ಅಪಾಯದಿಂದ ಪಾರಾದ ಅರ್ಜುನ್ ಜನ್ಯ

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ವಲ್ಪ ಅಂತರದಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನ ಫೋರಂ ಮಾಲ್ ನಲ್ಲಿ ಏರ್ಪಡಿಸಲಾಗಿದ್ದ ಮ್ಯೂಸಿಕಲ್ ಕನ್ಸರ್ಟ್  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಬೈಕ್ ಕ್ರಾಕರ್ಸ್ ಬೆಂಕಿ ಹೊತ್ತಿಕೊಂಡಿತು. ಈ ಅವಘಡದ ವೇಳೆ ಜನ್ಯ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಮೆಕ್ ಡಾವೆಲ್ ಕಂಪನಿ ಪ್ರಾಯೋಜಿತ ಮ್ಯೂಸಿಕಲ್ ಕನ್ಸರ್ಟ್ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಪಾಲ್ಗೊಂಡಿದ್ದರು. ವೇದಿಕೆಯತ್ತ ಬೈಕ್ ಏರಿ ಬರುವ ವೇಳೆ ಬೈಕ್ ನ ನಾಲ್ಕು ಸುತ್ತಲೂ ಕ್ರಾಕರ್ಸ್ ಉರಿಸಲಾಗಿತ್ತು. ಅರ್ಜುನ್ ಬೈಕಿನಿಂದ ಇಳಿಯುವ ವೇಳೆ ಕ್ರಾಕರ್ಸ್ ಕಿಡಿಗಳು ಭುಜಕ್ಕೆ ಮತ್ತು ಕೈಗೆ ತಾಗಿದ್ದು ಕರಟಿದ ಗಾಯಗಳಾಗಿದ್ದು, ಈ ನಡುವೆಯೂ ಜನರ ಮನರಂಜಿಸಿ, ಹೆಜ್ಜೆ ಹಾಕಿದ್ದಾರೆ. ಬಳಿಕ ಪ್ರಥಮ ಚಿಕಿತ್ಸೆ ಪಡೆದು ಕಾರ್ಯಕ್ರಮದಲ್ಲಿ ಮುಂದುವರಿಸಿ ಜನರೊಂದಿಗೆ ಕುಣಿದಿದ್ದಾರೆ. ಬಳಿಕ ಅರ್ಜುನ್ ಜನ್ಯ ಜನರು‌ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ನಂತರ ಕ್ರಾಕರ್ಸ್ ಕಿಡಿ ಜನ್ಯ ಕೈಗೆ ತಾಗಿದೆ ಅನ್ನೋದು ಗೊತ್ತಾಗಿದೆ.

-Ad-

Leave Your Comments