ಆಸ್ಪತ್ರೆಯಲ್ಲಿ ಅಪ್ಪು ಕಣ್ಣೀರು!

ಉದ್ಯಮಿ ಪುತ್ರನಾಗಿರುವ ವಿದ್ವತ್ ಮೇಲೆ ಶಾಂತಿನಗರ ಶಾಸಕ ಎನ್.ಎ ಹ್ಯಾರಿಸ್ ಪುತ್ರ ಮಹಮ್ಮದ್ ಹ್ಯಾರಿಸ್ ನಲಪಾಡ್ ಹಲ್ಲೆ ಮಾಡಿದ್ದು, ವಿದ್ವತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಗಲಾಟೆ ನಡೆದ ಸಂದರ್ಭದಲ್ಲಿ ವಿದ್ವತ್ ಜೊತೆ ಡಾ. ರಾಜ್ ಕುಮಾರ್ ಮೊಮ್ಮಗ ರಾಘವೇಂದ್ರ ರಾಜ್ ಕುಮಾರ್ ಮಗ ಗುರು ಸ್ಥಳದಲ್ಲೇ ಇದ್ದು, ಗಲಾಟೆ ಬಿಡಿಸಲು ಯತ್ನಿಸಿದ್ರು ಅನ್ನೋದು ಗೊತ್ತಾಗಿತ್ತು. ಇದೀಗ ನಟ ಪುನೀತ್ ರಾಜ್ ಕುಮಾರ್ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಆರೋಗ್ಯ ವಿಚಾರಿಸಿದ್ದಾರೆ.

ವಿದ್ವತ್ ಪರಿಸ್ಥಿತಿ ಕಂಡು ಕಣ್ಣೀರಿಟ್ಟ ಅಪ್ಪು, ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದಿಷ್ಟು… ‘ಹಲ್ಲೆಗೊಳಗಾಗಿರುವ ವಿದ್ವತ್ ನಮ್ಮ ಫ್ಯಾಮಿಲಿ ಫ್ರೆಂಡ್, ಆತನನ್ನು ನಾನು ಚಿಕ್ಕವನಿಂದಲೂ ನೋಡಿದ್ದೀನಿ . ವಿದ್ವತ್ ನನ್ನ ತಮ್ಮನ ಹಾಗೆ. ಆತನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕಾನೂನಿಗಿಂತ ಯಾರು ದೊಡ್ಡವರಲ್ಲ.. ತಪ್ಪಿತಸ್ಥಿರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ.’

ಇನ್ನು ಪುನೀತ್ ರಾಜ್‍ಕುಮಾರ್ ಮಲ್ಯ ಆಸ್ಪತ್ರೆಗೆ ಭೇಟಿ ನೀಡುವ ಮುನ್ನ ರಾಘವೇಂದ್ರ ರಾಜ್‍ಕುಮಾರ್ ಮನೆಯಿಂದ ಊಟ ರವಾನೆ ಮಾಡಲಾಗಿತ್ತು. ಸ್ವತಃ ರಾಘವೇಂದ್ರ ರಾಜ್‍ಕುಮಾರ್ ಪುತ್ರ ಗುರು ರಾಘವೇಂದ್ರ ರಾಜ್‍ಕುಮಾರ್ ಊಟ ತಂದು ಕೊಟ್ರು.

ಜ್ಯೋತಿ ಗೌಡ, ನಾಗಮಂಗಲ

-Ad-

Leave Your Comments