ಬಾಹುಬಲಿಗೆ ಭಲೇ ಎಂದ ಕನ್ನಡಿಗರು..!

ಬಾಹುಬಲಿ ಜಗತ್ತಿನಾದ್ಯಂತ ಸಂಚಲನ ಮೂಡಿಸಿರುವ ಸಿನಿಮಾ. ವಿಶ್ವದಾದ್ಯಂತ 9 ಸಾವಿರ ಥಿಯೇಟರ್ ನಲ್ಲಿ ತೆರೆಕಂಡಿದ್ದು ನಿರ್ದೇಶಕ ರಾಜಮೌಳಿಗೆ ಮತ್ತೊಂದು  ಭರ್ಜರಿ ಯಶಸ್ಸು ಸಿಕ್ಕಂತಾಗಿದೆ.. ಸಿನಿಮಾ ನೋಡಿದ ಪ್ರತಿಯೊಬ್ಬರೂ  ಹೇಳುತ್ತಿರುವ  ಮಾತು ಅಂದ್ರೆ ಮೊದಲ ಬಾಹುಬಲಿಗಿಂತ ಬಾಹುಬಲಿ 2 ಕನ್ಲುಷನ್ ಅದ್ಬುತವಾಗಿದೆ. ಚಿತ್ರ ಕಥೆ ,ಟ್ವಿಸ್ಟ್, ಕ್ಲೈಮ್ಯಾಕ್ಸ್ ಗಿಂತಲೂ ಹಿನ್ನೆಲೆ ಸಂಗೀತ ಹಾಗೂ ದೃಶ್ಯ ವೈಭವ ಕಣ್ತುಂಬಿಕೊಳ್ಳಬೇಕು ಅದೇ ಸಿನಿಮಾದ ಚುಂಬಕ ಶಕ್ತಿ   ಅಂತಿದ್ದಾರೆ.
ನಿನ್ನೆ ರಾತ್ರಿಯೇ ಸಿನಿಮಾ ರಿಲೀಸ್ ಆಗಿದ್ದು ಮಧ್ಯರಾತ್ರಿ ಅನ್ನೋದನ್ನು ಕಾಣದೆ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದಾರೆ.
ಅದರಲ್ಲು ಅಮೆರಿಕ ಒಂದರಲ್ಲೇ 1400 ಥಿಯೇಟರ್ನಲ್ಲಿ ಬಾಹುಬಲಿ ಅಬ್ಬರಿಸುತ್ತಿದ್ದು, ಉಳಿದ ದೇಶಗಳಲ್ಲಿ 1100 ಸ್ಕ್ರೀನ್ ನಲ್ಲಿ ತೆರೆಕಂಡಿದೆ..
ನಾವು ಕನ್ನಡಿಗ ಭಾಷಿಕರಾಗಿದ್ದರೂ ಕರ್ನಾಟಕದಲ್ಲಿ‌ ಕನ್ನಡ ಸಿನಿಮಾ ಒಂದು ನೂರು ಥಿಯೇಟರ್‌ನಲ್ಲಿ ಬಿಡುಗಡೆ ಆಗುತ್ತೆ.. ಅದನ್ನೂ ಮೀರಿದ ಸಿನಿಮಾ ದೊಡ್ಡ ಸ್ಟಾರ್ ನಟರು ನಟಿಸಿದ್ದಾರೆ ಎಂದರೆ ಇನ್ನೂರು ಸ್ಕ್ರೀನ್ ಮುಟ್ಟಬಹುದು..   ಆದ್ರೆ ರಾಜಮೌಳಿ ನಿರ್ದೇಶನದ ಸಿನಿಮಾ ನಾಲ್ಕುನೂರು ತೆರೆಯಲ್ಲಿ ಪ್ರದರ್ಶನ ಗೊಳ್ಳುತ್ತಿರೋದು ಕ್ವಾಲಿಟಿ ಆಫ್ ಫಿಲ್ಮ್ ಮೇಕಿಂಗ್ ತೋರಿಸುತ್ತೆ..
ಇನ್ನುಳಿದಂತೆ ಮಂಡ್ಯ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕಾರವಾರದಲ್ಲಿ ಬಾಹುಬಲಿ ಸಿನಿಮಾ ರಿಲೀಸ್ ಆಗಿದ್ದರೂ ಜನ ಮಾತ್ರ ಸಾಗರೋಪಾದಿಯಲ್ಲಿ ಹರಿದುಬರ್ತಿಲ್ಲ. ತಕ್ಕಮಟ್ಟಿಗೆ ಜನ ಬರ್ತಿದ್ದಾರೆ.
ಇವತ್ತು ಒಂದೇ ದಿನದಲ್ಲಿ 200 ಕೋಟಿಯನ್ನು ತನ್ನ ಖಜಾನೆಗೆ ಸೇರ್ಪಡೆ ಮಾಡಿಕೊಂಡಿರುವ ಬಾಹುಬಲಿ 1 ಸಾವಿರ ಕೋಟಿ‌ ಲೂಟಿ ಮಾಡುತ್ತೆ ಅಂತಾ ಸಿನಿಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.. 
ಅದೇನೇ ಆಗಲಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಗಳಿಸಿಕೊಂಡ ಬಾಹುಬಲಿ ಚಿತ್ರದ ಎದುರು ಇಡೀ ದಕ್ಷಿಣ ಭಾತರದ ಯಾವ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಿಲ್ಲ. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಕುತೂಹಲ ಕೆರಳಿಸಿದ್ದ ಸಿನಿಮಾ ಬಾಹುಬಲಿ ಜನರ ಭರವಸೆ ಉಳಿಸಿದೆ.. ಸಿನಿಮಾ ನೋಡಿದ ಜನ  ಭಲೇ ಬಾಹುಬಲಿ ಎನ್ನುತ್ತಿದ್ದಾರೆ..
-Ad-

Leave Your Comments