ಶಿವಣ್ಣನ ಹುಟ್ಟುಹಬ್ಬಕ್ಕೆ ಅಪ್ಪು ಕೊಟ್ಟ್ಟ ಗಿಫ್ಟ್ ಏನು ? ಬೆಲೆ ಎಷ್ಟು ಅಂದ್ರೆ …

ಹ್ಯಾಟ್ರಿಕ್  ಹೀರೋ ,ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ೫೫ ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ನಿರ್ದೇಶಕರ, ನಿರ್ಮಾಪಕರ ನೆಚ್ಚಿನ ನಟ ಎನ್ನಿಸಿಕೊಂಡಿರೋ ಶಿವಣ್ಣರದು  ಅರ್ಧಶತಕ ಬಾರಿಸಿದ ಮೇಲೂ ಚಿತ್ರಗಳ ಲೆಕ್ಕದಲ್ಲಿ ನಿಲ್ಲದ ಓಟ… ಸಾಮಾನ್ಯವಾಗಿ ಮನೆಮಂದಿಯೆಲ್ಲಾ ಕುಳಿತು ನೋಡಬಹುದಾದ ಅನೇಕ ಸದಭಿರುಚಿಯ ಚಿತ್ರಗಳಲ್ಲಿ ನಟಿಸಿರುವ ಶಿವಣ್ಣ ಚಿತ್ರೀಕರಣದ ಸಮಯದಲ್ಲಾಗಲಿ , ಅಭಿಮಾನಿಗಳ ಜೊತೆಯಾಗಲಿ ಹಮ್ಮು ಬಿಮ್ಮು ತೋರದ ಪ್ರೇಕ್ಷಕ ಪ್ರೇಮಿ. ಚಿತ್ರರಂಗದ ಬಹುತೇಕ ಮಂದಿಗೆ ಶಿವಣ್ಣ ಇಷ್ಟವಾಗಿರೋದು ಅವರ ಸರಳತೆ ಮತ್ತು ವಿನಯದಿಂದ . ಸಮಯ ಪಾಲನೆಯಲ್ಲೂ ಹಿಂದೆ ಬಿದ್ದವರಲ್ಲ. ಸಹನಟರನ್ನು ಪ್ರೋತ್ಸಾಹಿಸುವುದನ್ನು ಮೈಗೂಡಿಸಿಕೊಂಡಿರುವ ಅಪರೂಪದ ನಟ. ಐವತ್ತು ದಾಟಿದರು ಕಸುವು ಕಳೆದುಕೊಳ್ಳದೆ ಮೈಕಟ್ಟು ಕಾಯ್ದುಕೊಂಡಿರುವ ವಜ್ರಕಾಯ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಪುನೀತ್ ಕೊಟ್ಟಿದ್ದೇನು ?

ಪುನೀತ್ -ಶಿವಣ್ಣ ಒಬ್ಬರನೊಬ್ಬರು ಪ್ರೋತ್ಸಾಹಿಸುತ್ತಾ, ಮೆಚ್ಚಿಕೊಳ್ಳುತ್ತಾ ಬಂದವರು . ಇತ್ತೀಚಿನ ಸೂಪರ್ ಹಿಟ್ ಚಿತ್ರ ರಾಜಕುಮಾರ ನೋಡಿ ಆನಂದಭಾಷ್ಪ ಸುರಿಸಿದ್ದರು ಶಿವಣ್ಣ. ಪುನೀತ್ ಕೂಡ ಶಿವಣ್ಣನ ಅಭಿನಯವನ್ನು ಸದಾ ಕಾಲ ಪ್ರಶಂಶಿಸಿದವರೇ ..

ಇದೀಗ ತನ್ನ ನೆಚ್ಚಿನ ಸಹೋದರ ಶಿವಣ್ಣನ ಹುಟ್ಟುಹಬ್ಬಕ್ಕೆ  ದುಬಾರಿ ಬೆಲೆಯ ಉಡುಗೊರೆ ಕೊಟ್ಟಿದ್ದಾರೆ . ಅದು ಸುಮಾರು ಮೂರು ಲಕ್ಷ ಬೆಲೆ ಬಾಳೋ ಬಿ ಎಮ್ ಡಬ್ಲ್ಯೂ ಸೈಕಲ್ !

ಅಣ್ಣ ತಮ್ಮರ ಬಾಂಧವ್ಯ ಹೀಗೇ ಮುಂದುವರೆಯಲಿ … ಶಿವಣ್ಣ ಸುಖವಾಗಿರಲಿ .ಇದು ciniadda.com ನ ತುಂಬು ಹಾರೈಕೆ ..

 

-Ad-

Leave Your Comments