“ಡಮ್ಕಿ ಡಮಾರ್” ಚಿತ್ರದಲ್ಲಿ ಅರ್ಜುನ್ ಜನ್ಯ ಮುನ್ನುಡಿ

ಲವ್, ಕಾಮಿಡಿ ಹಾಗೂ ಥ್ರಿಲ್ಲರ್ ಸಸ್ಪೆನ್ಸ್ ಕಥಾನಕ ಹೊಂದಿದ ಚಲನಚಿತ್ರ “ಡಮ್ಕಿ ಡಮಾರ್” ಸದ್ಯದಲ್ಲೇ ಚಿತ್ರ ಮಂದಿರಗಳಿಗೆ ಲಗ್ಗೆ ಇಡಲು ಸಿದ್ದವಾಗಿದೆ. ಈ ಚಿತ್ರದ ಆರಂಭದಲ್ಲಿ ಬರುವ ದೃಶ್ಯದಲ್ಲಿ  ಮುನ್ನುಡಿ ಹಾಗೂ ವಿವರಣೆಯನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನೀಡಿದ್ದಾರೆ. ಈಗಾಗಲೇ ಓರ್ವ ಯಶಸ್ವೀ ಸಂಗೀತ ನಿರ್ದೇಶಕನಾಗಿಯೂ ಗುರುತಿಸಿಕೊಂಡಿರುವ ಅವರು ಯಶಸ್ವಿ ಗಾಯಕನೂ ಹೌದು. ಈ ಚಿತ್ರದ ಆರಂಭದಲ್ಲಿ ಚಿತ್ರಕ್ಕೆ ಮುನ್ನುಡಿ ಹೇಳುವ ಮೂಲಕ ಹೊಸ ಸಾಹಸ ಮಾಡಿದ್ದಾರೆ.

arjun janya

ಹಲವಾರು ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಸದ್ಗುಣ ಮೂರ್ತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ 85 ಕ್ಕೂ ಹೆಚ್ಚು ಚಿತ್ರಗಳಿಗೆ ರೀ ರೆಕಾರ್ಡಿಂಗ್ ಮಾಡಿರುವ ಸದ್ಗುಣ ಮೂರ್ತಿ ಅವರ ಪುತ್ರ ಪ್ರದೀಪ್ ವರ್ಮ ಈ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ.
ಶ್ರೀ ಭೂಮಿಕ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ಶ್ರೀನಿವಾಸ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೇಲ್ಸ್ ಛಾಯಾಗ್ರಹಣ, ಎಸ್. ಪ್ರದೀಪ್ ವರ್ಮಾ ಸಂಗೀತ, ಸಾಯಿ ಸರ್ವೇಶ ಸಾಹಿತ್ಯ, ಕುಮಾರ ಕೋಟೆ ಕೊಪ್ಪ, ಸಂಕಲನ, ಇಂದ್ರಜಿತ್ ಸಹನಿರ್ಮಾಪಕರಾಗಿದ್ದು, ಪ್ರದೀಪ್ ವರ್ಮ, ಚೈತ್ರ ಶೆಟ್ಟಿ, ಜಗದೀಶ್ ವೆಂಕಿ, ಅನುಷ್ಕಾ ಶೆಟ್ಟಿ, ರಾಜೇಶ, ಶಿವಾನಂದ, ಸುನೀಲ್‍ಕುಮಾರ್, ರವಿರಾಜ್, ಅಂಬಿಕಾ, ಮಣಿ, ಶೋಭಿತಾ, ಇನ್ನು ಮುಂತಾದವರ ತಾರಾಬಳಗವಿದೆ.

-Ad-

Leave Your Comments