ಶಶಾಂಕ್ ಸಿನಿಮಾಸ್ ನಲ್ಲಿ ತಾಯಿಯಾಗಿ ಬರುತ್ತಿದ್ದಾರೆ ಸುಮಲತಾ ಅಂಬರೀಷ್

ಶಶಾಂಕ್ ಸಿನಿಮಾಸ್ ನಿರ್ಮಾಣ ಮಾಡುತ್ತಿರುವ ಅಜಯ್ ರಾವ್ ಅಭಿನಯದ 25 ನೇ ಚಿತ್ರ “ತಾಯಿಗೆ ತಕ್ಕ ಮಗ” ಚಿತ್ರದಲ್ಲಿ ತಾಯಿಯ ಪಾತ್ರವನ್ನು ಸುಮಲತಾ ಅಂಬರೀಶ್ ಅವರು ನಿರ್ವಹಿಸಲಿದ್ದಾರೆ.

ಅಜಯ್ ರಾವ್ ಅಭಿನಯದ ಮೊದಲ ಚಿತ್ರ “ಎಕ್ಸ್ ಕ್ಯೂಸ್ ಮಿ” ಯಲ್ಲೂ ಸುಮಲತಾರವರು ತಾಯಿಯ ಪಾತ್ರ ನಿರ್ವಹಿಸಿದ್ದರು. ಈಗ ಈ ಚಿತ್ರದಲ್ಲೂ ಅಭಿನಯಿಸುತ್ತಿರೋದು ವಿಶೇಷ. ಚಿತ್ರವನ್ನು ಹೊಸ ನಿರ್ದೇಶಕ ವೇದ್ ಗುರು ನಿರ್ದೇಶಿಸಲಿದ್ದು, ಜುಡಾ ಸ್ಯಾಂಡಿ ಸಂಗೀತ ಮತ್ತು ಶೇಖರ್ ಚಂದ್ರು ಛಾಯಾಗ್ರಹಣ ಮಾಡಲಿದ್ದಾರೆ.
ಇದೇ ವಾರದಲ್ಲಿ ನಾಯಕಿಯ ಆಯ್ಕೆಯೂ ಅಂತಿಮಗೊಳ್ಳಲಿದ್ದು ಚಿತ್ರದ ಚಿತ್ರೀಕರಣ ಡಿಸೆಂಬರ್ ಎರಡನೇ ವಾರದಲ್ಲಿ ಆರಂಭವಾಗಲಿದೆ ಎನ್ನುತ್ತಿದೆ ಚಿತ್ರತಂಡ.

ಅಂದಹಾಗೆ ಪುನೀತ್ ಅಭಿನಯದ ದೊಡ್ಮನೆ ಹುಡುಗ ಚಿತ್ರದಲ್ಲೂ ಸುಮಲತಾ ಅವರು ಪುನೀತ್ ಅವರಿಗೆ ತಾಯಿಯಾಗಿ ಅಭಿನಯಿಸಿದ್ದರು.

-Ad-

Leave Your Comments