ಬಾಹುಬಲಿ ತೋಳು ಬಳಸುವ ಸುಂದರಿ ಯಾರು..?

 

ತೆಲುಗಿನ ಸೂಪರ್ ಹಿಟ್ ಮೂವಿ ಬಾಹುಬಲಿ 2 ಸಿನಿಮಾ ಇದೇ ತಿಂಗಳ 28ರಂದು ತೆರೆಗೆ ಬರಲು ಸಿದ್ಧವಾಗಿದೆ. ಕನ್ನಡಿಗರನ್ನು ಅವಮಾನ ಮಾಡಿದ್ದಾರೆ, ಹಾಗೆ ಹೀಗೆ ಅಂತೆಲ್ಲಾ ಸಾಕಷ್ಟು ವಿವಾದ ಹೊತ್ತುಕೊಂಡಿರುವ ಸಿನಿಮಾದ ಇಂಟರೆಸ್ಟಿಂಗ್ ಸ್ಟೋರಿ ನಾವು ಹೇಳ್ತೀವಿ ನೋಡಿ.

ಬಾಹುಬಲಿ ಪಾತ್ರ ನಿರ್ವಹಿಸಿರುವ ಟಾಲಿವುಡ್‍ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಪ್ರಬಾಸ್‍ಗೆ ಹುಡುಗೀರ ಕಾಟ ಜಾಸ್ತಿಯಾಗಿದೆಯಂತೆ. ಅದೂ ಕೂಡ ಬಾಹುಬಲಿ ಸಿನಿಮಾ ಬಿಡುಗಡೆ ಆದ್ಮೇಲಂತೂ ಎಲ್ಲೋದ್ರು ಹುಡುಗೀರು ಹಿಂದೆ ಬೀಳ್ತಿದ್ದಾರೆ. ಅದ್ರು ಜೊತೆಗೆ ನಾನು ಮದ್ವೆ ಮಾಡ್ಕೊಳ್ಳೋಕೆ ರೆಡಿ..! ನೀವು ಓಕೆ ಅಂದ್ರೆ ಸಾಕು ಅಂತಿದ್ದಾರೆ.
ಸಂಕೋಚ ಸ್ವಭಾವದ ಪ್ರಭಾಸ್‍ಗೆ ಹೆಚ್ಚುಕಡಿಮೆ 6 ಸಾವಿರ ಲವ್ ಲೆಟರ್ಸ್ ಬಂದಿವೆಯಂತೆ. ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹಿಂದ ಬಿದ್ದಿರುವ ವಿಚಾರವನ್ನು ಸ್ವತಃ ಪ್ರಭಾಸ್ ಹೇಳಿಕೊಂಡಿದ್ದಾರೆ. ಪ್ರಭಾಸ್ ತಾಯಿ ಕೂಡ ಇದು ನಿಜ ಎಂದಿದ್ದಾರೆ. ಆದ್ರೆ ಇನ್ನೂ ಯಾರಿಗೆ ತಾಳಿ ಕಟ್ಟಬೇಕು ಅನ್ನೋ ನಿರ್ಧಾರಕ್ಕೆ ಪ್ರಭಾಸ್ ಬಂದಿಲ್ಲ.. ನೀವೂ ಕೂಡ ಆ ಲಿಸ್ಟ್‍ನಲ್ಲಿ ಇದ್ರೆ ಆದಷ್ಟು ಬೇಗ ಮತ್ತೊಂದೆರಡು ಪ್ರಪೋಸಲ್ ಕಳಿಸಿಬಿಡಿ..

  • ಜೋಮ, ಮಂಡ್ಯ
-Ad-

Leave Your Comments