ಅಬ್ಬಬ್ಬಾ..! ಅಮಿತಾಬಚ್ಚನ್ ದಾಖಲೆ ನೋಡ್ರಿ..!

ಅಮಿತಾ ಬಚ್ಚನ್ ಬಾಲಿವುಡ್ ನಲ್ಲಿ ಮಿಂಚಿದ, ಮಿಂಚುತ್ತಿರುವ ಎವೆರ್ ಗ್ರೀನ್ ಸ್ಟಾರ್ ಅಂದ್ರೆ ಅಮಿತಾ ಬಚ್ಚನ್. ತಮ್ಮ ವಿಶಿಷ್ಠ ಅಭಿನಯ ಕೌಶಲ್ಯದಿಂದ ಮಕ್ಕಳಿಂದ ವೃದ್ಧರ ತನಕ ಎಲ್ಲಾ ವಯೋಮಾನದವರನ್ನು ಸೆಳೆಯುವ ಅಮಿತಾ ಬಚ್ಚನ್ ಮತ್ತೊಂದು ದಾಖಲೆ ಮಾಡಿದ್ದಾರೆ.

ಟ್ವಿಟ್ಟರ್ ಖಾತೆಯಲ್ಲಿ ಮೋದಿ ಹಿಂದೆ ಬಿಗ್ ಬಿ !!

ತಮ್ಮ ಟ್ವಿಟ್ಟರ್ ಖಾತೆಯಲ್ಲಿ 27 ಬಿಲಿಯನ್ ಹಿಂಬಾಲಕರನ್ನು ಹೊಂದುವ ಮೂಲಕ ಬಾಲಿವುಡ್ ನಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ. ಭಾರತದಲ್ಲಿ ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಖ್ಯಾತಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾ ಬಚ್ಚನ್ ಪಾಲಾಗಿದೆ. ಟ್ವಿಟರ್ ನಲ್ಲಿ ಇಷ್ಟೊಂದು‌ ಅಭಿಮಾನಿಗಳನ್ನು ಹೊಂದಿರುವುದಕ್ಕೆ ಬಿಗ್ ಬಿ ಧನ್ಯವಾದ ಹೇಳಿದ್ದಾರೆ.

ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಬಿಟ್ಟರೆ ಬಚ್ಚನ್ ಗೆ 2ನೇ ಸ್ಥಾನ ಸಿಕ್ಕಿದೆ.  ಪ್ರಧಾನಿ ನರೇಂದ್ರ ಮೋದಿಗೆ ಇಲ್ಲೀವರೆಗೂ 30.2 ಮಿಲಿಯನ್ ಹಿಂಬಾಲಕಾರು ಇದ್ದು  ಮೊದಲನೇ ಸ್ಥಾನದಲ್ಲಿದ್ದಾರೆ.

ಶಾರುಖ್ ಖಾನ್ 25.1 ಮಿಲಿಯನ್, ಸಲ್ಮಾನ್ ಖಾನ್ 23 ಮಿಲಿಯನ್ , ಅಮಿರ್ ಖಾನ್ 20.9 ಮಿಲಿಯನ್, ಪ್ರಿಯಾಂಕ ಚೋಪ್ರಾ 17.4 ಮಿಲಿಯನ್, ದೀಪಿಕಾ  ಪಡುಕೋಣೆ 18.5 ಮಿಲಿಯನ್ ಹಿಂಬಾಲಕರನ್ನು ಹೊಂದುವ ಮೂಲಕ ನಂತರದ ಸ್ಥಾನಗಳಲ್ಲಿದ್ದಾರೆ.

ಜ್ಯೋತಿ ಎಂ ಗೌಡ, ನಾಗಮಂಗಲ

-Ad-

Leave Your Comments