ಮದುವೆಯ ನಂತರ ಅಮೂಲ್ಯ ಅಭಿಮಾನಿಗಳಿಗೆ ಹೇಳಿದ್ದೇನು ?

ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ಅಮೂಲ್ಯ ಇದೇ ತಿಂಗಳ 12ರಂದು ಉದ್ಯಮಿ ಜಗದೀಶ್ ಅವರನ್ನು ವರಿಸಿದ್ರು.. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಮಠದಲ್ಲಿ ಕುಟುಂಬಸ್ಥರು ಹಾಗೂ ಪರಮಾಪ್ತರನ್ನು ಮಾತ್ರ ಆಹ್ವಾನಿಸಿ, ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಸಮ್ಮುಖದಲ್ಲಿ ಸತಿಪತಿಗಳಾಗಿ ಹಸೆಮಣೆ ಏರಿದ್ರು..

ಇವತ್ತು ಬೆಂಗಳೂರಲ್ಲಿ ಅದ್ಧೂರಿ ಆರತಕ್ಷತೆ..

ಸ್ಯಾಂಡಲ್ ವುಡ್ ಚಿತ್ತಾರದ ಚೆಲುವೆ ಅಮೂಲ್ಯ ಸಂಪ್ರದಾಯ ಬದ್ಧವಾಗಿ ಆದಿಚುಂಚನಗಿರಿ ಮಠದಲ್ಲಿ ಮದ್ವೆಯಾದ ಕಾರಣ ಸಾಕಷ್ಟು ಜನರಿಗೆ ಆಹ್ವಾನ ಕೊಡಲು ಸಾಧ್ಯ ಆಗಿರಲಿಲ್ಲ. ಹೀಗಾಗಿ ಇಂದು ಬೆಂಗಳೂರಿನ ಬನಶಂಕರಿಯ ಶ್ರೀ ಪ್ಯಾಲೇಸ್ ನಲ್ಲಿ  ಆರತಕ್ಷತೆ ನಡೆಯಲಿದೆ. ಹೀಗಾಗಿ ಪ್ಯಾಲೇಸ್ ರಾಜಮಹಾರಾಜರ ಕಾಲದ ಅರಮನೆಯಂತೆಯೇ ಕಂಗೊಳಿಸುತ್ತಿದೆ.

ಅಮ್ಮು-ಜಗ್ಗಿಗಾಗಿ ರೆಡಿ ಐಶಾರಾಮಿ ವಸ್ತ್ರ

ಕ್ಯೂಟ್ ಡಾಲ್ ಅಮೂಲ್ಯ ಸ್ಯಾಂಡಲ್ ವುಡ್ ನಟಿ ಆದ್ರೆ ಜಗದೀಶ್ ಉದ್ಯಮಿ. ಜಗದೀಶ್ ತಂದೆ ಕಾರ್ಪೊರೇಟರ್ . ಹೀಗಿದ್ದ ಮೇಲೆ ಕೋಟಿ ಅನ್ನೋದು ಅವರಿಗೇನು ಲೆಕ್ಕಾ ಇಲ್ಲ. ಹೀಗಾಗಿ ಸಖತ್ ಜೋರಾಗಿಯೇ ರಿಸೆಪ್ಷನ್ ಆಯೋಜನೆ ಮಾಡಿರ್ತಾರೆ. ಇನ್ನು ಆರತಕ್ಷತೆ ವೇದಿಕೆಗೆ ಅಂತಾನೆ ಜಗ್ಗಿಗೆ ಭೋಜಪುರಿ ಸೂಟ್ ರೆಡಿಯಾಗಿದ್ರೆ ನಮ್ಮನೆ ಹುಡ್ಗಿ ಅಮ್ಮುಗೆ ಲೆಹಂಗಾ ಸಿದ್ಧವಾಗಿದೆ..

ಅಭಿಮಾನಿಗಳಿಗೆ ಕಣ್ತುಂಬಿಕೊಳ್ಳುವ ಚಾನ್ಸ್..?

ನಟ, ನಟಿಯರ ಮದುವೆ ಸಂಭ್ರಮ ಅಂದ್ರೆ ಅಭಿಮಾನಿಗಳು ಮುಗಿಬೀಳೋದು ಸಾಮಾನ್ಯ. ಮೊನ್ನೆ ಆದಿಚುಂಚನಗಿರಿಯಲ್ಲೂ ಅಭಿಮಾನಿಗಳು ಮದುವೆ ನೋಡಲು ಬಿದ್ದು, ಗಲಾಟೆ ಮಾಡಿದ್ರು. ಆದ್ರೆ ಅವಕಾಶ ಕೊಟ್ಟಿರಲಿಲ್ಲ.

ಆದ್ರೆ  ಮದುವೆಯ ನಂತರ ಫೇಸ್ ಬುಕ್ ಲೈವ್ ನಲ್ಲಿ ಬಂದಿದ್ದ ಅಮೂಲ್ಯ – ಜಗದೀಶ್ ,ತಮಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ . ರಾಜ ರಾಜೇಶ್ವರಿ ನಗರದಲ್ಲಿರುವ ಶ್ರೀ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯುವ ಆರತಕ್ಷತೆಗೆ ತಮ್ಮ ಅಭಿಮಾನಿಗಳಿಗೆ  ಆಹ್ವಾನ ನೀಡಿದ್ದಾರೆ. ಜೊತೆಗೆ ಯಾವ ಉಡುಗೊರೆಯನ್ನು ತರಬೇಡಿ ಅದರ ಬದಲು ನಿಮ್ಮ ಮನೆಯಲ್ಲೊಂದು ಸಸಿ ಬೆಳೆಸಿ ಅದರ ಫೋಟೋ ಕಳ್ಸಿ ಸಾಕು ಎಂದಿದ್ದಾರೆ. ಜೊತೆಗೆ ಏನೇ ವಿಶೇಷತೆಗಳಿದ್ದರೂ ನಿಮ್ಮ ಜೊತೆ ಮಾತಾಡ್ತಿರ್ತೀನಿ ಅಂದಿದ್ದಾರೆ .

ಅಭಿಮಾನಿಗಳಿಗೆ ಜಾಗ ಇದೆಯಾ ?

ಇವರು ರಿಸೆಪ್ಷನ್ ಮಾಡುತ್ತಿರುವ ಹಾಲ್  ಗೆ  ಅಭಿಮಾನಿಗಳ ಸಂಖ್ಯೆ ತಡೆದುಕೊಳ್ಳುವ ಕ್ಯಾಪಾಸಿಟಿ ಕಡಿಮೆ ಇದೆ ಎನ್ನುವ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ . ಹಾಗಾಗಿ ಕೇವಲ ರಾಜಕಾರಣಿಗಳು ಹಾಗೂ ಹಿರಿತೆರೆ, ಕಿರಿತೆರೆಯ ಕಲಾವಿದರು ಭಾಗವಹಿಸುವ ಸಾಧ್ಯತೆ ಇದೆ .ಇಷ್ಟಕ್ಕೂ ಮೀರಿ ಬಂದ  ಅಭಿಮಾನಿಗಳಿಗೆ ಹೇಗೆ ಜಾಗ ಕಲ್ಪಿಸಿಕೊಡ್ತಾರೋ ನೋಡೋಣ .

-Ad-

Leave Your Comments