ಚಳಿ ..ಚಳಿ .. ಹಾಡಿನ ಅಂಬಿಕಾ ಬಿಸಿ ಬಿಸಿ ಮಾತು ಇವತ್ತಿನ ಮಜಾಟಾಕೀಸ್ ನಲ್ಲಿ !

ಮಜಾ ಟಾಕೀಸ್ !!  ಕಲರ್ಸ್ ವಾಹಿನಿಯಲ್ಲಿ  ಶನಿವಾರ -ಭಾನುವಾರ ರಾತ್ರಿ ೮ ಕ್ಕೆ ಪ್ರಸಾರವಾಗುತ್ತಿದೆ. ಯಾರ್ ಏನ್ ಬೇಕಾದ್ರೂ ಹೇಳ್ಕೊಳ್ಳಿ ಮಂದಿಗೆ ಮಜಬೂತಾಗಿ ಮನೋರಂಜನೆ ಕೊಡ್ತಾ ಮಜಾ ಕೊಡೋದೇ ನಮ್ ಬ್ಯುಸಿನೆಸ್ಸು ಅಂತ ನಂಬಿ, ನೋಡುಗರ ಮನಗೆದ್ದಿರುವ ಕಾರ್ಯಕ್ರಮ.

ಸಿಕ್ಸರ್ ಮೇಲೆ ಸಿಕ್ಸರ್ ಹೊಡೆದೂ ..ಹೊಡೆದೂ ಭರ್ಜರಿ ಡಬಲ್ ಸೆಂಚುರಿ ಬಾರಿಸಿ , ಮೂರನೇ ಶತಕದ ಕಡೆಗೆ ದಾಪುಗಾಲು ಇಟ್ಕೊಂಡು ಓಡ್ತಾ ಇರೋ ಮಜಾ ಟಾಕೀಸ್ ನ ಸಾರಥಿ ಸೃಜನ್ !! ಸುರ್ ..ಅಂತ ಸುರಿಯುವ , ಒಮ್ಮೊಮ್ಮೆ ಚಟ್ ಪಟ್ ಪಟಾಕಿಯಂತೆ ಸಿಡಿಯುವ ಸೃಜನ್  ಮಾತಿಗೆ ಮನೆಗೆ ಬಂದ ಅತಿಥಿಗಳೂ ಮರುಳಾಗಿ  ಹೋಗಿದ್ದಾರೆ. ನಗಿಸಲು ಬಂದವರೇ ನಕ್ಕು ನಕ್ಕು ಉರುಳಾಡಿದ್ದಾರೆ. ಪ್ರತೀ ವಾರ ಕಲರ್ ಕಲರ್ ಕಲಾವಿದರನ್ನ ಕರೆಸಿ , ಅವರನ್ನು ಕಿಚಾಯಿಸ್ತಾ ಕರಾಮತ್ತು ಮಾಡುವ ಮಜಾಟಾಕೀಸ್ ಇಂದು ಮತ್ತು ನಾಳೆ ಬೇಸಿಗೆಯಲ್ಲೂ ಚಳಿ.. ಚಳಿ.. ಅಂತ ನಡುಗುವ  ಸಂಚಿಕೆ ಕೊಡ್ತಾ ಇದೆ .

ಅರೇ ..ಅದೇ ಲೂನಾ ಮೇಲೆ ಆಹಾ ..ಮೈನಾ

ಇವತ್ತು ಮತ್ತು ನಾಳೆ ಅಂದ್ರೆ ಭಾನುವಾರ ಎರಡೂ ಎಪಿಸೋಡ್ನಲ್ಲೂ ದಿಗ್.. ದಿಗ್. ದಿಗ್ವಿಜಯ ಅಂತ ಪ್ರೇಕ್ಷಕರ ಎದೆ ನಡುಗಿಸಿದ ಅಂಬಿಕಾರನ್ನ ಬಾ ..ಅರಗಿಣಿಯೆ ಬಾ .. ಅಂತ ಸೃಜನ್ ಸಕ್ಕತ್ ಸ್ಟೈಲ್ ಆಗಿ ಮಜಾಟಾಕೀಸ್ ಮನೆಗೆ ಕರೆದು  ಮಾತಾಡಿಸಲಿದ್ದಾರೆ.

ಚಳಿ .. ಚಳಿ ..ತಾಳೆನು ಈ ಚಳಿಯ ..

