಿ ಸ್ಮಾರಕ ನಿರ್ಮಿಸಲು ಕೊನೆಗೂ ಬಾಲಕೃಷ್ಣರ ಮಗ ಒಪ್ಪಲಿಲ್ಲ. ಮತ್ತೆ ಕೆಂಗೇರಿಯ ಬಳಿ ಸರ್ಕಾರ ಕೊಟ್ಟ ಜಾಗಕ್ಕೆ ತಕರಾರು . ಆ ಜಾಗ ಮೀಸಲು ಅರಣ್ಯ ಪ್ರದೇಶ. ಅಲ್ಲಿದ್ದ ಮರ ಕಡಿಯುವಂತಿರಲಿಲ್ಲ. ಕೊನೆಗೆ ಬೇಸತ್ತು ಬಸವಳಿದ ಹಿರಿಯ ಜೀವ ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲೇ ಸ್ಮಾರಕ ನಿರ್ಮಿಸುವ ಯೋಚನೆ ಮುಂದಿಟ್ಟರು. ಇಲ್ಲೇ ಉಳಿಸಿಕೊಳ್ಳಬೇಕು ಎನ್ನುವುದು ಅಭಿಮಾನಿಗಳ ಕೋರಿಕೆಯಾದರು ಸ್ಥಳವಿಲ್ಲದೆ ಸ್ಮಾರಕ ಹುಟ್ಟುವುದಾದರೂ ಎಲ್ಲಿಂದ ?

vishnu-bharati

ಕಳೆದ ಏಳು ವರುಷಗಳಿಂದ ಸರ್ಕಾರದ ಬಾಗಿಲು ತಟ್ಟಿ ತಟ್ಟಿ ಕೊನೆಗೂ ಅಗಲಿದ ನಟನ  ಭಸ್ಮಕ್ಕೆ ಶಾಶ್ವತ ನೆಲೆ ಕಲ್ಪಿಸಲು ಒಂದಷ್ಟು ಜಾಗ ದೊರಕಿಸಿಕೊಂಡರು ಭಾರತಿ. ಹುಟ್ಟೂರು ಮೈಸೂರಿನಲ್ಲೇ ಸ್ಮಾರಕವಾಗಿ ಸಾಂಸ್ಕೃತಿಕವಾಗಿ ಉಳಿಯಲಿ ಕನ್ನಡಿಗರ ಅಭಿಮಾನದ ಜೀವ ಎನ್ನುವುದು ಅವರ ಇಚ್ಛೆ ಇದ್ದರೂ  ಇರಬಹುದು. ಇವತ್ತಿಗೂ ಸಾಂಸ್ಕೃತಿಕ ರಾಜಧಾನಿ ಎಂದರೆ ಮೈಸೂರೇ. ಬೆಂಗಳೂರಿನ ಜನಜಂಗುಳಿಗಿಂತ ಕಡೆ ಕಡೆಗೆ ಧ್ಯಾನ-ಮೌನ ದತ್ತ ಮುಖಮಾಡಿದ್ದ ವಿಷ್ಣು ಇದ್ದುದ್ದರಲ್ಲಿ ಪ್ರಶಾಂತವಾಗಿರುವ  ಮೈಸೂರಿನಲ್ಲೇ ಕಲೆಯಾಗಿ ಅರಳಲಿ ಅಲ್ಲವೇ .vishnu-muttina-haaraಸ್ಮಾರಕದಲ್ಲಿ ಏನೇನು ?

ವಿಷ್ಣು ಅಳಿಯ ಅನಿರುದ್ ciniadda.com ಗೆ  ಹೇಳಿದ ಪ್ರಕಾರ ಮೈಸೂರಿನ ಹಾಳಾಲು ಗ್ರಾಮದಲ್ಲಿ 5 ಎಕರೆ ಜಾಗ ಡಾ. ವಿಷ್ಣುವರ್ಧನ್ ಪ್ರತಿಷ್ಠಾನದ ಹೆಸರಿನಲ್ಲಿ ಮಂಜೂರು  ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ  ನೇತೃತ್ವದ ಟ್ರಸ್ಟ್ನಲ್ಲಿ ಭಾರತಿ ಕೂಡ ಇದ್ದಾರೆ. ಎರಡು ಎಕರೆ ಜಾಗದಲ್ಲಿ ನಿರ್ಮಿಸಲಾಗುವ ಸ್ಮಾರಕಕ್ಕೆ ಈಗಾಗಲೇ ಹನ್ನೊಂದು ಕೋಟಿ ಬಿಡುಗಡೆಯಾಗಿದೆ.

