ಬಾಹುಬಲಿ-2 ಕಟ್ಟಪ್ಪ ಕಂಟಕ . ತಮಿಳುನಾಡಲ್ಲೂ ಶುರುವಾಗಿದೆ ತಕರಾರು .

ದೇಶದ ಬಹಳಷ್ಟು  ಸಿನಿಮಾ ಪ್ರೇಮಿಗಳು  ಎದುರು ನೋಡುತ್ತಿರುವ ಸಿನಿಮಾ ಬಾಹುಬಲಿ-2. ಆದ್ರೆ ಕರ್ನಾಟಕದಲ್ಲಿ  “ಕಟ್ಟಪ್ಪ ಕೈ ಮುಗಿದು ಕ್ಷಮೆ ಕೇಳಪ್ಪ ಇಲ್ಲಾ  ನೀನ್ ಅಲ್ಲೇ ಕೂತ್ಕಳಪ್ಪ” ಅಂದಿದ್ದು  ಗೊತ್ತೇ ಇದೆ . ಆದ್ರೆ ಈಗ  ಕರ್ನಾಟಕದಲ್ಲಿ  ಮಾತ್ರವಲ್ಲ ತಮಿಳುನಾಡಿನಲ್ಲೂ  ಬಾಹುಬಲಿ-2 ನಿಲ್ಲಿಸಿ ಅನ್ನೋ ಮಾತು ಕೇಳಿ ಬಂದಿದೆ .

ಬಾಹುಬಲಿಗೇಕೆ ನೋ ಎಂಟ್ರಿ?

ಕಟ್ಟಪ್ಪನ ಕನ್ನಡ ವಿರೋಧಿ ಹೇಳಿಕೆ ಮುಂದಿಟ್ಟು  ಶುರುವಾದ ಕಂಟಕ  ಕಡೆವರೆಗೂ ಕಾಡುವ ಹಾಗಿದೆ. ಅಷ್ಟಕ್ಕೂ ತಮಿಳುನಾಡು ಯಾಕೆ ಬಾಹುಬಲಿ-2 ಬೇಡ ಅಂತಿದೆ? ..

ಕಾರಣ ಇಷ್ಟೆ . ವಿತರಕರ ಒಳ ಜಗಳ ನೇರವಾಗಿ ಸಿನಿಮಾಗೆ ಹೊಡೆತ ಕೊಡ್ತಿದೆ. ಬಾಹುಬಲಿ 2′  ಚಿತ್ರವನ್ನು ತಮಿಳುನಾಡಿನ ವಿತರಕರಾದ ಶ್ರೀ ಗ್ರೀನ್ ಪ್ರೊಡಕ್ಷನ್ಸ್ ಪಡೆದಿತ್ತು . ಅದರ ವಿರುದ್ಧ ಚೆನ್ನೈ ಮೂಲದ ಎಸಿಇ ಮೀಡಿಯಾ ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಿದೆ.

ಕಳೆದ ಜನವರಿಯಲ್ಲಿ ಶ್ರೀ ಗ್ರೀನ್ ಪ್ರೊಡಕ್ಷನ್ಸ್‌ ಮುಖ್ಯಸ್ಥ ಎಂ ಎಸ್ ಶರವಣನ್, ಎಸಿಇ ಮೀಡಿಯಾದಿಂದ  1.8 ಕೋಟಿ ಸಾಲ ಪಡೆದಿದ್ರಂತೆ. ಚಿತ್ರ ರಿಲೀಸ್ ಆಗುವ ಮುನ್ನ 10 ಲಕ್ಷ ರೂ ಬಡ್ಡಿ ಸೇರಿಸಿ ಎಲ್ಲಾ  ಹಣವನ್ನು ಕೊಡ್ತೀನಿ ಅಂತ ಹೇಳಿದ್ರಂತೆ.ಆದ್ರೀಗ ಚಿತ್ರ ಬಿಡುಗಡೆಯಾದ ಮೇಲೆ ಹಣ ನೀಡ್ತೀನಿ ಅಂತ ಉಲ್ಟಾ ಹೊಡೆದಿದ್ದಾರೆ. ಒಪ್ಪಂದದ ಪ್ರಕಾರ ಚಿತ್ರ ಬಿಡುಗಡೆಗೆ ಮುನ್ನ ಹಣ ಪಾವತಿ ಆಗಬೇಕು, ಅಲ್ಲಿಯವರೆಗೂ ‘ಬಾಹುಬಲಿ-2’ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಒತ್ತಾಯಿಸಿದ್ದಾರೆ.

ಆದ್ರೆ ಕೋರ್ಟ್ ಮಾತ್ರ ಈ ವಿಚಾರಣೆಯನ್ನ ಮುಂದೂಡಿದ್ದು ಏನು ನಿರ್ಧರಿಸುತ್ತೊ ಗೊತ್ತಿಲ್ಲ. ವಿತರಕರ ಸಮಸ್ಯೆಯಿಂದ ಬಾಹುಬಲಿ-೨ ಸಿನಿಮಾಗೆ ಹೊಡೆತ ಬಿದ್ದಿರೋದೊಂತು ನಿಜ

ಇದೊಂದೆಡೆಯಾದ್ರೆ ಕಟ್ಟಪ್ಪನ ಹೇಳಿಕೆ ರಾದ್ಧಾಂತ ಎಬ್ಬಿಸಿದೆ. ಕನ್ನಡ ಅಭಿಮಾನಿಗಳಿಗೆ  ಬೇಡವಾಗಿರೋ ಬಾಹುಬಲಿ ಅದ್ಹೇಗೆ ಒಳ ಸೇರ್ತಾನೆ ಕಾದು ನೋಡಲೇಬೇಕು.

-Ad-

Leave Your Comments