ಬಾಲಿವುಡ್ ‘ಕೋಟಿಗೊಬ್ಬ’ ಕಿಲಾಡಿ ಅಕ್ಷಯ್

ಬಾಲಿವುಡ್’ನಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಆ್ಯಕ್ಷನ್-ಕಿಲಾಡಿ ಅಕ್ಷಯ್ ಕುಮಾರ್ ಬಿಟೌನ್’ನ ಕೋಟಿಗೊಬ್ಬನಾಗಿ ಮೆರೆದಿದ್ದಾರೆ.

2012ರ ರೌಡಿ ರಾಥೋಡ್ ಚಿತ್ರದೊಂದಿಗೆ ಬಾಕ್ಸಾಫೀಸ್’ನಲ್ಲಿ ಕೋಟಿಯಾಟ ಆರಂಭಿಸಿದ ಬಾಲಿವುಡ್ ಕಿಲಾಡಿ ಭಾರತೀಯ ಸಿನಿರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಅಕ್ಷಯ್ ಅಭಿನಯದ ರುಸ್ತುಂ ಚಿತ್ರ 100ಕೋಟಿ ಕಲೆಕ್ಷನ್ ಮಾಡುವ ಮೂಲಕ ತಮ್ಮ ಸಿನಿ ಕೆರಿಯರ್’ನಲ್ಲಿ 3000ಕೋಟಿ ನೆಟ್ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ಏಕೈಕ ನಟನೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 25 ವರ್ಷಗಳ ಚಿತ್ರ ವಿಚಿತ್ರ ವೇಷಗಳಲ್ಲಿ ‘ಕಿಲಾಡಿ’ ನಟ ಒಟ್ಟು 108 ಸಿನೆಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ರುಸ್ತುಂ ಚಿತ್ರವು ಅಕ್ಕಿಯ 108ನೇ ಚಿತ್ರವಾಗಿದೆ. ಈ ಚಿತ್ರದ ಬಾಕ್ಸಾಫೀಸ್ ಆರ್ಭಟ ಮುಂದುವರಿದ್ದು ಒಟ್ಟು 3010ಕೋಟಿ ರೂ. ಅಕ್ಷಯ್ ನಿರ್ಮಾಪಕರ ಜೇಬಿಗಿಳಿಸಿದ್ದಾರೆ.

ಬಾಲಿವುಡ್’ನ ಈ ಹೊಸ ದಾಖೆಯನ್ನು ಮುರಿಯಲು ಖಾನ್ ತ್ರಯರು ಹಿಂದೆ ಬಿದ್ದಿದ್ದಾರೆ. ಬಿಟೌನ್ ಭಾಯಿಜಾನ್ ಸಲ್ಮಾನ್ ಖಾನ್’ಗೆ 3000 ಕೋಟಿ ಕ್ಲಬ್ ಸೇರಲು ಒಂದೇ ಚಿತ್ರದ ಸಾಕಾಗಿದೆ ಎನ್ನಲಾಗುತ್ತಿದೆ. ಸಲ್ಲು ಭಾಯ್ ಒಟ್ಟು 71 ಚಿತ್ರಗಳ ಮೂಲಕ 2928ಕೋಟಿ ಗಳಿಸಿದ್ದಾರೆ. ಹಾಗೆಯೇ ಕಿಂಗ್ ಖಾನ್ ಶಾರೂಕ್ 71 ಚಿತ್ರದೊಂದಿಗೆ 2100ಕೋಟಿ ಬಾಚಿದ್ದಾರೆ. 39 ಚಿತ್ರಗಳಲ್ಲಿ ಅಭಿನಯಿಸಿರುವ ಬಾಲಿವುಡ್’ನ ಮಿಸ್ಟರ್ ಫರ್ಫೆಕ್ಸನಿಷ್ಟ್ ಅಮೀರ್ ಖಾನ್ 1497ಕೋಟಿ ನೆಟ್ ಬಾಕ್ಸಾಫೀಸ ಕಲೆಕ್ಷನ್ ಮಾಡುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಬಿಟೌನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರಗಳ ಪಟ್ಟಿಯಲ್ಲಿ ಅಕ್ಷಯ್ ಅಭಿನಯಿಸಲಿರುವ ‘ಟಾಯ್ಲೆಟ್, ಜಾಲಿ ಎಲ್.ಎಲ್.ಬಿ 2, ಕ್ರಾಕ್ ಸ್ಥಾನ ಪಡೆದಿದೆ. ಹಾಗೆಯೇ ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಅನಿಯನ್ ಶಂಕರ್ ಜೋಡಿಯ ರೋಬೊ2 ಚಿತ್ರದಲ್ಲಿ ಅಕ್ಷಯ್ ಕುಮಾರ್ ವಿಲನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಚಿತ್ರಗಳು ಬ್ಯಾಕ್ ಟು ಬ್ಯಾಕ್ ತೆರೆಗೆ ಬರಲಿದ್ದು, ಹೀಗಾಗಿ ಅಕ್ಕಿಯ ಬಾಕ್ಸಾಫೀಸ್ ಕಲೆಕ್ಷನ್ ನಾಗಾಲೋಟ ಮುಂದುವರಿಯಲಿದೆ ಎಂಬ ಮಾತು ಬಾಲಿವುಡ್’ನಿಂದ ಕೇಳಿ ಬರುತ್ತಿದೆ.maxresdefault

ಸದ್ಯ ಸಲ್ಮಾನ್ ಖಾನ್ ಮತ್ತು ಭಜರಂಗಿ ಭಾಯಿಜಾನ್ ನಿರ್ದೇಶಕ ಕಬೀರ್ ಖಾನ್ ‘ಟ್ಯೂಬ್ ಲೈಟ್’ನಲ್ಲಿ ಜೊತೆಗಿಯಾದ್ದಾರೆ. ಅತ್ತಕಡೆ ಅಕ್ಷಯ್ ಕುಮಾರ್ ಮತ್ತು ‘ಹಾಲಿಡೇ’ ಚಿತ್ರ ನಿರ್ದೇಶಕ ಮುರುಗದಾಸ್ ‘ಇಕ್ಕಾ’ದಲ್ಲಿ ಒಂದುಗೂಡಿದ್ದಾರೆ. ಅಕ್ಕಿ ಮತ್ತು ಸಲ್ಲುನ ಮುಂಬರುವ ಈ ಎರಡು ಚಿತ್ರಗಳು 3000 ಕೋಟಿಯ ನಂಬರ್ 1 ನಟ ಯಾರೆಂಬುದನ್ನು ನಿರ್ಧರಿಸಲಿದೆ ಎಂಬುದು ಸಿನಿಪಂಡಿತರ ಅಭಿಪ್ರಾಯ.

★ ಕಪ್ಪು ಮೂಗುತ್ತಿ

-Ad-

Leave Your Comments