ಅಪ್ಪು ಹೊಸ ಹೇರ್ ಸ್ಟೈಲ್ ಸಿಕ್ರೇಟ್ !

ಸಾಮಾನ್ಯವಾಗಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೇರ್‌ಕಟ್ ಮೇಲೆ ಎರ್ರಾ ಬಿರ್ರಿ ಎಕ್ಸ್‌ಪಿರಿಮೆಂಟ್ ಮಾಡಲ್ಲ…. ಅವ್ರು ಫ್ಯಾಮಿಲಿ ಸ್ಟಾರ್ ಆಗಿರೋದ್ರಿಂದ ಸಿಂಪಲ್ ಹೇರ್‌ಕಟ್ ಪ್ಲಸ್ ಸಿಂಪಲ್ ಲುಕ್ ಫಾಲೋ ಮಾಡ್ತಾರೆ….  ಸಡನ್ ಆಗಿ ಅಪ್ಪು ಮಿಲಿಟರಿ ಸ್ಟೈಲ್ ಹೇರ್‌ಕಟ್ ಮಾಡಿಸಿದ್ದಾರೆ. ಯಾಕೆ ಈ ಹೊಸ ಪ್ರಯೋಗ, ಅದಕ್ಕೆ ಕಾರಣವೂ ಇದೆ.
ಅಪ್ಪು ಮುಂದಿನ ಚಿತ್ರದಲ್ಲಿ ಈ ಲುಕ್‌ನಲ್ಲೇ ಇರ್ತಾರಾ !?
ದಟ್ಟನೆಯ ಕೇಶರಾಶಿ ಅಪ್ಪುಗೆ ದೇವರು ಕೊಟ್ಟ ವರ… ಇಷ್ಟೊಂದು ಸೊಗಸಾದ ಕೇಶವಿರುವಾಗ ಹೇರ್‌ಕಟ್ ಮೇಲೆ ಪ್ರಯೋಗ ಮಾಡೋ ಅವಷ್ಯಕತೆಯೇ ಇರಲ್ಲ.. ಹೀಗಾಗಿ ಅಪ್ಪು ಸಿನಿಮಾಗಳನ್ನ ಫಾಲೋ ಮಾಡ್ದೋರಿಗೆ ಗೊತ್ತಿರುತ್ತೆ.. ಅಪ್ಪು ಹೆಚ್ಚಾಗಿ ಆ ಕಟ್ ಈ ಕಟ್, ಕಲರ್ರು ಖದರ್ರು ಅಂತ ಪದೇ ಪದೇ ಚೇಂಚ್ ಮಾಡಲ್ಲ… ಅದೇ ರಾಜರತ್ನನ ಸ್ಟೈಲ್. ಹಾಗ್ ಬದಲಿಸೋ ಸಂದರ್ಭ ಬಂದ್ರೆ ಅಲ್ಲಲ್ಲೇ ಒಂಚೂರು ಡೀಸೆಂಟ್ ಆಗಿಯೇ ಕೇಶವಿನ್ಯಾಸ ಬದಲಿಸೋದುಂಟು.
ಆಫ್ಟರ್ ‘ಅಂಜನಿಪುತ್ರ’ ಅಪ್ಪು ಮುಂದಿನ ಚಿತ್ರಕ್ಕಾಗಿ ತಯಾರಾಗುತ್ತಿದ್ದಾರೆ. ಶಶಾಂಕ್ ನಿರ್ದೇಶನದ ಹೊಸ ಚಿತ್ರಕ್ಕೆ ಅಪ್ಪು ದಿನೇದಿನೇ ವರ್ಕೌಟ್ ಮಾಡುತ್ತಿದ್ದಾರೆ. ಕೊಂಚ ಬಾಡಿ ಗೇನ್ ಆಗಿದೆ. ಇದ್ರ ಜೊತೆಗೇ ಅಪ್ಪು ಹೇರ್‌ಸ್ಟೈಲ್ ಕೂಡ ಬದಲಾಗಿದೆ. ಮೊನ್ನೆ ಮೊನ್ನೆವರೆಗೆ ಇವರ ಹೇರ್‌ಕಟ್ ಮುಂಚಿನ ಥರಾನೇ ಇತ್ತು… ಆದ್ರೆ ಬುಧವಾರ ನಡೆದ  ರಾಜರಥ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಬರುವ ವೇಳೆ ಪುನೀತ್ ಹೇರ್‌ಕಟ್ ದಿಢೀರ್ ಅಂತ ಬದಲಾಯ್ತು.
ಮುಂದಿನ ಚಿತ್ರಕ್ಕಾಗಿ ತಯಾರಿನಾ ?
ಶಶಾಂಕ್ ಹೇಳುವ ಪ್ರಕಾರ ಮುಂದಿನ ಚಿತ್ರಕ್ಕಾಗಿ ಅಪ್ಪು ಈ ರೀತಿ ತಯಾರಾಗಿದ್ದಲ್ಲ… ಇನ್ನೂ ಎರಡು ತಿಂಗಳು ಟೈಂ ಇದೆ ಅಂತೆ. ಹಾಗಾದ್ರೆ ಅಪ್ಪು ಯಾಕಾಗಿ ಮಿಲಿಟರಿ ಕಟ್ ಮಾಡಿಸಿದ್ರು ಅಂತ ಉತ್ತರ ಹುಡುಕ್ತಾ ಹೋದ್ರೆ ಇದು ಅಪ್ಪು ಫೇವರೇಟ್ ಹೇರ್‌ಕಟ್ ಅನ್ನೋದು ಗೊತ್ತಾಯ್ತು. ಮುಂದಿನ ಚಿತ್ರ ಶುರುವಾಗುವವವರೆಗೂ ಅಪ್ಪು ಇನ್ನೆರಡು ತಿಂಗಳು ಫುಲ್ ವರ್ಕೌಟ್ ಮಾಡ್ತಾರೆ…  ಆಡಿಯೋ ಕಂಪನಿಯ ಕೆಲಸ ಕಾರ್ಯ, ನಿರ್ಮಾಣ ಸಂಸ್ಥೆಯ ಮುಂದಿನ ಚಿತ್ರಗಳ ಪ್ಲ್ಯಾನ್‌ನಲ್ಲಿ ಬ್ಯುಸಿ ಇರ್ತಾರೆ. ಹೀಗಾಗಿ ಇಂಥಹ ವೇಳೆಯಲ್ಲಾದ್ರೂ ಶಾರ್ಟ್ ಹೇರ್‌ಕಟ್‌ನಲ್ಲಿದ್ದರೆ ಒಳ್ಳೆಯದು ಅನ್ನೋದು ಅಪ್ಪು ಅಭಿಪ್ರಾಯ. ಇನ್ನು ಬೇಸಿಗೆ ಹತ್ತಿರ ಬರುತ್ತಿದೆ. ಈ ವೇಳೆ ಶಾರ್ಟ್‌ಹೇರ್ ಇದ್ರೆ ಕಂಫರ್ಟ್ ಇರುತ್ತೆ… ಜೊತೆಗೆ ಬೆವರು ಸುರಿಸಿ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ್ಲಂತೂ ಇದೇ ಬೆಸ್ಟ್ ಹೇರ್‌ಸ್ಟೈಲ್. ಹೀಗಾಗಿ ಇನ್ನೆರಡು ತಿಂಗಳು ಅಪ್ಪು ಇದೇ ಸ್ಟೈಲ್‌ನಲ್ಲಿ ಇರ್ತಾರೆ.
-Ad-

Leave Your Comments