ಸೆಂಚುರಿಗೌಡನ “ಹಳ್ಳಿಪಂಚಾಯಿತಿ”ಗೆ ಬಂದ್ರು ಗೀತಾ!

ಈ ಹಿಂದೆ ನವರಂಗಿ, ವಿನಾಶಿನಿ ಚಿತ್ರಗಳನ್ನು ನಿರ್ದೇಶಿಸಿದ್ದ ಜಿ.ಉಮೇಶ್ ಅವರ ಮತ್ತೊಂದು ಚಿತ್ರ ಹಳ್ಳಿ ಪಂಚಾಯಿತಿ. ಹಿರಿಯ ನಟಿ ಗೀತಾ ವಿಶೇಷ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಸಂಪೂರ್ಣವಾಗಿ ಗ್ರಾಮೀಣಪರಿಸರದ ಕಥಾನಕ ಹೊಂದಿದೆ. ಹಳ್ಳಿ ಪಂಚಾಯಿತಿ, ರಾಜಕೀಯ ಮುಂತಾದ ವಿಶೇಷಗಳನ್ನೊಳಗೊಂಡ ಈ ಚಿತ್ರವನ್ನು ಮಂಡ್ಯ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಇದೀಗ ಬಿಡುಗಡೆಗೆ ಸಿದ್ದವಾಗಿದೆ.

ಈ ಚಿತ್ರದಲ್ಲಿ ತಿಥಿ ಖ್ಯಾತಿಯ ಗಡ್ಡಪ್ಪ ಹಾಗೂ ಸೆಂಚುರಿಗೌಡ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಪ್ರೇಮ ಯುವರಾಜು ಕಥೆ, ಚಿತ್ರಕಥೆ ರಚಿಸಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಸಿ. ಮಹೇಂದ್ರನ್ ಛಾಯಾಗ್ರಹಣ, ಹರಿಕಾವ್ಯ ಸಂಗೀತ, ಮೋಹನ್ ಎಲ್ ರಂಗಕಹಳೆ ಸಂಕಲನ, ಡಾ|| ದೊಡ್ಡರಂಗೇಗೌಡ ಸಾಹಿತ್ಯ, ನಾಗೇಂದ್ರ ಆರಾಧ್ಯ ಸಂಭಾಷಣೆ, ಸುರೇಶ್ ನ್ಯತ್ಯ ನಿರ್ದೇಶನವಿದೆ.

ಗಡ್ಡಪ್ಪ, ಸೆಂಚುರಿ ಗೌಡ, ಗೀತಾ, ಪ್ರೇಮ ಯುವರಾಜು, ಅಭಿ, ಮೇಘನಾಗೌಡ, ಬೌಬೌ ಜಯರಾಂ, ವೈಷ್ಣವಿ, ಮಾ|| ಭಾರ್ಗವ ಇನ್ನು ಮುಂತಾದವರ ತಾರಾಬಳಗವಿದೆ.

ಟಿ.ಸತ್ಯನಾರಾಯಣರಾವ್ ನಿರ್ಮಾಣದ ಚಿತ್ರಕ್ಕೆ ಸ್ಮೈಲ್ ಶ್ರೀನು ಆಕ್ಷನ್-ಕಟ್ ಹೇಳಿದ್ದಾರೆ. ಈ ಹಿಂದೆ ತೂಫಾನ್ ಹಾಗೂ ಬಳ್ಳಾರಿ ದರ್ಬಾರ್ ಎಂಬ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಇದೀಗ ಸದ್ದಿಲ್ಲದೆ ಮತ್ತೊಂದು ಕನ್ನಡ ಚಿತ್ರದ ಕೆಲಸಗಳನ್ನು ಆರಂಭಿಸಿದ್ದಾರೆ. ತೆಲುಗಿನ ಹೆಸರಾಂತ ನಿರ್ಮಾಪಕ ಟಿ. ರಾಮಸತ್ಯನಾರಾಯಣರಾವ್ ಅವರು ಈ ವರ್ಷ 2 ಸಿನಿಮಾ ಪ್ರಾಜೆಕ್ಟ್‍ಗಳನ್ನು ಸದ್ಯದಲ್ಲೇ ಆರಂಭಿಸಲಿದ್ದಾರೆ. ಅದರಲ್ಲೊಂದು ಚಿತ್ರವನ್ನು ಸ್ಮೈಲ್ ಶ್ರೀನು ನಿರ್ದೇಶಿಸಲಿದ್ದಾರೆ. ಟಿ. ಸತ್ಯನಾರಾಯಣರಾವ್ ಅವರು ಸುಮಾರು 85ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಎಂದಿನಂತೆ ಈ ಬಾರಿಯೂ ಒಂದಷ್ಟು ಹೊಸ ಪ್ರತಿಭೆಗಳನ್ನು ಈ ಚಿತ್ರದ ಮೂಲಕ ಬೆಳ್ಳೆತೆರೆಗೆ ಪರಿಚಯಿಸುವ ಸಾಹಸಕ್ಕೆ ಕೈಹಾಕಿರುವ ಸ್ಮೈಲ್ ಶ್ರೀನು, ಅಭಿರಾಮ್ ಹಾಗೂ ರಿಷಿ ತೇಜ ಅವರಿಗೆ ತಮ್ಮ ಹೊಸ ಚಿತ್ರದ ಮೂಲಕ ಅವಕಾಶ ನೀಡುತ್ತಿದ್ದಾರೆ. ಈ  ಇಬ್ಬರೂ ನಾಯಕರ ಜೊತೆ ಆರ್‍ಎಕ್ಸ್ ಸೂರಿ ಹಾಗೂ ಕ್ರಾಕ್ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಬೆಡಗಿ ಆಕಾಂಕ್ಷ, ಡ್ಯುಯೆಟ್ ಹಾಡಲು ಅಣಿಯಾಗಿದ್ದಾರೆ. ಇದರ ಜೊತೆಗೆ ತೆಲುಗು ಚಿತ್ರರಂಗದ ಹೆಸರಾಂತ ಕಲಾವಿದ ಹಾಗೂ ಕನ್ನಡಿಗ ಸುಮನ್ ಅವರೂ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಹರೆಯದ ಹೃದಯಗಳ ಮಿಡಿತವನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾದ ಸದಭಿರುಚಿಯ ಕಥಾನಕವನ್ನು ಹೆಣೆದಿರುವ ನಿರ್ದೇಶಕ ಸ್ಮೈಲ್ ಶ್ರೀನು, ಇದೇ ಜೂನ್ ತಿಂಗಳಲ್ಲಿ ಈ ಚಿತ್ರವನ್ನು ಆರಂಭಿಸಲಿದ್ದಾರೆ. ಚಿತ್ರದ ಬಗ್ಗೆ ಉಳಿದ ವಿವರಗಳು ಹಾಗೂ ಚಿತ್ರದ ಶೀರ್ಷಿಕೆಯನ್ನು ಕೂಡ ಮುಹೂರ್ತದ ದಿನದಂದೇ ಪ್ರಕಟಿಸುವುದಾಗಿ ನಿರ್ದೇಶಕ ಸ್ಮೈಲ್ ಶ್ರೀನು ಅವರು ಹೇಳಿದ್ದಾರೆ.

-Ad-

Leave Your Comments