ನಾಳೆ ಅಮ್ಮು ಕಲ್ಯಾಣ.. ಹೇಗಿದೆ ಸಿದ್ಧತೆ…? 

ಸ್ಯಾಂಡಲ್ ವುಡ್ ನ ಕ್ಯೂಟ್ ಗರ್ಲ್ ನಾಳೆ ಮೇ 12 ರಂದು ಸಪ್ತಪದಿ ತುಳಿಯಲಿದ್ದಾರೆ. ಉದ್ಯಮಿ ಜಗದೀಶ್ ಎಂಬುವರನ್ನು ವರಿಸಲಿದ್ದು ಭಾರೀ ತಯಾರಿ ನಡೆಯುತ್ತಿದೆ. ಇಂದು ಬೆಂಗಳೂರಿನ ಮನೆಯಲ್ಲಿ ಎಲ್ಲಾ ಶಾಸ್ತ್ರಗಳನ್ನು ಪೂರೈಸಿದ ಅಮೂಲ್ಯ ಕುಟುಂಬ, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿ ಚುಂಚನಗಿರಿಯತ್ತ ಪ್ರಯಾಣ ಬೆಳೆಸಿದೆ. ನಾಳೆ ಕುಟುಂಬಸ್ಥರು ಹಾಗು ಆಪ್ತರಿಗೆ ಅಷ್ಟೇ ಆಹ್ವಾನ ನೀಡಿದ್ದು ಶ್ರೀಗಳು, ರಾಜಕಾರಣಿಗಳು ಹಾಗೂ ಸಿನಿಮಾ ತಾರೆಯರ ಅಮ್ಮುಖದಲ್ಲಿ ಅಮ್ಮು ಹಸೆಮಣೆ ಏರಲಿದ್ದಾರೆ.
ನಿನ್ನೆ ನಟ ಗಣೇಶ್ ಅವರ ರಾಜರಾಜೇಶ್ವರಿ ನಗರ ನಿವಾಸದಲ್ಲಿ ಅದ್ಧೂರಿ ಮೆಹೆಂದಿ ಕಾರ್ಯಕ್ರಮ ಜರುಗಿದ್ದು, ಚಿತ್ರೋದ್ಯಮದ ಹಲವು ನಟ ನಟಿಯರು ಭಾಗಿಯಾಗಿ ಕುಣಿದು ಕುಪ್ಪಳಿಸಿದ್ರು.. ಮೆಹೆಂದಿ ಕಾರ್ಯಕ್ರಮದ ಎಲ್ಲಾ ಅಲಂಕಾರ ಹಾಗೂ ಕಾರ್ಯಕ್ರಮದ ಉಸ್ತುವಾರಿಯನ್ನು ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರೇ ಮುಂದೆ ನಿಂತು ಉಸ್ತುವಾರಿ ನೋಡಿಕೊಂಡರು. ನೃತ್ಯದಲ್ಲಿ ಗಣೇಶ್ ಮಗಳು ಸೊಂಟ ಬಳುಕಿಸಿದ್ದು ಎಲ್ಲರ ಗಮನಸೆಳೆಯುತ್ತಿತ್ತು..
ವರ ಜಗದೀಶ್ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿದ್ದು, ಹರಿಸಿಣ ಶಾಸ್ತ್ರ ಸೇರಿದಂತೆ ಹಲವು ಧಾರ್ಮಿಕ ಶಾಸ್ತ್ರಗಳನ್ನು ಮಾಡಲಾಯ್ತು. ನಾಳೆ ಆದಿಚುಂಚನಗಿರಿ ಮಠದ ಸಭಾಂಗಣದಲ್ಲಿ ಒಕ್ಕಲಿಗ ಸಂಪ್ರದಾದಂತೆ ವಿವಾಹ ನೆರವೇರಲಿದ್ದು, ಆ ಬಳಿಕ ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಳ್ಳಲು ಎರಡೂ ಕಡೆಯ ಕುಟುಂಬಗಳು ನಿರ್ಧಾರ ಮಾಡಿಕೊಂಡಿವೆ.
ಇಷ್ಟುದಿನ ಟೀನೇಜರ್ ಹಾಟ್ ಫೇವರಿಟ್ ಆಗಿದ್ದ ನಟಿ ಅಮೂಲ್ಯ ಸಾಂಸಾರಿಕ ಜೀವನಕ್ಕೆ ಕಾಲಿಡುತ್ತಿದ್ದು, ಅದೆಷ್ಟೋ ಲವರ್ಸ್ ಬಾಯ್ಸ್ ಗೆ ನಿರಾಸೆ ಮೂಡಿಸಿರೋದಂತು ಸತ್ಯ..
-Ad-

Leave Your Comments