ಬಚ್ಚನ್ ಆರೋಗ್ಯದಲ್ಲಿ ಏರುಪೇರು

ಅಮಿತಾಬಚ್ಚನ್​ ಆರೋಗ್ಯದಲ್ಲಿ ಏರುಪೇರಾಗಿದ್ದು ಮುಂಬೈನಿಂದ ವಿಶೇಷ ವಿಮಾನದಲ್ಲಿ ತೆರಳಿದ ವೈದ್ಯರ ತಂಡ ತಪಾಸಣೆ ನಡೆಸಿದೆ. ರಾಜಸ್ಥಾನದ ಜೋಧಪುರದಲ್ಲಿ ಥಗ್ಸ್​ ಆಫ್​​ ಹಿಂದೂಸ್ತಾನ್​ ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಅಮಿತಾ ಬಚ್ಚನ್, ತಡರಾತ್ರಿ ತನಕ ಶೂಟಿಂಗ್ ಮುಗಿಸಿ ಬಂದಿದ್ರು. ರಾತ್ರಿ ಮಲಗಿದಾಗ ಭುಜ ಹಾಗೂ ಸೊಂಟ ನೋವಿಗೆ ತುತ್ತಾದ ನಟ ಅಮಿತಾ ಬಚ್ಚನ್ ಕೂಡಲೇ ಸಹಾಯಕರಿಗೆ ತಿಳಿಸಿದ್ದಾರೆ. ಮುಂಬೈ ನಿವಾಸಕ್ಕೆ ವಿಚಾರ ಗೊತ್ತಾಗ್ತಿದ್ದ ಹಾಗೆ ವಿಶೇಷ ವಿಮಾನದಲ್ಲಿ ತಜ್ಞ ವೈದ್ಯರ ತಂಡ ಜೋಧಪುರಕ್ಕೆ ತೆರಳಿ ಚಿಕಿತ್ಸೆ ನೀಡಿದ್ದು, ದ್ರವ ಆಹಾರ ಹಾಗೂ ವಿಶ್ರಾಂತಿಗೆ ಸೂಚನೆ ನೀಡಿದ್ದಾರೆ.

ಅಮಿತಾ ಬಚ್ಚನ್​ ಆರೋಗ್ಯದ ಬಗ್ಗೆ ದೆಹಲಿಯಲ್ಲಿ ಪಾರ್ಲಿಮೆಂಟ್ ಬಳಿ ಮಾತನಾಡಿರುವ ಜಯಾ ಬಚ್ಚನ್​, ಯಾವುದೇ ಆರೋಗ್ಯ ಸಮಸ್ಯೆ ಇಲ್ಲ.. ಅಮಿತಾಬ್ ಬಚ್ಚನ್ ಈಗ ಆರೋಗ್ಯವಾಗಿದ್ದಾರೆ, ಏನೂ ಆಗಿಲ್ಲ.. ಬೆನ್ನು ನೋವು ಹಾಗೂ ಸೊಂಟದ ನೋವು ಇದೆ, ಮತ್ತೇನೂ ಸಮಸ್ಯೆ ಇಲ್ಲ.. ಥಗ್ಸ್ ಆಫ್ ಹಿಂದೂಸ್ಥಾನ್ ಶೂಟಿಂಗ್ ನಲ್ಲಿ ಹಾಕುತ್ತಿರುವ ಕಾಸ್ಟ್ಯೂಮ್ ತುಂಬಾ ತೂಕ ಇರೋದ್ರಿಂದ ಈ ಸಮಸ್ಯೆಯಾಗಿದೆ ಎಂದಿದ್ದಾರೆ.

75 ವರ್ಷದ ಅಮಿತಾ ಬಚ್ಚನ್ ಥಗ್ಸ್ ಆಫ್ ಹಿಂದೂಸ್ಥಾನ್ ಚಿತ್ರದಲ್ಲಿ ವಾರಿಯರ್ ವೇಶದಲ್ಲಿ ಕಾಣಿಕೊಂಡಿದ್ದು, ವೇಷಭೂಷಣ ರಗಡ್ ಲುಕ್ ನಲ್ಲಿದೆ. ವಯೋ ಸಹಜ ಬಳಲಿಕೆಯಿಂದ ಬಳಲಿರುವ ಅಮಿತಾ ಬಚ್ಚನ್ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದ್ದು, ವಿಶ್ರಾಂತಿ ಪಡೆದ ಬಳಿಕ ಸರಿಯಾಗಲಿದೆ ಎಂದಿದ್ದಾರೆ.. ಅಮಿತಾಬ್​ಗೆ ಆರೋಗ್ಯ ಸಮಸ್ಯೆಯಾದ ಹಿನ್ನೆಲೆಯಲ್ಲಿ ಶೂಟಿಂಗ್​ ಸೆಡ್ಯೂಲ್​ ಚಿತ್ರತಂಡ ಬದಲಾವಣೆ ಮಾಡಿಕೊಂಡಿದೆ. ರಾಜಸ್ಥಾನ ಸಿಎಂ ವಸುಂಧರ ರಾಜೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ಅಮಿತಾಬ್ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ಅಮಿತಾಬ್ ಗೆ ಯಾವುದೇ ವ್ಯವಸ್ಥೆ ಬೇಕಾದರು ಕಲ್ಪಿಸುವಂತೆ ಸೂಚಿಸಿದ್ದಾರೆ..

ಜ್ಯೋತಿ ಗೌಡ, ನಾಗಮಂಗಲ

-Ad-

Leave Your Comments