ನೆಟ್ ಫ್ಲಿಕ್ಸ್ ನಲ್ಲಿ ಬಾಹುಬಲಿ2 ಅಬ್ಬರ!

ಶತದಿನ ಪೂರೈಸಿರುವ `ಬಾಹುಬಲಿ-2′ ಚಿತ್ರ ಪ್ರಾರಂಭದಿಂದಲೂ ದಾಖಲೆಗಳಿಂದ ಸುದ್ದಿಯಾಗಿತ್ತು. ಇದೀಗ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರವನ್ನು ಹಿಂದಿಕ್ಕಿರುವ ಬಾಹುಬಲಿ 2 ಮತ್ತೊಂದು ದಾಖಲೆ ಬರೆದಿದೆ.

ಹೌದು, ಬಾಹುಬಲಿ-2 ಚಿತ್ರದ ಪ್ರಸಾರ ಹಕ್ಕನ್ನು 25.5 ಕೋಟಿ ರೂ.ಗೆ ನೆಟ್ ಫ್ಲಿಕ್ಸ್ ಖರೀದಿ ಮಾಡಿದೆ. ನೆಟ್ ಫ್ಲಿಕ್ಸ್ ಬಿಡ್ಡಿಂಗ್ ನಲ್ಲಿ ಅಮೀರ್ ಖಾನ್ ರ ದಂಗಲ್ ಚಿತ್ರವನ್ನು ಹಿಂದಿಕ್ಕಿದೆ. ದಂಗಲ್ ಚಿತ್ರದ ಪ್ರಸಾರ ಹಕ್ಕು 20 ಕೋಟಿಗೆ ಮಾರಾಟವಾಗಿತ್ತು. ಇದೀಗ ಬಾಹುಬಲಿ 2 ಚಿತ್ರ 25.5 ಕೋಟಿ ರೂ.ಗೆ ಮಾರಾಟವಾಗಿ ಹೊಸ ದಾಖಲೆ ಬರೆದಿದೆ.

ಏ.28 ರಂದು ಬಿಡುಗಡೆಯಾಗಿ ಈಗಾಗಲೇ 100 ದಿನ ಪೂರೈಸಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಾಹುಬಲಿ 2 ಚಿತ್ರವನ್ನು ಆನ್ ಲೈನ್ ಪೋರ್ಟಲ್ ನಲ್ಲಿ 192 ದೇಶಗಳ ಜನರು ವೀಕ್ಷಿಸಬಹುದಾಗಿದೆ. ದಂಗಲ್ ಚಿತ್ರದ ಕಲೆಕ್ಷನ್ 1864 ಕೋಟಿ ರೂ. ಇದ್ದರೆ ಬಾಹುಬಲಿ 2 ಚಿತ್ರದ ಕಲೆಕ್ಷನ್ 1700 ಕೋಟಿ ರೂ. ಆಗಿದೆ. ದಂಗಲ್ ಮತ್ತು ಬಾಹುಬಲಿ-2 ಸಿನೆಮಾಗಳನ್ನು ನೆಟ್ ಫ್ಲಿಕ್ಸ್ ನಲ್ಲಿ ವೀಕ್ಷಿಸಬಹುದಾಗಿದೆ

-Ad-

Leave Your Comments