ಅಂಜನಿಪುತ್ರ ಬಿಡುಗಡೆ ಸಂದರ್ಭದಲ್ಲಿ ಅಭಿಮಾನಿಗಳಲ್ಲಿ ಪುನೀತ್ ಮಾಡಿಕೊಂಡ ಮನವಿ ಏನು?

ಸ್ಯಾಂಡಲ್ ವುಡ್ಡಿನ ಬಹುನಿರೀಕ್ಷಿತ ಚಿತ್ರ ಅಂಜನಿಪುತ್ರ ಇಂದು ಅದ್ಧೂರಿಯಾಗಿ ತೆರೆ ಕಂಡಿದೆ. ಬೆಳಗ್ಗೆ 7 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಪುನೀತ್ ಅಭಿಮಾನಿಗಳಲ್ಲಿ ಅರ್ಥಪೂರ್ಣ ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ…

‘ನಾಳೆ ಬಿಡುಗಡೆಯಾಗುತ್ತಿರುವ ನನ್ನ ಚಿತ್ರ ಅಂಜನಿಪುತ್ರ ದ ಕಟೌಟಿಗೆ ಹಾಲು ಹಾರ ಹಾಕಿ ಹಣ ಪೋಲು ಮಾಡಬೇಡಿ. ಅದರ ಬದಲಿಗೆ ಹಸಿದ ಮಕ್ಕಲು ವೃದ್ಧರಿಗೆ ನೀಡಿದರೆ ಒಳ್ಳೆಯ ಕೆಲಸವಾಗುತ್ತದೆ. ಸಿನಿಮಾ ಇಷ್ಟ ಆದ್ರೆ ನೀವು ನಿಮ್ಮ ಸ್ನೇಹಿತರು ಕುಟುಂಬದವರೊಂದಿಗೆ ಹೋಗಿ ಅದರ ಫೋಟೋ ಕಳುಹಿಸಿ ಅದೇ ನನಗೆ ಖುಷಿ ನೀಡುತ್ತದೆ.’

ಗುರುವಾರ ನಗರದ ಕೆ.ಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಆಭಿಮಾನಿಗಳಿಂದ ಭರ್ಜರಿ ಓಪನಿಂಗ್ ಪಡೆದಿದ್ದು, ಪುನೀತ್ ಮನವಿಯ ಹೊರತಾಗಿಯೂ ಕಟೌಟ್ ಪೋಸ್ಟರ್ ಗಳಿಗೆ ಹೂಗಳಿಂದ ಶ್ರಂಗಾರ, ತೆಂಗಿನ ಕಾಯಿ, ಪಟಾಕಿ ಹೊಡೆದು ಸಂಭ್ರಮಾಚರಣೆಮಾಡಿದರು.

-Ad-

Leave Your Comments