ಒನ್ ಲೈನ್ ಕಥೆ ಹಿಡಿದು ಬರುವವರಿಗೆ ಅನಂತ್ ನಾಗ್ ಖಡಕ್ ಉತ್ತರ

ಅನಂತ್ ನಾಗ್ ಕನ್ನಡದಲ್ಲಿ ಅಷ್ಟೇ ಅಲ್ಲ,  ಭಾರತೀಯ ಚಿತ್ರರಂಗದಲ್ಲೇ ಅದ್ಭುತ ನಟ. ಬೆಳಗಾದರೆ ಕಥೆ ಹಿಡಿದು ನಮ್ಮ ಚಿತ್ರದಲ್ಲಿ ನಟಿಸಿ ಕರೆಗೆ ಕಿವಿಯಾಗಿ ಅನಂತ್ ಬೇಸತ್ತು ಹೋಗಿದ್ದಾರೆ. ಅದೇ ಕಾರಣಕ್ಕಾಗಿಯೇ ನಿಷ್ಠುರವಾಗಿ ನುಡಿದಿದ್ದಾರೆ.

ನನಗೆ ಕಥೆ ಹೇಳಲು ಬರುವವರಿಗೆಲ್ಲ ಸ್ಕ್ರಿಪ್ಟ್ ಕೊಡಿ ಎಂದು ಕೇಳುತ್ತೇನೆ. ಅದರಿಂದ ಅವರಿಗೂ ಒಂದು ಬೌಂಡ್ ಸ್ಕ್ರಿಪ್ಟ್ ಮಾಡುವ ಅಭ್ಯಾಸ ಆಗುತ್ತದೆ. ಒನ್ ಲೈನ್ ಇಟ್ಟುಕೊಂಡು ಬರುವವರಿಗೆ ಪ್ಲಾನಿಂಗ್ ಇರುವುದಿಲ್ಲ. ನಿರ್ದೇಶಕರ ತಲೆಯಲ್ಲಿ ನನ್ನ ಪಾತ್ರದ ಬಗ್ಗೆ ಏನಿದೆ, ಅವರು ನನ್ನ ಪಾತ್ರದಿಂದ ಏನು ಬಯಸುತ್ತಾರೆ ಅಂತ ಗೊತ್ತಾಗುವುದಕ್ಕೆ ನನಗೆ ಸ್ಕ್ರಿಪ್ಟ್ ಬೇಕು.

ಅನಂತ್ ನಾಗ್ ರಂಥಹ ಶ್ರೇಷ್ಠ ನಟನ ಬಳಿ ಹೋಗುವಾಗ ಇಷ್ಟಾದರೂ ಮಾಡದೆ ಹೋದರೆ ಹೇಗೆ ? ಇನ್ನಾದರೂ ಸಿನಿಮಾ ಮಾಡುವವರು ಸ್ಕ್ರಿಪ್ಟ್ ಮಾಡಿಕೊಂಡು ,ಸರಿಯಾದ ಸಿದ್ಧತೆಯಿಂದ ಹೋದರೆ ಅನಂತ್ ರಿಂದ ಮತ್ತಷ್ಟು ಉನ್ನತ ಅಭಿನಯ ಹೊಮ್ಮುವುದರಲ್ಲಿ ಸಂಶಯವಿಲ್ಲ.

 

-Ad-

Leave Your Comments