ನಟ ಅರ್ಜುನ್ ದೇವ್ ಮೇಲೆ ದಾಳಿ

ಯುಗಪುರುಷ ಚಿತ್ರದ ನಾಯಕ ನಟಅರ್ಜುನ್ ದೇವ್  ಮೇಲೆ ಹಲ್ಲೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ. ರಾಮನಗರದ ಬೆಂಗಳೂರು -ಮೈಸೂರು ಹೆದ್ದಾರಿಯ ಎಸ್ ಬಿ ಎಂ ಬ್ಯಾಂಕ್ ಎದುರು ಘಟನೆ ನಡೆದಿದೆ .

ಬೆಂಗಳೂರಿನಿಂದ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ  ನಾಲ್ಕೈದು ಜನರ ತಂಡ ಕಾರಿನಲ್ಲಿದ್ದ ನಟ ಅರ್ಜುನ್ ದೇವ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ರಾಡ್ ನಿಂದ ಕಾರ್ ಗ್ಲಾಸ್ ಪುಡಿಪುಡಿ ಮಾಡಿದ್ದಾರೆ .  ಅರ್ಜುನ್   ದೇವ್  ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಐಜೂರು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

-Ad-

Leave Your Comments