ಬಾಹುಬಲಿ ಸಿನಿಮಾ ಲೀಕ್!!

ಬಾಹುಬಲಿ ಟು ನಾಳೆ ವಿಶ್ವಾದ್ಯಂತ ೮ ಸಾವಿರ ಸ್ಕ್ರೀನ್ ನಲ್ಲಿ ಬರಲು ಸಜ್ಜಾಗಿದೆ. ಇನ್ನೊಂದು ದಿನ ಕಾಯಲು ಸಾಧ್ಯವಿಲ್ಲದ ಜನರು ಯಾವಾಗ ಬೆಳಗಾಗುತ್ತೋ ಸಿನಿಮಾದಲ್ಲಿ ಕನ್ ಕ್ಲೂಸನ್ ಏನಾಗಿದೆಯೋ ಅನ್ನೋದನ್ನು ಕಾತುರದಲ್ಲಿ ಕಾಯುತ್ತಿದ್ದಾರೆ.
ಬಾಹುಬಲಿಗೆ ರಾಜ್ಯಭಾರದ ಅದೃಷ್ಟವಿಲ್ಲ..!
ಬಾಹುಬಲಿ ಮೊದಲ ಭಾಗದ ಯುದ್ಧದ ವೇಳೆ ಕ್ಲೈಮ್ಯಾಕ್ಸ್ ನಲ್ಲಿ ಯುದ್ಧ ಗೆದ್ದ ಬಳಿಕ, ರಾಣಿ ಶಿವಗಾಮಿ ಒಂದು ಘೋಷಣೆ ಮಾಡ್ತಾರೆ. ಅದೇನಂದ್ರೆ ಬಾಹುಬಲಿ ರಾಜನಾದ್ರೆ ಆತನ ಸಹೋದರ ಬಲ್ಲಾಳರಾಯ ಸೇನಾಧಿಪತಿ ಅಂತ. ಅದಕ್ಕೆ ರಾಣಿ ಕೊಡುವ ಸಮರ್ಥನೆ ಸಿನಿಮಾ ನೋಡಿದ ಪ್ರೇಕ್ಷಕನೂ ಸಮರ್ಥಿಸುವಂತಿದೆ..
ಆದ್ರೆ ಸಿನಿಮಾ ಎರಡನೇ ಭಾಗದಲ್ಲಿ ಅದು ಉಲ್ಟಾ ಆಗಿದೆ. ಬಾಹುಬಲಿ ಸಿನಿಮಾದಲ್ಲಿ ಮೊದಲೇ ಕೌತುಕ ಕಾಯ್ದುಕೊಂಡಿದ್ದ ನಿರ್ದೇಶಕ ರಾಜಮೌಳಿ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ರಾಣಿಯ ಆದೇಶವನ್ನು ಉಲ್ಲಂಘನೆ ಮಾಡಿ, ನಿರ್ದೇಶಕರು ಬಲ್ಲಾಳರಾಯನನ್ನು ರಾಜನನ್ನಾಗಿ ಮಾಡಿದ್ದು, ಬಾಹುಬಲಿಯನ್ನು ಸೇನಾಧಿಪತಿಯನ್ನಾಗಿ ಮಾಡಿದ್ದಾರೆ..
ಈ ಮಾತು ಸುಳ್ಳಲ್ಲ..ಇದನ್ನು ಸಿನಿಮಾದಲ್ಲೇ ಇದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸಿನಿಮಾದ ಒಂದು ತುಣುಕು ಲೀಕ್ ಆಗಿದೆ. ಅದನ್ನ ಸಿನಿತಂಡವೇ ಲೀಕ್ ಮಾಡಿದ್ಯಾ ಇಲ್ಲಾ ನಿಜವಾಗಿಯೇ ಲೀಕ್ ಆಗಿದ್ಯಾ ಅನ್ನೋದು ಗೊತ್ತಾಗಿಲ್ಲ. ಆದ್ರೆ ವಾಟ್ಸಪ್ ಮೂಲಕ ಹರಿದಾಡಿದ್ದು ಸತ್ಯ. ಇದೀಗ ವಿಶ್ವದಾದ್ಯಂತ ಯು ಟ್ಯೂಬ್ ನಲ್ಲೂ ತಡೆ ಹಿಡಿಯಲಾಗಿದೆ.
-Ad-

Leave Your Comments