ಬಾಹುಬಲಿ ಟಿಕೇಟ್ ಗಾಗಿ ಬೆಂಕಿ ಹೋರಾಟ..!

ಬಾಹುಬಲಿ ಸಿನಿಮಾ ಚಿತ್ರ ನೋಡಲು ಜನ ಮುಗಿಬಿದ್ದು ಟಿಕೆಟ್ ಖರೀದಿ ಮಾಡ್ತಿದ್ದಾರೆ. ಇದಕ್ಕೆ  ಕನ್ನಡ ಅಭಿಮಾನಿಗಳೂ ಹಾಗೂ ಅನ್ಯಭಾಷೆಯ ಚಿತ್ರಗಳ ಡಬ್ಬಿಂಗ್ ವಿರೋಧಿಸುವವರೂ ಹೊರತಾಗಿಲ್ಲ.. ಇದ್ರ ಜೊತೆಗೆ ಮುಂದಿನ ವಾರದ ಟಿಕೆಟ್ ಕೂಡ ಚಳಿಗಾಲದ ಬಜ್ಜಿ ಬೊಂಡದಂತೆ ಬಿಕರಿಯಾಗ್ತಿವೆ.
ಇದೇನಿದು ಬೆಂಕಿ ಹೋರಾಟ ?
ಈ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಒಂದು ಘಟನೆ ನಡೆದಿದೆ.. ಬಾಹುಬಲಿ ಚಿತ್ರ ನೋಡಲು ಬಂದಿದ್ದ ಸಂತೋಷ್ ಎಂಬ ಯುವಕನಿಗೆ ಟಿಕೆಟ್ ಸಿಕ್ಕಿಲ್ಲ. ಥಿಯೇಟರ್ ಸಿಬ್ಬಂದಿ ಬಳಿ ಎಷ್ಟು ಗೋಗೆರದರೂ ಟಿಕೆಟ್ ಸಿಗದಿದ್ದಾಗ ರೊಚ್ಚಿಗೆದ್ದ ಸಂತೋಷ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ ಹಾಕಿದ್ದಾನೆ..
ಘಟನೆ ನೋಡಿ ಕಕ್ಕಾಬಿಕ್ಕಿಯಾದ ಥಿಯೇಟರ್ ಸಿಬ್ಬಂದಿ, ಭದ್ರತೆಗೆ ಬಂದಿದ್ದ ಪೊಲೀಸ್ ಸಿಬ್ಬಂದಿಗೆ ವಿಚಾರ ಮುಟ್ಟಿಸಿದ್ದಾರೆ. ಕೂಡಲೇ ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ. ಸಂತೋಷ್ ಹೊಸಕೋಟೆಯ ಅವಲಹಳ್ಳಿ ಗ್ರಾಮದವರಾಗಿದ್ದು, ಪ್ರಬಾಸ್ ಅಭಿಮಾನಿಯಾಗಿದ್ದಾರೆ. ಆದ್ರೆ ಸಿನಿಮಾ ರಿಲೀಸ್ ಆಗಿ ಎರಡು ದಿವಸವಾದ್ರು ಟಿಕೆಟ್ ಸಿಗದೆ ಇದ್ದಿದ್ದಕ್ಕೆ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.. ಘಟನೆಯಲ್ಲಿ ಬೈಕ್ ಗಳಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂಬುದು ತಿಳಿದು ಬಂದಿದೆ ..
-Ad-

Leave Your Comments