ಈ ರೆಬಲ್ ಅಂಬಿಯನ್ನು 25 ವರ್ಷ ಸುಮಲತಾ ಸೈರಿಸಿಕೊಂಡಿದಾದ್ರು ಹೇಗೆ ?!

ರೆಬಲ್ ಸ್ಟಾರ್ ಅಂಬರೀಷ್ ಕೈ ಹಿಡಿಯಲು ಕನಸು ಕಂಡು ಕೈಚೆಲ್ಲಿ ಕೂತ ತರುಣಿಯರು ಅಪಾರ. ಚಿತ್ರರಂಗದ ಅನೇಕ ಹೆಸರಾಂತ ನಟಿಯರು ಅಂಬರೀಷ್ ಪತ್ನಿಯಾಗುವ ಪ್ರಯತ್ನ ನಡೆಸಿದ್ದುಂಟು. ಆದ್ರೆ ಅಂಬಿ ಒಲಿದದ್ದು  ರೂಪದಲ್ಲಿ ಮಾತ್ರವಲ್ಲ ಬುದ್ಹಿವಂತಿಕೆಯಲ್ಲೂ ಒಂದು ಕೈ ಮೇಲೆ ಅನ್ನಿಸುವ ಸುಮಲತಾರನ್ನ. 1991ರಲ್ಲಿ ಮದುವೆಯಾದ ಯಶಸ್ವಿ ದಾಂಪತ್ಯಕ್ಕೆ ಈಗ 25 ವರ್ಷಗಳ ಸಂಭ್ರಮ !!

ಅಂಬರೀಷ್ ಸುಮಲತಾ ಕೈ ಹಿಡಿದರು ಅನ್ನುವುದಕ್ಕಿಂತ  ಸುಮಲತಾ  ಕೈಹಿಡಿದ ಮೇಲೆ ಅಂಬಿ  ಬದುಕು ಸುಧಾರಿಸಿತು ಅಂತ ಹತ್ತಿರದಿಂದ ಬಲ್ಲವರು ಈಗಲೂ ಹೇಳುವುದುಂಟು. ಇವತ್ತಿನವರೆಗೂ ಅಂಬರೀಷ್ ಬಗ್ಗೆ ಎಂಥಾ ಸಮಯದಲ್ಲೂ ಸಾರ್ವಜನಿಕವಾಗಿ ಒಂದೇ ಒಂದು ಕೆಟ್ಟ ಮಾತಾಡದೆ ಸಂಸಾರದ  ಗುಟ್ಟುಗಳನ್ನು ಬಿಟ್ಟುಕೊಡದೆ, ಗೌರವ ಕಾಪಾಡಿಕೊಂಡಿರುವ ಪ್ರಬುದ್ಧ ಹೆಣ್ಣುಮಗಳು ಸುಮಲತಾ.

ambi-sambrama 60ನೇ ವರುಷದ ಹುಟ್ಟುಹಬ್ಬವನ್ನ ಅರಮನೆ ಮೈದಾನದಲ್ಲಿ  “ಅಂಬಿ ಸಂಭ್ರಮ” ವಾಗಿಸಿದ ರೂವಾರಿ ಸುಮಲತಾ. ಇಡೀ ಚಿತ್ರರಂಗದ ಇತಿಹಾಸದಲ್ಲಿ ಯಾವ ನಟನಿಗೂ ೬೦ ನೇ ವರ್ಷಕ್ಕೆ ಇಂಥದೊಂದು ಮಹೋತ್ಸವ ಸಾಧ್ಯವಾಗಿರಲಿಲ್ಲ. ಅಂಬರೀಷ್ ಇಷ್ಟು ವರ್ಷ ಏನೆಲ್ಲಾ ಸಂಪಾದಿಸಿದ್ದಾರೆ (ಜನರ ಪ್ರೀತಿ ) ಎನ್ನುವುದನ್ನು ಸ್ವತಃ ಅಂಬರೀಷ್ ಗೆ ತೋರಿಸಬೇಕು ಅನ್ನುವುದು ಸುಮಲತಾ ಆಸೆಯಾಗಿತ್ತಂತೆ. ಒಂದು ವರ್ಷ ಕಾಲ ಅದಕ್ಕಾಗಿ ಸಮಯ ಮೀಸಲಿಟ್ಟು , ಎಲ್ಲರನ್ನು ಒಗ್ಗೂಡಿಸಿ ಪದೇ ಪದೇ ಒಲ್ಲೇ .. ಎನ್ನುತ್ತಿದ್ದ ಅಂಬಿಯನ್ನೂ ಕಡೆಗೆ ಒಪ್ಪಿಸಿ ಇತಿಹಾಸ ನಿರ್ಮಿಸಿದ್ರು. ಅದು ಬಾಳ ಸಂಗಾತಿಗೆ ಸುಮಲತಾ ಕೊಟ್ಟ ಬಹುದೊಡ್ಡ ಉಡುಗೊರೆ !!

