ಅಂಜನಿಪುತ್ರನಿಗೆ ಅದೃಷ್ಟವೇ ಸರಿ ಇಲ್ಲ.. ಯಾಕೆ ಗೊತ್ತಾ..?

ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದ ಬೃಹತ್ ಫ್ಲೆಕ್ಸ್ ಗಳನ್ನ ಕಿಡಿಗೇಡಿಗಳು ಹರಿದಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆಯ ಶಿವಗಂಗಾ ಚಿತ್ರಮಂದಿರದಲ್ಲಿ ನಡೆದಿದೆ..
ತಡರಾತ್ರಿ ಕುಡಿದ ಮತ್ತಿನಲ್ಲಿ ಕೆಲ ಕಿಡಿಗೇಡಿಗಳು ಫ್ಲೆಕ್ಸ್ ಸಂಪೂರ್ಣ ಹರಿದು ಹಾಕಿದ್ದಾರೆ..ಚಿತ್ರೆ ತೆರೆ ಕಂಡ ದಿನದಂದು ಕೊರಟಗೆರೆಯಲ್ಲಿ ಡಾ.ರಾಜ್ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪುನೀತ್ ಅಭಿಮಾನಿಗಳು ಚಿತ್ರಮಂದಿರದ ಎದುರು ಬೃಹತ್ ಫ್ಲೆಕ್ಸ್ ಗಳನ್ನ ಹಾಕಿದ್ದರು..ಇದೀಗ ಫ್ಲೆಕ್ಸ್ ಹರಿದು ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ..ಇನ್ನೂ ಫ್ಲೆಕ್ಸ್ ಹರಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಕಿಡಿಗೇಡಿಗಳ ವಿರುದ್ದ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..
ಇನ್ನೂ ವಕೀಲರಿಗೆ ಅವಮಾನ ಮಾಡುವಂತೆ ಚಿತ್ರ ಸಂಭಾಷಣೆ ಇದೆ ಅನ್ನೋ ಕಾರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಶನಿವಾರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ್ದರೂ ಭಾನುವಾರ ಹಾಗೂ ಸೋಮವಾರ ಪ್ರದರ್ಶನ ಯಥಾಸ್ಥಿತಿ ಆಗಿರೋದ್ರಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ವಕೀಲರು ಸಜ್ಜಾಗಿದ್ದಾರೆ.
-Ad-

Leave Your Comments