ಪುನೀತ್ ರಾಜ್’ಗೆ ಪವರ್ ಫುಲ್ ಚಿತ್ರ ನೀಡಲಿದ್ದಾರೆ ನಟ ಅಕ್ಷಯ್ ಕುಮಾರ್!

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್'ಗೂ ಕನ್ನಡ ಚಿತ್ರಕ್ಕೂ ಅವಿನಾಭಾವ ಸಂಬಂಧವಿರುವುದು ಗೊತ್ತಿರುವ ವಿಷಯ. ಈ ಸಿನಿಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಬಾಲಿವುಡ್ ಕಿಲಾಡಿ ಇಚ್ಛಿಸಿದ್ದಾರೆ.

 

೧೯೯೩ರಲ್ಲಿ ತೆರೆಕಂಡ ‘ವಿಷ್ಣು-ವಿಜಯ’ ಚಿತ್ರದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್’ರೊಂದಿಗೆ ಬಾಲಿವುಡ್ ಕಿಲಾಡಿ ಮೊದಲ ಬಾರಿ ಕನ್ನಡದಲ್ಲಿ ಬಣ್ಣಹಚ್ಚಿದ್ದರು ಅಕ್ಷಯ್.

ಸದ್ಯ ಬಿಟೌನ್’ನ ಟಾಪ್ ನಟರಲ್ಲಿ ಒಬ್ಬರಾಗಿರುವ ಅಕ್ಷಯ್ ಕುಮಾರ್ ಚಿತ್ರ ನಿರ್ಮಾಣದತ್ತ ಮುಖ ಮಾಡಿದ್ದಾರೆ. ಅದರಲ್ಲೂ ಅಕ್ಕಿ ಸೌತ್ ಚಿತ್ರರಂಗದ ಬಾಕ್ಸಾಫೀಸ್ ಬೇಟೆಗೆ ಮುಂದಾಗಿದ್ದಾರೆ.

ಹರಿ ಓಂ ಎಂಟರ್ಟೈನ್ಮೆಂಟ್ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿರುವ ಬಾಲಿವುಡ್ ‘ಗಬ್ಬರ್’ ಮೊದಲ ಸಿನೆಮಾವನ್ನು ಕನ್ನಡದಲ್ಲಿ ನಿರ್ಮಿಸಲು ಮುಂದಾಗಿರುವುದು ಅಚ್ಚರಿ ಮತ್ತು ಸಂತೋಷದ ಸುದ್ದಿ.

ಇನ್ನೂ ಟೈಟಲ್ ಫಿಕ್ಸ್ ಮಾಡದ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಪವರ್ ಪ್ಯಾಕ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಲಿರುವುದು ಚಿತ್ರದ ಬಗ್ಗೆ ಮತ್ತಷ್ಟು ಕ್ಯೂರಿಯಸಿಟಿ ಸೃಷ್ಟಿಗೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಚೆನ್ನೈಯಲ್ಲಿ ರೋಬೊ೨ ಚಿತ್ರದ ಸೆಟ್’ನಲ್ಲಿ ಅಕ್ಷಯ್ ಕುಮಾರ್ ಮತ್ತು ಅಪ್ಪು ಭೇಟಿಯ ಚಿತ್ರಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿ ಅಭಿಮಾನಿಗಳಲ್ಲಿ ಈ ಭೇಟಿಯ ಅಸಲಿ ಕಹಾನಿಯೇನು ಎಂಬ ಪ್ರಶ್ನೆ ಮೂಡಿಸಿತ್ತು.

akshaykumar-puneeth-rajkumar

ಈಗ ಎಲ್ಲಾ ಕುತೂಹಲಕ್ಕೂ ನಟ ಅಕ್ಷಯ್ ಕುಮಾರ್ ತೆರೆ ಎಳೆದಿದ್ದಾರೆ. ಅಲ್ಲದೆ ಈ ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಿಸಲಿದ್ದಾರೆ. ಇಲ್ಲಿ ಅಪ್ಪು ನಾಯಕನಾದರೆ ಬಾಲಿವುಡ್’ನಲ್ಲಿ ಸಿಂಗ್ ಇಸ್ ಕಿಂಗ್ ಅಕ್ಷಯ್ ಕುಮಾರ್ ಕಮಾಲ್ ಮಾಡಲಿದ್ದಾರೆ.

ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿಯೆಂದರೆ ಈ ಮಲ್ಟಿ ಸ್ಟಾರ್’ಗಳ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿರೊದು ಮತ್ಯಾರು director-nanda-kishoreಅಲ್ಲ ‘ಅಧ್ಯಕ್ಷ’ರು.

ಅರ್ಥಾತ್ ಸ್ಯಾಂಡಲ್ ವುಡ್ ನಿರ್ದೇಶಕ ನಂದಕಿಶೋರ್.ವಿಕ್ಟರಿ, ಅಧ್ಯಕ್ಷ ಮತ್ತು ರನ್ನ ಚಿತ್ರಗಳ ಸೂಪರ್ ಸಕ್ಸಸ್’ನ ಅಲೆಯಲ್ಲಿರುವ ನಂದಕಿಶೋರ್ ಈ ದ್ವಿಭಾಷಾ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಂದಹಾಗೆ ಕನ್ನಡದ ನಿರ್ದೇಶಕರೊಬ್ಬರು ಬಾಲಿವುಡ್ ಚಿತ್ರವನ್ನು ನಿರ್ದೇಶಿಸಲಿರುವುದು ಪಕ್ಕಾ ಆದಂಗಾಯ್ತು.

 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೊಡ್ಮನೆ ಹುಡ್ಗ ಮತ್ತು ರಾಜಕುಮಾರ ಚಿತ್ರಗಳಲ್ಲಿ ಬಿಝಿಯಾಗಿದ್ರೆ ಅತ್ತ ಅಕ್ಷಯ್ ಕುಮಾರ್ ರೊಬೊ೨, ಹೇರಾಪೇರಿ೩ ಚಿತ್ರಗಳತ್ತ ಗಮನ ನೀಡುತ್ತಿದ್ದಾರೆ. ಇನ್ನೊಂದೆಡೆ ನಿರ್ದೇಶಕ ನಂದ ಕಿಶೋರ್ ‘ಟೈಗರ್’ನ ಓಡಿಸುತ್ತಿದ್ದಾರೆ.

ಒಟ್ನಲ್ಲಿ ಈ ಮೂವರ ಸಕ್ಸಸ್’ಫುಲ್ ಕಾಂಬಿನೇಷನ್’ನ್ನು ತೆರೆಮೇಲೆ ನೋಡಲು ಸಿನಿಪ್ರಿಯರು ೩೦೧೭ರ ತನಕ ಕಾಯಬೇಕಿದೆ.

ಅಂದಹಾಗೆ ಈ ಚಿತ್ರದ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್’ವುಡ್ಡಿಂದ ಬಾಲಿವುಡ್’ಗೆ ಹಾರಲಿದ್ದಾರಾ..?

ಇನ್ನೂ ಹೆಚ್ಚಿನ ಸುದ್ದಿಗಳಿಗಾಗಿ ಸ್ಟೇ ವಿತ್ ಸಿನಿಅಡ್ಡ

 

 

* ಕಪ್ಪು ಮೂಗುತಿ

-Ad-

Leave Your Comments