ambi-suma1

ಅಂಬರೀಷ್ ಆರೋಗ್ಯ ಹದಗೆಟ್ಟು  ಆಸ್ಪತ್ರೆ ಸೇರಿ, ಹೆಚ್ಚಿನ ಚಿಕಿತ್ಸೆಗೆ ಹೊರದೇಶಕ್ಕೆ ತೆರಳುವಾಗ ಅಭಿಮಾನಿಗಳಿಗೆ ಕೊಟ್ಟ ಮಾತು ಇವತ್ತಿಗೂ ಆಕೆಯನ್ನು ನೆನೆಯುವಂತೆ ಮಾಡುತ್ತದೆ. “ನಿಮ್ಮ ಅಂಬರೀಷ್ ನ ವಾಪಸ್ ನಿಮ್ಮ ಬಳಿ ಆರೋಗ್ಯವಂತರಾಗಿ ಕರ್ಕೊಂಡು ಬರ್ತೀನಿ . ಆತಂಕ ಪಡಬೇಡಿ”. ಚಿಕಿತ್ಸೆಗೆ ಹೋಗೋದಿಕ್ಕೆ ಅವಕಾಶ ಮಾಡಿಕೊಡಿ. ಕೊಟ್ಟ ಮಾತಿನಂತೆ ವಾಪಾಸ್ ಕರೆದುಕೊಂಡು ಬಂದು ಅಭಿಮಾನಿಗಳ ಮುಂದೆ ನಿಲ್ಲಿಸಿದ ದಿಟ್ಟ ಹೆಣ್ಣುಮಗಳು ಸುಮಲತಾ.

ಅಂಬರೀಷ್ ಹೆಸರಿನ ಜೊತೆ ಅನೇಕ ನಟಿಯರ ಹೆಸರು ಓಡಾಡುತ್ತಿದ್ದರು ಸುಮಲತಾ ಅಂಬಿಗೆ ಒಲಿದದ್ದು ಯಾಕೆ? ಯಶಸ್ವಿ ದಾಂಪತ್ಯದ ಗುಟ್ಟೇನು ? ಸುಮಲತಾ ಮಾತಿನಲ್ಲೇ ಹೇಳುವುದಾದ್ರೆ