ನಡುಗುವ ಮೈಯ್ಯಾ ನೋಡಿದೆಯಾ .. ಅಂಬರೀಷ್-ಅಂಬಿಕಾ ಜೋಡಿಯ ಚಕ್ರವ್ಯೂಹದ ಈ ಹಾಡು ಸಿನಿರಸಿಕರಿಗೆ ಕಚಗುಳಿ ಕೊಟ್ಟಿತ್ತು. ಇವತ್ತಿಗೂ ಆ ಹಾಡು ನೋಡ್ತಾ.. ಕೇಳ್ತಾ .. ಆಹಾ ಹರಯವೇ ಬಾ ಮತ್ತೊಮ್ಮೆ ಬಾ ಅನ್ನುವ ರಸಿಕರಿಗೇನು ಕಮ್ಮಿ ಇಲ್ಲ . ಅಷ್ಟೇ ಅಲ್ಲ ಮೈ ಲಾರ್ಡ್ ನನ್ನ ವಾದ ಕೇಳಿ .. ಡಾ .ರಾಜ್ ಕುಮಾರ್ ಅವ್ರ ಜೊತೆ ಹಾಡಿ ,ನಲಿದ ಅಂಬಿಕಾ ಸಿನಿಪ್ರಿಯರನ್ನು ಗೆದ್ದ ಚೆಲುವೆ ,ಚತುರೆ .

ತನ್ನದಲ್ಲ ನಾಡಿಗೆ ಬಂದು ಕನ್ನಡಿಗರ ಪ್ರೀತಿ ,ಅಭಿಮಾನವನ್ನು ಹೇಗೆ ಸಂಪಾದಿಸಿದೆ ? ಮೊದಲ ಸಿನಿಮಾದ ಭಯ, ಈಗಲೂ ಮರೆಯದ ಮೊದಲ ಡೈಲಾಗು , ತಮಾಷೆಯ ಸನ್ನಿವೇಶಗಳು , ಅಭಿನಯ ಹೇಳಿಕೊಟ್ಟವರು ಯಾರು ? ಅಂಬಿ ಬಗ್ಗೆ ಇವತ್ತಿಗೆ ಏನನ್ನಿಸುತ್ತೆ ? ಎಲ್ಲವನ್ನು ಸೃಜನ್ ಮತ್ತು ತಂಡದ ಜೊತೆ ಮಸ್ತ್ ಮಜಾ ಕೊಡ್ತಾ ತೆರೆದಿಡಲಿದ್ದಾರೆ ಅಂಬಿಕಾ .

ಅಂಬಿಕಾ ಅವತಾರದಲ್ಲಿ ಮಜಾ ಮಂದಿ 

ಅಂಬಿಕಾ ಹೇರ್ ಸ್ಟೈಲ್ ಖದರ್ರೇ ಬೇರೆ ಬಿಡಿ . ಮಜಾ ಟಾಕೀಸ್ ನ ಮಹಾನ್ ಕಿಲಾಡಿಗಳು ಅಂಬಿಕಾ ಯಾವ ಯಾವ ಅವತಾರದಲ್ಲಿ ಸಿನಿಮಾದಲ್ಲಿ ಮಿಂಚಿದ್ರು ಅನ್ನೋದನ್ನ ಸೂಪರ್ ಆಗಿ ತೋರಿಸಲಿದ್ದಾರೆ .

ಕೈ ತುತ್ತು ಕೊಟ್ಟಿದ್ಯಾಕೆ

ಮಜಾ ಟಾಕೀಸ್ ನಲ್ಲಿ ಒಬ್ಬರನ್ನೊಬ್ಬರು ಕಾಲೆಳೀತಾ ನಗಿಸಿ , ಬೆಚ್ಚಗಾಗಿಸೋದು ನೋಡೇ ಇದ್ದೀವಿ .ಆದ್ರೆ ಈ ಎರಡೂ ದಿನದ ಸಂಚಿಕೆಯಲ್ಲಿ ತಾಯಿಯ ಕೈ ತುತ್ತು ನೆನಪಾಗುವ ಸನ್ನಿವೇಶ ಇದೆ . ಅಂಬಿಕಾ ಇಡೀ ತಂಡಕ್ಕೆ ಕೈ ತುತ್ತು ಉಣಿಸುತ್ತಿದ್ದಾರೆ. ಅದೇ ಯಾಕೆ ? ಕೈ ತುತ್ತು ತಿನ್ನಿಸೋ ಅಂಥಾ ಸನ್ನಿವೇಶ ಏನಿದೆಯಪ್ಪಾ ಅಂತ ಗೊತ್ತಾಗಬೇಕಾದ್ರೆ ಜೊತೆಗೆ ಅಂಬಿಕಾ ಜೊತೇಲಿ ನಾನು ಯಾರಿಗೂ ಕಮ್ಮಿ ಇಲ್ಲ ಅಂತ ಕುಣಿದಿರೋ ಸೃಜನ್  ಸ್ಟೈಲಿಶ್  ಡಾನ್ಸ್  ನೋಡಬೇಕಂದ್ರೆ ಮಜಾ ಟಾಕೀಸ್ ನೋಡ್ಕೊಂಡ್ ಬಿಡಿ .

 

 

ಕೈ ತುತ್ತು

ಅವರ ಸಿನಿಮಾಗಳ ವೇಷಗಳು , ಮೊದಲ ಸಿನಿಮಾ ,ಕನ್ನಡ ಕಲಿತದ್ದು ದೈಲೌಗೆ

-Ad-

Leave Your Comments