ಸವಾರಿ ಮಾಡೋದು ಬೇಡ ಅಂದ್ರು ಅಂಬಿ

ಅಂತೂ ಇಂತೂ ಅರ್ಧಕ್ಕಾದ್ರೂ ಅಧಿವೇಶನಕ್ಕೆ ಬಂದ್ರು ಅಂಬರೀಷ್.ಅವ್ರನ್ನ ಬೆಂಬಲಿಸುವವರಿಗೆ ಇಷ್ಟು ಸಾಕು.

ಮಂಡ್ಯದ ಜನ ಮಾತಿನಲ್ಲಿ ಒರಟರಾದ್ರು ಮನಸ್ಸಿನಲ್ಲಿ ಮೃದು ಅನ್ನೋದನ್ನ ಮೊನ್ನೆಯಷ್ಟೇ ಸಾಬೀತು ಪಡಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಅಂಬರೀಷರ ಮೇಲಿನ ಕೋಪ ಮರೆತು ದೊಡ್ಮನೆ ಹುಡುಗ ಸಿನಿಮಾ ನೋಡಿದ್ದಾರೆ.
ಆಳುದ್ದ ಕಟೌಟ್ ನೋಡಿ ಸಂಭ್ರಮಿಸಿದ್ದಾರೆ.

ಕಾವೇರಿಯ ಹೋರಾಟದಲ್ಲಿ ಕಂಗೆಟ್ಟಾಗ ಕ್ಯಾರೇ ಅನ್ನದ ಅಂಬಿ ಮಾರ್ಲಾಮ್ಮಿ ಹೊತ್ತಿಗೆ ಮನೆ ನೆನಪು ಮಾಡಿಕೊಂಡು ಅಯ್ಯೋ “ಅಕ್ಕ”ನ ನೋಡಕ್ಕೆ ಹೋಗಿದ್ದೆ ಬರೋದು ತಡವಾಯ್ತು ಬ್ಯಾಸರ ಮಾಡ್ಕಬೇಡಿ ಅಂದ್ರಪ್ಪ. ತಪ್ಪು ಮಾಡದವ್ರ್ ಯಾರ್ ಅವ್ರೆ ತಪ್ಪೇ ಮಾಡದವ್ರ್ ಯಾರ್ ಅವ್ರೆ ಹಾಡು ನೆನಪಾಯ್ತೋ ಏನೂ ಮಂಡ್ಯದ ಜನ ಮನೆ ಮಗನ ತಪ್ಪನ್ನ ಹೊಟ್ಟೆಗೆ ಹಾಕೊಂಡು ಸದ್ಯಕ್ಕೆ ಸುಮ್ಮನಾಗಿದ್ದಾರೆ.

30ra ತೀರ್ಪು ನೋಡ್ಕೊಂಡು ಮಂಡ್ಯಕ್ಕೆ ಬರ್ತೀನಿ ಅಂದವರು 30 ಮುಗಿದು ಮೂರ್ ದಿನ ಕಳೆದ್ರೂ ಮಂಡ್ಯಕ್ಕೆ ಮುಖ ತೋರ್ಸಿಲ್ಲ.
ರೈತರ ಬೆಳೆಗೆ ನೀರು ಹರಿಸಲಿಕ್ಕೆ ವಿಶೇಷ ಅಧಿವೇಶನ ಕರೆದಾಗ ನಾ ಬಂದೆ ಅಂತ ಮುಂದಿರಬೇಕಿದ್ದ ಅಂಬರೀಷ್ ಅಧಿವೇಶನ ಶುರುವಾಗಿ ಅರ್ಧ ದಿವಸ ಆದಮೇಲೆ ಸದನಕ್ಕೆ ಕಾಲಿಟ್ಟಿದ್ದಾರೆ. ಆದರು ಕಾಳಜಿ ಇಂದ ಮಾತಾಡಿದ್ದಾರೆ ಕಾವೇರಿ ನೀರು ನಂಬಿರೋ ರೈತರು ಬೆಳೆ ಬೆಳೆಯೋಕೆ ಆಗತಾ ಇಲ್ಲ, ನೀರಿಲ್ಲ. ಹೆಂಡತಿಗೆ ಸೀರೆ ಕೊಡ್ಸಕ್ಕಾಗಲ್ಲ aಅವನು ಪಂಚೆ ತಗಳಕ್ಕೂ ಕಾಸಿಲ್ಲದ ಸ್ಥಿತಿ ಬಂದಿದೆ. ತಮಿಳು ನಾಡವರು ಬೇಕಿದ್ರೆ ಸಮುದ್ರ ಸೇರೋ ನೀರನ್ನ ಇನ್ನೊಂದು ಆಣೆಕಟ್ಟು ಕಟ್ಟಿ ಹಿಡಿದಿಟ್ಟು ಕೊಳ್ಳಲಿ.ನಮ್ ಮೇಲೆ ಸವಾರಿ ಮಾಡೋದಲ್ಲ. ಕಾವೇರಿ ನಿರ್ವಹಣಾ ಮಂಡಳಿ ಆಗ್ಬಾರ್ದು ನಮ ಮಹಾರಾಜರು ಒಡವೆ ಅ ಡ ಇಟ್ಟು ಡ್ಯಾಮ್ ಕಟ್ಟಿಸಿರೋದು ನಮ್ ಜನರಿಗೋಸ್ಕರ ಅದನ್ನ ಬೋರ್ಡ್ ಕೈಲಿ ಕೊಡೋಕ್ಕಾಗಲ್ಲ ಅಂತ ಖಡಕ್ಕಾಗಿ ಹೇಳಿ ಕೂತ್ರು.

ಒಟ್ಟಿನಲ್ಲಿ ಅಂಬರೀಷ್ ಕೊನೆಗಾದ್ರೂ ಬಂದ್ರಲ್ಲ ಅನ್ನೋದೇ ಅಭಿಮಾನಿಗಳಿಗೆ ಸಮಾಧಾನ.

“ದೊಡ್ಮನೆ ಹುಡುಗ”ನ ರಾಜೀವನಂತೆ ತಾನು ಬೆಳೆದು ಬಂದ ದಾರಿ ,ಬೆಳೆಸಿದವರನ್ನ ಮರೆಯದೆ ಮತ್ತೆ ನಮ್ ಜೊತೆಗೆ ನಿಂತು ರೈತರ, ಮತದಾರರ ಹಿತ ಕಾಯಲಿ ಅನ್ನುವುದು ನಮ್ಮ ಆಶಯ.

-Ad-

Leave Your Comments