ಅಂತೂ ಇಂತೂ ಮತ್ತೆ ಅಮೂಲ್ಯ ದರ್ಶನ

ಮದುವೆಯಾದ ಮೇಲೆ ಹೆಚ್ಚೂ ಕಮ್ಮಿ ಕಾಣೆಯಾದಂತೆ ಇದ್ದರು ಗೋಲ್ಡನ್ ಕ್ವೀನ್ ಅಮೂಲ್ಯ. ಏನು ಮಾಡುತ್ತಿದ್ದೀರಿ ಅಂತ ಕೇಳಲು ನ್ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಇನ್ನು ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲವೇನೋ ಅಂತ ಬಹುತೇಕರು ಅಂದುಕೊಳ್ಳುವ ಹೊತ್ತಿಗೆ ಅಮೂಲ್ಯ ಮತ್ತೆ ಬಂದಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಆದರೆ ಈ ಸಲ ಅವರು ಸಿನಿಮಾ ಸಾಹಸ ಮಾಡುತ್ತಿಲ್ಲ. ಅದಕ್ಕೆ ಬದಲಾಗಿ ಅವರು ಸಮಾಜ ಸೇವೆಗೆ ಇಳಿದಿದ್ದಾರೆ.
ವನಿತಾ ವಿಕಾಸ ಎಂಬ ಸಂಸ್ಥೆಯ ಜೊತೆ ಸೇರಿ ಮಹಿಳೆಯರ ಸಬಲೀಕರಣ ಮಾಡಬೇಕು ಅನ್ನುವುದು ಅವರ ಆಲೋಚನೆ. ದುಡಿದು ಸಾಧಿಸಬೇಕು ಅನ್ನುವ ಮಹಿಳೆಯರಿಗೆ ಸರಿಯಾದ ತರಬೇತಿ ನೀಡಿ ಅವರು ಏನಾದರೂ ಸಾಧಿಸುವಂತೆ ಮಾಡಬೇಕು ಅನ್ನುವುದು ಅಮೂಲ್ಯ ಯೋಚನೆ ಮತ್ತು ಯೋಜನೆ.
ಈ ಯೋಜನೆಯಲ್ಲಿ ಸುಮಾರು ೧೦ ಸಾವಿರ ಮಹಿಳೆಯರಿಗೆ ತರಬೇತಿ ನೀಡಬೇಕು ಅಂದುಕೊಂಡಿದ್ದಾರೆ. ಈಗಾಗಲೇ ನೂರಾರು ಮಹಿಳೆಯರಿಗೆ ತರಬೇತಿ ಶುರುವಾಗಿದೆ.
ಅಂದಹಾಗೆ ಅಮೂಲ್ಯ ಇಷ್ಟೆಲ್ಲಾ ಯಾಕೆ ಮಾಡುತ್ತಿದ್ದಾರೆ? ರಾಜಕೀಯ ಉದ್ದೇಶ ಇರಬಹುದಾ?
ಈ ಪ್ರಶ್ನೆ ನಿರೀಕ್ಷಿತವೇ. ಆದರೆ ರಾಜಕೀಯವಾಗಲಿ ಪ್ರಚಾರದ ಉದ್ದೇಶವಾಗಲಿ ಇಲ್ಲ ಎನ್ನುತ್ತಾರೆ ಅಮೂಲ್ಯ. ತನ್ನಿಂದ ಮನೆಯಲ್ಲಿ ಸುಮ್ಮನೆ ಕೂರುವುದು ಸಾ‘ವಿಲ್ಲ, ಅದಕ್ಕಾಗಿ ಈ ಹೆಜ್ಜೆ ಇಡುತ್ತಿದ್ದೇನೆ ಎನ್ನುವ ಮಾತು ಅವರದು.
ರಾಜಕೀಯ ಉದ್ದೇಶ ಇದೆಯೋ ಇಲ್ಲವೋ ಆದರೆ ಅಮೂಲ್ಯ ಒಳ್ಳೆಯ ಕೆಲಸ ಮಾಡುವುದಕ್ಕೆ ಹೊರಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ.
-Ad-

Leave Your Comments