sumalatha-and-husband-ambarish

ನಮ್ಮಿಬ್ಬಿರ ವ್ಯಕ್ತಿತ್ವ ಬೇರೆ ಬೇರೆ . ಅವರು ಎಲ್ಲರೊಡನೆ ಬೇಗಬೇಗನೆ ಬೆರೆಯುವ ಸ್ನೇಹಜೀವಿ. ನಾನು ಪರಿಚಯವಿದ್ದವರೊಂದಿಗೆ ಮಾತ್ರ ಬೆರೆಯುವಂತವಳು. opposite poles attract each other  ಆ ರೀತಿ ನಮ್ಮಿಬ್ಬರಿಗೂ ಆಗಿರಬಹುದು. ಅವರು ಶೂಟಿಂಗ್ ಸೆಟ್ ಗೆ ಬಂದ್ರೆ ಅಲ್ಲೊಂದು ಜೀವಂತಿಕೆ ತುಂಬಿಕೊಳ್ತಿತ್ತು. ಎಲ್ಲ ಕಡೆ ಲವಲವಿಕೆ !! ನಾನು ಮಾತ್ರ ಪೂರ್ತಿ ಸೈಲೆಂಟ್ . ಪುಸ್ತಕ ಓದ್ತಾ ಕೂತುಬಿಡ್ತಿದ್ದೆ. ಅವರಿಗೆ ಅಂಥಾ ಅಭ್ಯಾಸಗಳೇ ಇಲ್ಲ. ನನ್ನ ಮೌನ, ನನ್ನ ಪಾಡಿಗೆ ನಾನಿರುತ್ತಿದ್ದ ರೀತಿ ಅವರಿಗೆ ಇಷ್ಟವಾಗಿದೆ ಅಂತ ಆಮೇಲೆ ಗೊತ್ತಾಯ್ತು. 

ಸಿನಿಮಾ ಶೂಟಿಂಗ್ ವೇಳೆ ಬೇಕಾದಷ್ಟು ಅಡ್ಡಿ ಆತಂಕಗಳು ಬರುತ್ತವೆ.ವೆಹಿಕಲ್, ಪರ್ಮಿಶನ್ ಕಿರಿಕಿರಿ ಹೇಗೆ ಒಂದೆರಡಲ್ಲ ಇವರು ಅಲ್ಲಿದ್ದರೆ ತಾನು ನಟ ನನಗ್ಯಾಕೆ ಉಸಾಬರಿ ಅಂತೆಲ್ಲ ಯೋಚಿಸದೆ ಸಮಸ್ಯೆ ಪರಿಹಾರ ಮಾಡಿಬಿಡ್ತಿದ್ರು. ಪ್ರತಿಯೊಬ್ಬರೂ ತಮ್ಮ ತಮ್ಮ ಸ್ವಾರ್ಥ ನೋಡಿಕೊಳ್ಳುವ ಹೊತ್ತಲ್ಲಿ ಇವರು ಮಾತ್ರ ಹಿಂದೆ ಮುಂದೆ ನೋಡದೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡ್ತಿದ್ರು . ಇದನೆಲ್ಲಾ ಗಮನಿಸುತ್ತಾ ಇದ್ದ ನಾನು ಅವ್ರ ವ್ಯಕ್ತಿತ್ವಕ್ಕೆ ಮಾರುಹೋದೆ.

ambi-suma-marriage

8-10 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರೂ ಹತ್ತಿರವಾಗಿದ್ದು “ನ್ಯೂ ಡೆಲ್ಲಿ”ಚಿತ್ರದ ನಂತರ. ನಾವಿಬ್ಬರು ನಮ್ಮ ನಮ್ಮ ಮನಸ್ಸಿನ ಮಾತುಗಳನ್ನು ನೇರವಾಗಿ ಹಂಚಿಕೊಂಡೆವು. ಒಂದು ವರ್ಷ ಬಿಟ್ಟು ಮದುವೆ ಮಾಡಿಕೊಳ್ಳೋಣ ಅಂತ ನಾವಿಬ್ಬರು ಮಾತಾಡಿಕೊಂಡೆವು. ಆನಂತರ 1991ಡಿಸೆಂಬರ್ 8 ರಂದು ಹಿರಿಯರ ಒಪ್ಪಿಗೆ ಪಡೆದು ರಿಜಿಸ್ಟರ್ ಮದುವೆ ಮಾಡಿಕೊಂಡೆವು. ನಮ್ಮಿಬ್ಬರ ಪ್ರೀತಿಗೆ ನಾವೇ ಸೇತುವೆ. 

