ಆಗಸ್ಟ್ 6ಕ್ಕೆ ಕುರುಕ್ಷೇತ್ರದ ಮುಹೂರ್ತ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಅಭಿಮನ್ಯು ಪಾತ್ರದಲ್ಲಿ ನಟಿಸಲಿರುವ ಸ್ಯಾಂಡಲ್ ವುಡ್ಡಿನ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರಕ್ಕೆ ಆಗಸ್ಟ್ 6ರಂದು ಮುಹೂರ್ತ ನಡೆಯಲಿದೆ.

ಕನ್ನಡ ಚಿತ್ರರಂಗದ ದೊಡ್ಡ ಬಜೆಟ್ ಚಿತ್ರ ಎಂಬ ಹೆಸರು ಪಡೆದಿರುವ ಕುರುಕ್ಷೇತ್ರ ಬಹು ತಾರಾಗಣವನ್ನೇ ಹೊಂದಿದ್ದು, ಈ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ನಿರ್ಮಾಪಕ ಮುನಿರತ್ನ ಹೊತ್ತುಕೊಂಡಿದ್ದಾರೆ. ಆಗಸ್ಟ್ 6ರ ಸಂಜೆ ಬೆಂಗಳೂರಿನ ತುಮಕೂರು ರಸ್ತೆಯ ಗೋರುಗುಂಟೆ ಪಾಳ್ಯದಲ್ಲಿರುವ ಡಾ|| ಪ್ರಭಾಕರ್ ಕೋರೆ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ.

-Ad-

Leave Your Comments