ಬಾಹುಬಲಿ ವಿವಾದದಲ್ಲಿ ಸತ್ಯರಾಜ್ ಸುದೀಪ್ ಕ್ಷಮೆ ಕೇಳಿದ್ರಾ..?

ನಿಮಗೆಲ್ಲಾ ಸತ್ಯರಾಜ್ ಕಾವೇರಿ ವಿಚಾರದಲ್ಲಿ ಕೆಟ್ಟದಾಗಿ ಮಾತನಾಡಿದಕ್ಕೆ ಕನ್ನಡಿಗರು ಬಾಹುಬಲಿ ಸಿನಿಮಾ ರಿಲೀಸ್ ಆಗಲು ಬಿಡಲ್ಲ ಅಂತಾ ಪಟ್ಟು ಹಿಡಿದಿದ್ದ ವಿಚಾರ ಗೊತ್ತಿದೆ. ಇದಾದ ಮೇಲೆ ಸತ್ಯರಾಜ್ ಒಲ್ಲದ ಮನಸ್ಸಿಂದ ವಿಷಾದ ವ್ಯಕ್ತಪಡಿಸಿದ ಬಳಿಕ ಸಿಡಿದೆದ್ದಿದ್ದ ಕನ್ನಡಿಗರು ಹಾಗೆ ಬೆಕ್ಕಿನ ಮರಿಯ ರೀತಿ ತಲೆ ಬಾಗಿದ್ದೂ ಗೊತ್ತಿದೆ. 9 ವರ್ಷಗಳ ಬಳಿಕ ವಿವಾದ ಕೆದಕ್ಕಿದ್ದು ಯಾಕೆ..? ವಿಷಾದ ಎನ್ನುತ್ತಿದ್ದ ಹಾಗೆ ಬಾಲ ಅಲ್ಲಾಡಿಸುತ್ತಾ ನೀವು ನೋಡಿ ನಾನು ನೋಡ್ತೀನಿ..ರಾಜಮೌಳಿ ಬಗ್ಗೆ ಅಪಾರ ಗೌರವಿದೆ ಅಂತಾ ನುಡಿಮುತ್ತು ಉದುರಿಸಿದ್ದು ಯಾಕೆ ಅನ್ನೋದು ನಿಜವಾದ ಕನ್ನಡಿಗರಿಗೆ ಇನ್ನೂ ಗೊತ್ತಾಗಿಲ್ಲ.. ಇದು ಒಂದು ಕಡೆಗೆ ಇರಲಿ..

ಆದರೆ ಬಾಹುಬಲಿ ಮೊದಲ ಭಾಗದಲ್ಲಿ ಅಭಿನಯ ಮಾಡಿದ್ದ ಕನ್ನಡದ ಕಿಚ್ಚ ಸುದೀಪ್ ಬಳಿ ಸತ್ಯರಾಜ್ ಕ್ಷಮೆಯಾಚನೆ ಮಾಡಿದ್ರಾ..? ಅದಾದ ಮೇಲೆನಾ ವಿವಾದ ಬಗೆಹರಿದಿದ್ದು..? ಈ ರೀತಿಯ ಪ್ರಶ್ನೆ ಹುಟ್ಟಲು ಕಾರಣವಿದೆ. ಬಾಹುಬಲಿ ಸಿನಿಮಾ ರಿಲೀಸ್ ಆಗೋಕೆ ಇರೋದು 2 ದಿನಗಳು ಮಾತ್ರ ಎನ್ನುವಾಗ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ಓಡಾಡುತ್ತಿದೆ.. ಆ ವೀಡಿಯೋದಲ್ಲಿ ನಟ ಸತ್ಯರಾಜ್ ಸುದೀಪ್ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ..

ಕನ್ನಡದಲ್ಲೇ ಕ್ಷಮೆ ಯಾಚಿಸಿದ್ರಾ ಸತ್ಯರಾಜ್..?!

ಹೌದು ಆ ವೀಡಿಯೋದಲ್ಲಿ ಸತ್ಯರಾಜ್ ಕನ್ನಡದಲ್ಲೇ ಮಾತನಾಡಿದ್ದು, ನಾನು ಆ ರೀತಿ ಹೇಳಿಕೆ ನೀಡಿದ್ದು ತಪ್ಪು ನನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡಿದ್ದಾರೆ. ಸುದೀಪ್ ಕೂಡ ಕನ್ನಡಿಗರು ಸಂಕುಚಿತ ಮನೋಭಾವನೆ ಹೊಂದಿಲ್ಲ. ಕ್ಷಮೆ ಕೇಳಿದ ಬಳಿಕ ಕ್ಷಮಿಸುವ ದೊಡ್ಡ ಗುಣ ಹೊಂದಿದ್ದಾರೆ, ಸಿನಿಮಾ ರಿಲೀಸ್ ಗೆ ಯಾವುದೇ ತೊಂದರೆ ಆಗಲ್ಲ ಅಂತಾ ಭರವಸೆ ನೀಡಿದ್ದಾರೆ.

ಸತ್ಯರಾಜ್ ಅಂತೂ  ಬೇಷರತ್ ಕ್ಷಮೆ ಕೇಳಲಿಲ್ಲ .ಕೊಟ್ಟ ಸ್ಕ್ರಿಪ್ಟ್ ಓದಿ ವಿಷಾದ ಒದರಿ ಎದ್ದು ಹೋದರು.     ಸತ್ಯರಾಜ್ ತಲೆ ತಗ್ಗಿಸಿ ಕ್ಷಮೆಯಾಚಿಸುವುದನ್ನು ನೋಡಬೇಕು ಅಂತ ಬಯಸುವ ಜನರಿಗಂತೂ ಈ ಟ್ರಾಲ್ ವಿಡಿಯೋ ಕೊಂಚ ಸಮಾಧಾನ ಕೊಡೋದಂತೂ ಗ್ಯಾರಂಟಿ.

ಚಂದುದೀಪ, ಕುಂಭೇನಹಳ್ಳಿ, ಹಾಸನ

-Ad-

Leave Your Comments