ಮಗನಿಗಾಗಿ ಬೀದಿಗಿಳಿದ ನಟಿ

ಬಹಳಷ್ಟು ಕಲಾವಿದರು ಹಣಕಾಸು ತೊಂದರೆಯಿಂದ ಬೀದಿಗೆ ಬೀಳುವುದೋ ಅಥವಾ ಇನ್ನೇನೋ ಕೆಲಸಗಳನ್ನು ಮಾಡುತ್ತಾ, ಕೆಲವರು ಬಾಳ ಬಂಡಿ ದೂಡಲಾಗದೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಈ ನಟಿ ಮಾತ್ರ ಆಗಲ್ಲ. ಸಾಲ ತೀರಿಸಲು ಬೇರೊಂದು ಉಪಕಸುಬನ್ನು ಮಾಡುತ್ತಿದ್ದಾರೆ. ಇವರ ಹೆಸರು ಕವಿತಾ ಲಕ್ಷ್ಮಿ. ಮಲಯಾಳಂ ಕಿರುತೆರೆ ನಟಿ.
ಬೆಳಗ್ಗೆ ಎಲ್ಲಾ ಬಣ್ಣ ಹಚ್ಚುವ ಇವರು ಸಂಜೆಯಾಗುತ್ತಿದ್ದಂತೆ ರಸ್ತೆ ಬದಿಯಲ್ಲಿ ತಿಂಡಿ ಮಾರಿ ಜೀವನ ಸಾಗಿಸುತ್ತಿದ್ದಾರೆ. ಈ ಬಗ್ಗೆ ಕವಿತಾ ಅಭಿಮಾನಿಗಳು ಆಕೆಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಮಾಲಿವುಡ್‌ನಲ್ಲಿ ಸಂಚಲನ ಉಂಟು ಮಾಡಿದೆ.
ಕವಿತಾಗೆ ಇಬ್ಬರು ಮಕ್ಕಳಿದ್ದು ಟ್ರಾವೆಲ್ ಏಜೆನ್ಸಿಯೊಬ್ಬರನ್ನು ಭೇಟಿಯಾದಾಗ ಮಗನನ್ನು ಯುಕೆಯಲ್ಲಿ ಓದಿಸಿ ಅಲ್ಲೇ ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಗಂಟೆಗೆ 10 ಪೌಂಡ್ ಸಂಪಾದಿಸಬಹುದು ಎಂದು ಸಲಹೆ ನೀಡಿದ್ದನಂತೆ. ಆ ಪ್ರಕಾರ ಅವರು ಮಗನನ್ನು ಯುಕೆಗೆ ಕಳುಹಿಸಿದ್ದರು. ಆದರೆ ಟ್ರಾವೆಲ್ ಏಜೆನ್ಸಿ ಹೇಳಿದಂತೆ ಅಂತಹ ಆದಾಯ ಏನೂ ಇಲ್ಲದೆ, ಇವರೇ ಇಲ್ಲಿಂದ ತಿಂಗಳಿಗೆ ಲಕ್ಷ ರೂ. ಕಳುಹಿಸಬೇಕಾಗಿ ಬಂದಿತ್ತು.
ಬಳಿಕ ಮಗನನ್ನು ಅಲ್ಲಿಂದ ವಾಪಸ್ ಕರೆಸಿಕೊಂಡಿದ್ದರು. ಇದಾಗ ಬಳಿಕ ಗ್ರಾನೈಟ್ ಶೋ ರೂಂ ಒಂದನ್ನು ಆರಂಭಿಸಿ ಕೈಸುಟ್ಟುಕೊಂಡಿದ್ದರು. ಕಡೆಗೆ ಸಾಲದ ಬಾಬತ್ತು ಜಾಸ್ತಿಯಾಗಿ ಇದೀಗ ಸಾಲ ತೀರಿಸಲು ಸಂಜೆ ಹೊತ್ತು ರಸ್ತೆ ಬದಿಯಲ್ಲಿ ತಿಂಡಿ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. ನೆಯ್ಯಾಂಟ್ಟಿಗರದ ನಿಮ್ಸ್ ಆಸ್ಪತ್ರೆ ಬಳಿ ಅವರು ವ್ಯಾಪಾರ ಸಾಗುತ್ತಿದೆ.
-Ad-

Leave Your Comments