ಬಾಹುಬಲಿಗೇ ಬಲಿ.. ಕೊಡದಿದ್ರೆ ಹುಷಾರ್ !

ಬಾಹುಬಲಿ ಸಿನಿಮಾ ಜಗತ್ತಿನಾದ್ಯಂತ 1500 ಕೋಟಿ ಹಣ ಗಳಿಸಿ ಜನಮೆಚ್ಚುಗೆ ಪಡೆದಿದೆ. ಇನ್ನೂ  ಕೂಡ ಜನರಿಂದ ತುಂಬಿ ತುಳುಕುವ ಮೂಲಕ 2000 ಕೋಟಿ ರೂಪಾಯಿ ಬಾಚಿ , ಭಾರತದ ಬಾಕ್ಸ್ ಆಫೀಸ್ ಲೂಟಿ ಮಾಡಿ ದಾಖಲೆ ನಿರ್ಮಾಣದ ಗುರಿ ಹೊಂದಿದೆ. ಆದ್ರೆ ಬಾಹುಬಲಿಗೆ ಇದೀಗ ದೊಡ್ಡ ಸಮಸ್ಯೆಯೊಂದು ಎದುರಾಗಿದ್ದು, ಗುರಿ ಈಡೇರಿಕೆಗೆ ಅಡ್ಡಿಯಾಗಿದೆ.

2 ಕೋಟಿಗೆ ಹ್ಯಾಕರ್ಸ್ ಗಳಿಂದ ಡಿಮ್ಯಾಂಡ್..

ಪ್ರಪಂಚದಾದ್ಯಂತ ವನ್ನಾ ಕ್ರೈ ಹ್ಯಾಕರ್ಸ್ ಗಳು ಭಾರಿ ಸುದ್ದಿ ಮಾಡಿದ್ದು, ಎಲ್ಲಾ ದಾಖಲೆಗಳನ್ನು ಕದಿಯುವ ಜೊತೆಗೆ ದಾಖಲೆ ಡಿಲೀಟ್ ಮಾಡಿ ಸಂಕಷ್ಟ ಕೊಡುವ ಯೋಜನೆ ಮಾಡಿದ್ದಾರೆ. ಈ ಹ್ಯಾಕರ್ಸ್ ಗಳ ಕಣ್ಣಿಗೆ ಬಾಹುಬಲಿ ಸಿನಿಮಾ ಕೂಡ ಬಿದ್ದಿದ್ದು, ಬಾಹುಬಲಿ ಸಿನಿಮಾ ನಿರ್ಮಾಪಕರನ್ನು ಕಾಡ್ತಿದ್ದಾರೆ. ನಿಮ್ಮ ಸಿನಿಮಾ ಹೀಗೆ ಥಿಯೇಟರ್ ನಲ್ಲಿ ಓಡಬೇಕಿದ್ರೆ ನಮಗೆ 2 ಕೋಟಿ ಹಣ ಕೊಡಬೇಕು. ಇಲ್ಲದಿದ್ದರೆ  ಸ್ಯಾಟಲೈಟ್ ಮೂಲಕ ನಿಮ್ಮ ಬಾಹುಬಲಿ ಹೆಚ್ ಡಿ ಕ್ವಾಲಿಟಿ ಸಿನಿಮಾವನ್ನು ಕದ್ದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡ್ತೇವೆ ಅಂತ ಬೆದರಿಸಿದ್ದಾರೆ.

500 ಕೋಟಿಗಾಗಿ ಕೊಡ್ತಾರಾ 2 ಕೋಟಿ?

ಇನ್ನೂ 500 ಕೋಟಿ ಗಳಿಸುವ ಭರವಸೆ ನಿರ್ಮಾಪಕರಲ್ಲಿದೆ. ಹೀಗಾಗಿ ಹ್ಯಾಕರ್ಸ್ ಗಳು ಕೇಳಿರುವ 2 ಕೋಟಿ ಹಣವನ್ಮು ಕೊಡ್ತಾರಾ ಅನ್ನೋ ಪ್ರಶ್ನೆ ಕಾಡ್ತಿದೆ. ಆದ್ರೆ ಒಮ್ಮೆ ಈ ರೀತಿ ಶರಣಾದರೆ  ಮುಂದಿನ ದಿನಗಳಲ್ಲಿ ಇದೇ ರೀತಿ ಹ್ಯಾಕರ್ಸ್ ಗಳ ಕಪಿಮುಷ್ಠಿಗೆ ಸಿಲುಕುವ ಭೀತಿಯೂ ಹಾಲಿವುಡ್, ಬಾಲಿವುಡ್ ಜನರನ್ನು ಕಾಡ್ತಿದೆ.

-Ad-

Leave Your Comments