“ಅಂಜನಿಪುತ್ರ”ನಿಗೆ ದೊಡ್ಡ ಸಂಕಷ್ಟ !?

ಅಂಜನೀಪುತ್ರ ಚಿತ್ರಕ್ಕೆ ಮತ್ತೆ ಆತಂಕ ಎದುರಾಗಿದೆ. ಅಂಜನಿಪುತ್ರ ಚಿತ್ರ ಪ್ರದರ್ಶನ ನಿಲ್ಲಿಸಲು ಡಿಜಿಐಜಿಗೆ ನಿರ್ದೇಶನ ನೀಡಲಾಗಿದೆ. ಇಡೀ ರಾಜ್ಯಾದ್ಯಂತ ಚಿತ್ರ ಪ್ರದರ್ಶನ ‌ಸ್ಥಗಿತಗೊಳಿಸುವಂತೆ  ಸಿಟಿ ಸಿವಿಲ್ ಕೋರ್ಟ್ ನ್ಯಾ. ತಿಮ್ಮಣ್ಣಾಚಾರ ಅವರಿಂದ ಆದೇಶ ಹೊರಬಿದ್ದಿದೆ.
 ವಕೀಲರ ವಿರುದ್ಧ ಅವಹೇಳನಕಾರಿ ಡೈಲಾಗ್ ಹಿನ್ನಲೆ
ವಕೀಲರಾದ ನಾರಾಯಣ ಸ್ವಾಮಿ, ವಿಜಯ್ ಕುಮಾರ್ ಸೇರಿ ಐವರು ವಕೀಲರು ಅಂಜನೀಪುತ್ರ ಚಿತ್ರದಲ್ಲಿ ವಕೀಲರ ವಿರುದ್ಧ ಅವಹೇಳನಕಾರಿ ಡೈಲಾಗ್ ಇದ್ದು ,ಅದನ್ನು ತೆಗೆಯದ ಹೊರತು ಪ್ರದರ್ಶನಕ್ಕೆ ಅನುವು ಮಾಡಬಾರದೆಂದು ಅರ್ಜಿ ಸಲ್ಲಿಸಿದ್ದರು.ಚಿತ್ರ ಪ್ರದರ್ಶನಕ್ಕೆ ತಡೆ ನೀಡಿ ಕಳೆದ ಶನಿವಾರ ಕೋರ್ಟ್ ಆದೇಶ ನೀಡಿತ್ತು. ಆದರೂ ಚಿತ್ರ ತಂಡ ಪ್ರದರ್ಶನ ನಿಲ್ಲಿಸಿರಲಿಲ್ಲ. ಕೋರ್ಟ್ ಆದೇಶ ಪಾಲಿಸಿರಲಿಲ್ಲ. ನ್ಯಾಯಾಂಗ ನಿಂದನೆ‌ ಅಡಿಯಲ್ಲಿ‌ ಪ್ರಕರಣ ದಾಖಲು‌ ಮಾಡಿದ್ದ   ಅರ್ಜಿದಾರ ವಕೀಲರು ಪ್ರದರ್ಶನ ಸ್ಥಗಿತಗೊಳಿಸಲು ಡಿಜಿಪಿಗೆ ಸೂಚನೆ ನೀಡುವಂತೆ  ಮನವಿ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಧ್ಯಂತರ ತಡೆಯಾಜ್ಞೆ ಜಾರಿಗೊಳಿಸಲು ಡಿಜಿಪಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.
-Ad-

Leave Your Comments