ಚಿತಾಭಸ್ಮವಿಟ್ಟು ಕಲಶ ಪ್ರತಿಷ್ಠಾಪಿಸಿ ಪೂರ್ಣ ಸಮಾಧಿ ನಿರ್ಮಾಣ. ಪ್ರಮುಖ ಪುತ್ಥಳಿ. ವಿಷ್ಣು ಚಿತ್ರಗಳ ಛಾಯಾಚಿತ್ರ ಕೊಠಡಿ. ಸಿನಿಮಾ, ಅಧ್ಯಾತ್ಮಿಕ, ಸಾಹಿತ್ಯಿಕ ಪುಸ್ತಕಗಳುಳ್ಳ ಗ್ರಂಥಾಲಯ. ಯೋಗ -ಧ್ಯಾನ ಮಂದಿರ. ಚಿತ್ರೋತ್ಸವ, ಸಂಗೀತ ,ನೃತ್ಯ ,ನಾಟಕೋತ್ಸವಕ್ಕಾಗಿ  ಸಭಾಂಗಣ. ಛಾಯಾಗ್ರಹಣ ,ಸಂಕಲನಕ್ಕಾಗಿ ಕೊಠಡಿಗಳು. ಪುಟ್ಟದೊಂದು ಸ್ಟುಡಿಯೋ . ಸುತ್ತಮುತ್ತ ಅತ್ಯುತ್ತಮ ಉದ್ಯಾನವನ . ಆಡಳಿತ ಕಚೇರಿ ಜೊತೆಗೆ ಎಲ್ಲ ನಿರ್ವಹಣೆಗಾಗಿ ಸಿಬ್ಬಂದಿ . ಇವಿಷ್ಟು ಸದ್ಯದಲ್ಲಿ ರೂಪುಗೊಂಡಿರುವ ಯೋಜನೆಗಳು. ಕಲಾತ್ಮಕವಾಗಿ ಕಟ್ಟುವ ಇರಾದೆಯಿಂದ ಇದಾಗಲೇ ಉತ್ತಮ ವಿನ್ಯಾಸಕರಿಗೆ ಸ್ಪರ್ಧೆ ಏರ್ಪಡಿಸಿದ್ದಾರೆ. ಆಯ್ಕೆ ಮಾಡುವುದಷ್ಟೇ ಬಾಕಿ ಉಳಿದಿದೆ. ಇನ್ನೆರಡು ವರುಷದಲ್ಲಿ ಸ್ಮಾರಕ ಸಿದ್ಧವಾಗುವ ಸಾಧ್ಯತೆ.vishnu-ambiಬದುಕಿದ್ದಾಗಲೂ ಅವನನ್ನ ನೆಮ್ಮದಿಯಾಗಿರಲು ಬಿಡಲಿಲ್ಲ ಈಗಲಾದರು ನೆಮ್ಮದಿಯಾಗಿ ಒಂದು ಕಡೆ ಇರೋದಿಕ್ಕೆ ಬಿಡಿ ಅಂತ ಜೀವದ ಗೆಳೆಯ ಅಂಬಿ ಕೇಳಿಕೊಂಡಂತೆ ಈಗಲಾದರೂ ಆಗಲಿ. ಸಂಪತ್ ಕುಮಾರ್ ವಿಷ್ಣುವರ್ಧನನಾಗಿ ಅರಳಿದ- ಆಳಿದ ಚಿತ್ರಗಳು, ಅಮೃತಘಳಿಗಳು ಅಳಿಯದಂತೆ ಉಳಿಸುವ ಸ್ಮಾರಕ ಇನ್ನಾದರೂ ನಿರ್ಮಾಣವಾಗಲಿ. ವಿಷ್ಣುವಿನ ನೆನಪು ಸಂಸ್ಕೃತಿಯಾಗಿ ಹಬ್ಬಲಿ.

-ಭಾನುಮತಿ ಬಿ ಸಿ

-Ad-

Leave Your Comments