ವಿನಯ್ ರಾಜ್ ಕುಮಾರ್ ಚಿತ್ರದ ವಿರುದ್ಧ ಎಫ್ ಐ ಆರ್ ದಾಖಲಿಸಲು ಅರ್ಜಿ

ನಟ ವಿನಯ್ ರಾಜ್ ಕುಮಾರ್ ಅಭಿನಯದ ‘ಅನಂತು v/s ನುಸ್ರತ್’ ಸಿನಿಮಾದ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ವಕೀಲ ಎನ್.ಪಿ.ಅಮೃತೇಶ್  ಸಿನಿಮಾದ ವಿರುದ್ಧ  ಎಫ್ ಐ ಆರ್ ದಾಖಲಿಸುವಂತೆ ಹೈ ಕೋರ್ಟ್  ಮೆಟ್ಟಿಲೇರಿದ್ದಾರೆ .

ಕೆಲ ತಿಂಗಳ ಹಿಂದೆ ‘ಅನಂತು v/s ನುಸ್ರತ್’ ಚಿತ್ರದ ಫೋಟೋ ಶೂಟ್ ನಡೆದಿತ್ತು. ಚಿತ್ರಗಳನ್ನು  ಹೈಕೋರ್ಟ್ ಆವರಣದಲ್ಲಿ ಮಾಡಲಾಗಿತ್ತು. ಈಗ ಅದೇ ವಿಷಯ ಚಿತ್ರತಂಡಕ್ಕೆ ತಲೆನೋವಾಗಿದೆ. (ಎನ್ ಇ ಎ )ರಾಷ್ಟ್ರೀಯ ಸ್ಮಾರಕ ರಕ್ಷಣಾ ಕಾಯ್ದೆ ಪ್ರಕಾರ ಹೈಕೋರ್ಟ್  ನಿರ್ಭಂಧಿತ ಪ್ರದೇಶ. ಇಲ್ಲಿ  ಚಿತ್ರಕರಣಕ್ಕೆ  ಯಾವುದೇ ರೀತಿಯ ಅವಕಾಶ ನೀಡುವುದಿಲ್ಲ. ಆದರೂ ಸಿನಿಮಾ ತಂಡ ಅದಾವ ಧೈರ್ಯದ ಮೇಲೆ ಫೋಟೋ ಶೂಟ್ ಮಾಡಿತ್ತೋ ಗೊತ್ತಿಲ್ಲ. ‘ಅನಂತು v/s ನುಸ್ರತ್’ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಅವರದ್ದು ಲಾಯರ್  ಪಾತ್ರ. ಫೋಟೋ ಶೂಟ್ ಹೈಕೋರ್ಟ್ ನಲ್ಲಿ ಮಾಡಿ , ಹೊರ ಬಿಟ್ಟ ಮೇಲೆ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು  ಹರಿದಾಡಿದೆ.

ಸಿನಿಮಾದಲ್ಲಿ ವಿನಯ್ ಅವರನ್ನು ವಕೀಲರನ್ನಾಗಿ ತೋರಿಸಲು ಹೊರಟಿರುವ ಚಿತ್ರ ತಂಡ ಇದೀಗ ನಿಜವಾದ ವಕೀಲರಿಂದ ಸಂಕಷ್ಟ ಎದುರಿಸಬೇಕಾಗಿದೆ. ಲಾಯರ್ ಎನ್.ಪಿ.ಅಮೃತೇಶ್ ಗೆ   ಶೂಟಿಂಗ್ ವಿಷಯ ಗೊತ್ತಾಗುತ್ತಿದ್ದಂತೆ ವಿಧಾನಸೌಧ ಪೋಲೀಸರಿಗೆ ದೂರು ನೀಡಿದ್ದರು. ಆದ್ರೆ ಇನ್ನು ಎಫ್ ಐ ಆರ್ ದಾಖಲಾಗಿಲ್ಲ . ಇದೇ ಕಾರಣದಿಂದ ಇಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಮೊನ್ನೆಯಷ್ಟೇ ಅಂಜನೀಪುತ್ರ ಸಿನಿಮಾ ಹೈಕೋರ್ಟ್ ಗೆ ದಂಡ ತೆತ್ತು ವಕೀಲರ ಕ್ಷಮೆ ಯಾಚಿಸಿತ್ತು . ಈಗ ‘ಅನಂತು v/s ನುಸ್ರತ್’ ಸಿನಿಮಾ ಸರದಿ. ಚಿತ್ರತಂಡ ಹೇಗೆ ಪಾರಾಗುತ್ತೋ ನೋಡಬೇಕು.

-Ad-

Leave Your Comments