ಕಿರುತೆರೆ ಕಲಾವಿದ ಅಮಿತ್ ಟಂಡನ್ ಪತ್ನಿ ರೂಬಿ ಬಂಧನ

ಖ್ಯಾತ ಕಿರುತೆರೆ ಕಲಾವಿದ ಅಮಿತ್ ಟಂಡನ್ ಅವರ ಪತ್ನಿ ರೂಬಿಯನ್ನು ಪೊಲೀಸರು ದುಬೈನಲ್ಲಿ ಬಂಧಿಸಿದ್ದಾರೆ.

ಚರ್ಮರೋಗ ತಜ್ಞೆಯಾಗಿರುವ ರೂಬಿ ಬಂಧನಕ್ಕೆ ಒಳಗಾಗಿ ದುಬೈ ಜೈಲಿನಲ್ಲಿದ್ದಾರೆ. ದುಬೈನ ಆರೋಗ್ಯ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿರುವ ರೂಬಿ ವಿರುದ್ಧ ಕೇಸ್ ದಾಖಲಾಗಿದ್ದು, ಇದೇ ಕಾರಣಕ್ಕೆ ಆಕೆಯನ್ನು ಬಂಧಿಸಿ, ಅಲ್ ರಫಾ ಜೈಲಿನಲ್ಲಿರಿಸಲಾಗಿದೆ. ಅಮಿತ್ ಟಂಡನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮುಂದಿನ ವಾರ ದುಬೈಗೆ ಹೋಗಿ ರೂಬಿ ಅವರನ್ನು ಕರೆತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ. ಸುಳ್ಳು ಆರೋಪದ ಮೇಲೆ ರೂಬಿಯನ್ನು ಬಂಧಿಸಲಾಗಿದೆ. ಜಾಮೀನು ಕೂಡ ನಿರಾಕರಿಸಲಾಗಿದೆ ಎಂದು ಅಮಿತ್ ಹೇಳಿದ್ದಾರೆ.

ಇಂಡಿಯನ್ ಐಡಲ್ ನೊಂದಿಗೆ ಜನಪ್ರಿಯರಾಗಿದ್ದ ಅಮಿತ್ ಟಂಡನ್ ಮತ್ತು ರೂಬಿ ದಂಪತಿಗೆ ಒಬ್ಬಳು ಪುತ್ರಿಯಿದ್ದಾಳೆ. ಈ ದಂಪತಿ ನಡುವೆ ವಿರಸ ಮೂಡಿದ್ದು, ವಿಚ್ಛೇದನ ನೀಡಲಿದ್ದಾರೆ ಎಂದು ಹಿಂದೆ ಸುದ್ದಿಯಾಗಿತ್ತು

-Ad-

Leave Your Comments