ಅಂಜನಿಪುತ್ರ ಚಿತ್ರ ತಂಡ – ವಕೀಲರ ನಡುವೆ ರಾಜಿ ಯಶಸ್ವಿ, ಬಗೆಹರಿತು ಕಾನೂನು ವಿಘ್ನ

ಕಳೆದ ಒಂದು ವಾರದಿಂದ ವಕೀಲರು ಹಾಗೂ ಅಂಜನಿಪುತ್ರ ಚಿತ್ರ ತಂಡದ ನಡುವೆ ನಡೆದ ಹಗ್ಗಜಗ್ಗಾಟ ಇಂದಿಗೆ ಅಂತ್ಯವಾಗಿದೆ. ವಕೀಲರ ಪಟ್ಟಿಗೆ ಬಾಗಿದ ಚಿತ್ರ ತಂಡ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಿದೆ. ಪರಿಣಾಮ ವಿವಾದ ಅಂತ್ಯವಾಗಿದೆ.

ನ್ಯಾಯಾಲಯದಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಿದ ಚಿತ್ರದ ನಿರ್ಮಾಪಕ ಎನ್ ಕುಮಾರ್, ‘ವಿವಾದಕ್ಕೆ ಕಾರಣವಾಗಿದ್ದ ಚಿತ್ರದ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ. ಆ ಮೂಲಕ ನ್ಯಾಯಾಲಯದ ಆದೇಶ ಪಾಲಿಸಿದ್ದೇವೆ. ಸೆನ್ಸಾರ್ ಮಂಡಳಿ ವಿವಾದಾತ್ಮಕ ದೃಶ್ಯಕ್ಕೆ ಕತ್ತರಿ ಹಾಕಿರುವ ಪ್ರಮಾಣ ಪತ್ರವನ್ನು ನೀಡಿದೆ. ನ್ಯಾಯಾಲಯಕ್ಕೆ, ವಕೀಲರಿಗೆ ಅಗೌರವ ಸೂಚಿಸುವುದಾಗಲಿ ಅಪಮಾನ ಮಾಡುವುದಾಗಲಿ ನಮ್ಮ ಉದ್ದೇಶವಾಗಿರಲಿಲ್ಲ. ಚಿತ್ರಕ್ಕೆ ಅತಿ ಅವಶ್ಯಕ ದೃಶ್ಯ ಅದಾಗಿತ್ತು. ಆ ಕಾರಣದಿಂದಾಗಿ ನಾವು ಅದನ್ನು ಚಿತ್ರೀಕರಿಸಿದ್ದೇವೆ. ವಕೀಲರಿಗೆ ಅವಮಾನ ಅಥವಾ ಮನಸಿಗೆ ನೋವಾಗಿದ್ದರೆ ದಯವಿಟ್ಟು ಕಕ್ಷಮಿಸಿ’ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಈ ದೃಶ್ಯದ ವಿರುದ್ಧ ಕಾನೂನು ಸಮರ ಸಾರಿದ್ ನಾರಾಯಣ ಸ್ವಾಮಿ ಹಾಗೂ ಇತರೆ ವಕೀಲರ ಬೇಡಿಕೆಯಂತೆ ಚಿತ್ರದ ದೃಶ್ಯಕ್ಕೆ ಕತ್ತರಿ ಬಿದ್ದಿದ್ದು, ಚಿತ್ರ ತಂಡ ಕ್ಷಮೆ ಕೋರಿದೆ. ಅದರೊಂದಿಗೆ ಅಂಜನಿಪುತ್ರ ಸಿನಿಮಾಕ್ಕೆ ಎದುರಾಗಿದ್ದ ಕಾನೂನು ವಿಘ್ನ ನಿವಾರಣೆಯಾಗಿದೆ.

-Ad-

Leave Your Comments