ಐಂದ್ರಿತಾ ಮತ್ತು ದಿಗಂತ್ ಮದ್ವೆ ಆಗ್ತಾರಾ?

ಪ್ರೇಮದ ವಿಷ್ಯ ಬ್ಯಾಡವೋ ಶಿಷ್ಯ
 ನಿಜ ಈ ಪ್ರೀತಿ ಎಲ್ಲಿ ?ಯಾವಾಗ ? ಯಾರ ಎದೆಯೊಳಗೆ ಹುಟ್ಟುತ್ತೆ ಅಂತ ಈ ಭೂಮಿ ಮೇಲಿರೋ ಯಾರೂ ಭವಿಷ್ಯ ಹೇಳೋಕ್ಕಾಗಲ್ಲ ಬಿಡಿ. ಆದರೆ ಹುಟ್ಟಿದ ಮೇಲೆ ಎಷ್ಟೇ ಮುಚ್ಚಿಟ್ಟರು ವಾಸನೆ ಬಡಿದೆ ಇರೋಲ್ಲ. ನಮ್ಮದೇ ಇರಲಿ ,ಬೇರೆಯವರದೇ ಇರಲಿ ಪ್ರೀತಿ_ಪ್ರೇಮದ  ವಿಷ್ಯ ಕೇಳಿದ್ರೆ ಒಂಥರಾ ಪುಳಕ! ಘಮ್ ಅಂತಿರೋ ಸುದ್ದಿನ ಜುಂ ಅಂತ ಓದ್ಕೋoಬಿಡಿ.
ಸ್ಕ್ರೀನ್ ಹಂಚಿಕೊಂಡವರು ಬದುಕು ಹಂಚಿಕೊಳ್ಳುವುದು ಅಪರೂಪವೇನಲ್ಲ. ಅದ್ಯಾವುದೋ ಸೆಟ್ಟಲ್ಲಿ ಸಡನ್ನಾಗಿ ಪ್ರೀತಿ ಹುಟ್ಟಿ , ಮತ್ಯಾವುದೋ ಊರಲ್ಲಿ ಪ್ರೇಮ ನಿವೇದನೆಯಾಗಿ ಒನ್ ಫೈನ್ ಡೇ ಸಪ್ತಪದಿ ತುಳಿದ ಹೀರೋ ಹೀರೋಯಿನ್ ಗಳು ಸಾಕಷ್ಟಿದ್ದಾರೆ. ಅವರ ಸಾಲಿಗೆ ಐಂದ್ರಿತಾ ಮತ್ತು ದಿಗಂತ್ ಸೇರುತ್ತಾರೆ ಅನ್ನೋ ಸುದ್ದಿ ಬಹಳ ದಿನಗಳಿಂದಲೂ ಚಾಲ್ತಿಯಲ್ಲಿದೆ.
aindrita rai diganth
ಆದರೆ ಈ ವಿಷಯದಲ್ಲಿ ಅವರಿಬ್ಬರದು ದಿವ್ಯ ಮೌನ!  ಕಾಲೇಜಿನ  ಕಲರ್ ಕಲರ್ ಲೈಫ್ ನಲ್ಲಿರೋ ಪ್ರೇಮಿಗಳು ಗುಟ್ಟು ಬಿಡದೆ , ನಾವಿಬ್ರು ಬೆಸ್ಟ್ ಫ್ರೆಂಡ್ಸು ಅಂತಾರಲ್ಲ, ಹಾಗೇ ಇದ್ದಾರೆ. ಹೇಳಲೊಲ್ಲರು. ತಿರಸ್ಕರಿಸಲೊಲ್ಲರು.
diganth aindrita (2)
ಈ ಮಧ್ಯೆ ಆಗಾಗ ಕೈಕೈ ಹಿಡ್ಕೊಂಡು, ಪ್ರೇಮಗೀತೆಗಳನ್ನು  ಹಾಡಿಕೊಂಡು ಥ್ಯಾಂಕ್ಸ್ ಹೇಳಿ ವಯಸ್ಸಿಗೆ ಅಂತ ಖುಷಿಖುಷಿಯಲ್ಲಿದ್ದಾರೆ  ಅನ್ನೋದನ್ನ  ಅವರ ಫೋಟೋಗಳಿಂದಲೇ ನೀವು ಅರ್ಥ ಮಾಡಿಕೊಳ್ಳಬಹುದು.
ಪದಗಳು ಹೇಳದ್ದನ್ನು ಫೋಟೋ ಹೇಳುತ್ತೆ  ಅಂತ ಅನುಭವಸ್ಥರು ಹೇಳ್ತಾರೆ . ಅದು ಸತ್ಯ. ಬೇಕಾದರೆ ನೀವೇ ಫೋಟೋ ನೋಡಿ. ಫೋಟೋ ಹೇಳುವ ಕತೆಯನ್ನು ಅರ್ಥ ಮಾಡಿಕೊಳ್ಳಿ. ಅವರಿಬ್ಬರು ಸಂತೋಷವಾಗಿರಲಿ  ಅಂತ ಹಾರೈಸಿ.
-Ad-

Leave Your Comments