ವಿಪರೀತ ಕೋಪ 

ಕೋಪ ಬೇಗ ಬರೋದು ಎಷ್ಟು ನಿಜಾನೋ ಅಷ್ಟೇ ಬೇಗ ಹೊರಟು ಹೋಗತ್ತೆ. ಆಮೇಲೆ ನಾನ್ಯಾಕೆ ಅಷ್ಟು ಕೋಪ ಮಾಡ್ಕೊಂಡೆ ಅಂತ ಬೇಸರ ಮಾಡ್ಕೊಳ್ತಾರೆ. ಮನೆಯವರ ಹತ್ತಿರ ಮಾತ್ರ ಯಾವತ್ತು ಸಾರಿ ಕೇಳಲ್ಲ. ತನ್ನ ತಪ್ಪು ಅರ್ಥವಾಗಿದೆ ಅನ್ನೋದನ್ನ ಬೇರೆ ರೀತಿಯಲ್ಲಿ ತೋರಿಸುತ್ತಾರೆ. ಅವರ ಕೋಪವನ್ನು ಹೇಗೆ ಎದುರಿಸಬೇಕು ಅಂತ ನನಗೆ ನನ್ನ ಮಗನಿಗೆ ಚೆನ್ನಾಗಿ ಅರ್ಥವಾಗಿದೆ.

ambi-sumalatha

ನನಗೆ ಒಂದು ಸಣ್ಣ ನೋವಾದರೂ ಸಹಿಸಿಕೊಳ್ಳುವ ಶಕ್ತಿ ಅವರಿಗಿಲ್ಲ. ಜಗಳಗಳು ಬೇರೆ ವಿಷಯ. ಆದ್ರೆ ಮಲೇಶಿಯಾಗೆ ಹೋದಾಗಲೊಮ್ಮೆ ನನ್ನ ಕಾಲು ಉಳುಕಿದಾಗ ಅವರು ಪಟ್ಟ ಆತಂಕ, ಅವ್ರ ಕಣ್ಣೀರು ನಾನು ಯಾವತ್ತೂ ಮರೆಯಲಾರೆ. ನನ್ನ ಕುಟುಂಬವೇ ನನ್ನ ಸರ್ವಸ್ವ. 

ambi-family-new

ಅವರನ್ನೆಂದೂ ಸಂಪೂರ್ಣವಾಗಿ ಬದಲಾಯಿಸುವ ಗೋಜಿಗೆ ಹೋಗದೆ, ಅವರಿರುವಂತೆ ಅವರನ್ನು ಒಪ್ಪಿಕೊಂಡಿರುವುದೇ ನಮ್ಮ ದಾಂಪತ್ಯದ ಗುಟ್ಟು. 

ಚಿತ್ರರಂಗದ ಅನೇಕರು ಪ್ರೀತಿಸಿ ಮದುವೆಯಾದರು ಬೇರೆ ಬೇರೆ ಕಾರಣಗಳಿಂದ ದೂರಾಗಿ ಹೋದ, ಮರು ಮದುವೆಯಾದ ಸಾಕಷ್ಟು ಉದಾಹರಣೆಗಳಿವೆ. ಅವರೆಲ್ಲರ ನಡುವೆ ಎಲ್ಲ ಕುಟುಂಬಗಳಲ್ಲೂ ಬರುವ ಜಗಳ, ಮನಸ್ತಾಪಗಳನ್ನೆಲ್ಲ ಬದಿಗಿಟ್ಟು ಚಿತ್ರರಂಗದಲ್ಲಿ ಮಾದರಿಯಂತಿರುವ ಅಂಬರೀಷ್ -ಸುಮಲತಾ ದಾಂಪತ್ಯ ಸದಾ ಹಸಿರಾಗಿರಲಿ.

 

-Ad-

Leave Your Comments