ಬಾಹುಬಲಿ ಮೊದಲ ದಿನದ ಗಳಿಕೆ ಎಷ್ಟು? ಗೊತ್ತಾದ್ರೆ ದಂಗಾಗಿ ಹೋಗ್ತೀರಾ

 ಬಾಹುಬಲಿ ಸಿನಿಮಾದ ಒಂದು ದಿನದ ಕಲೆಕ್ಷನ್ ಕೇಳಿದರೆ ನೀವು ಶಾಕ್ ಆಗುತ್ತೀರಿ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಈವರೆಗೆ ಯಾವ ಸಿನಿಮಾ ಕೂಡ ಮಾಡದೇ ಇರುವ ಸಾಧನೆಯನ್ನು ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಮಾಡಿದೆ. ಇಡೀ ಜಗತ್ತನ್ನೇ ಮಂತ್ರಮುಗ್ಧಗೊಳಿಸಿದೆ. ಅದರ ಫಲವಾಗಿ ಬಾಹುಬಲಿ2 ಸಿನಿಮಾದ ಒಂದು ದಿನದ ಕಲೆಕ್ಷನ್ ಎಷ್ಟು ಎಂದು ಕೇಳಿದರೆ ನೀವು ಆಶ್ಚರ್ಯಪಡುವುದು ಖಂಡಿತ.
ಬಾಹುಬಲಿ ಚಿತ್ರ ಎಲ್ಲಾ ದಾಖಲೆಗಳನ್ನು ಲೂಟಿ ಮಾಡ್ಕೊಂಡು ಹೋಗ್ತಿದೆ ಅಂತಾ ಎಲ್ಲಾ ಕಡೆಯೂ ಮಾತನಾಡ್ತಿದ್ದಾರೆ.. ಹಾಗಿದ್ರೆ ಮೊದಲ ದಿನದ ಕಲೆಕ್ಷನ್ ಎಷ್ಟಾಗಿದೆ ಅನ್ನೋದು ಗೊತ್ತಾ..? ಬರೋಬ್ಬರಿ 121 ಕೋಟಿ .. ಅದೂ ಕೂಡ ಕೇವಲ ಭಾರತದಲ್ಲಿ ಮಾತ್ರ.
ಅಮೆರಿಕದಲ್ಲಿ ಹರಿದು ಬಂದಿದ್ದು 2 ಮಿಲಿಯನ್ ಡಾಲರ್..! 
ಹೌದು, ಬಾಹುಬಲಿ ಭಾರತ ಮಾತ್ರವಲ್ಲದೆ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆಯಾಗಿತ್ತು.. ಅಮೆರಿಕ ಒಂದರಲ್ಲೇ 1400 ಥಿಯೇಟರ್ನಲ್ಲಿ ಅಬ್ಬರಿಸಿತ್ತು.. ಮೊದಲ ಶುಕ್ರವಾರ ಬರೋಬ್ಬರಿ 2.5 ಮಿಲಿಯನ್ ಡಾಲರ್ ಹಣವನ್ನು ತನ್ನ ಜೋಳಿಗೆಯಲ್ಲಿ ಜೋಪಾನ ಮಾಡಿಕೊಂಡಿದೆ.
ಆಂಧ್ರ. ತೆಲಂಗಾಣದಲ್ಲಿ 53 ಕೋಟಿ ಕಲೆಕ್ಷನ್..! 
ಬಾಹುಬಲಿ ನಿರ್ಮಾಣ ಆಗಿದ್ದೇ ತೆಲುಗು ಭಾಷೆಯಲ್ಲಿ. ಇನ್ನುಳಿದ ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಡಬ್ ಆಗಿತ್ತು.. ಬಿಡುಗಡೆಯಾದ ದಿನ ಅದ್ಬುತ ರಿಯಾಕ್ಷನ್ ಬಂದಿದ್ದು ಇವೆರಡು ರಾಜ್ಯಗಳಿಂದ 53 ಕೋಟಿ ಬಾಕ್ಸ್ ಆಫೀಸ್ ಸೇರಿದೆ. ತಮಿಳುನಾಡಿನಲ್ಲಿ 12 ಕೋಟಿ ಕಲೆಕ್ಷನ್ ಮಾಡಿದ್ದು ಯಾವುದೇ ಸಮಸ್ಯೆ ಇಲ್ಲದೆ ಮಾರ್ನಿಂಗ್ ಶೋ ಆರಂಭವಾಗಿದ್ರೆ ಮತ್ತಷ್ಟು ಹಣ ಬರ್ತಿತ್ತು.. ಮಲಯಾಳಂ ಭಾಷೆಯಲ್ಲಿ 7 ಕೋಟಿಯನ್ನು ಚಾಚಿಕೊಂಡಿದೆ.. ಇನ್ನು ಹಿಂದಿ ಭಾಷೆಯಲ್ಲಿ 41 ಕೋಟಿ ಸೂರೆ ಮಾಡಿರೋದು ಕೂಡ ಇತಿಹಾಸ.. ಇದಕ್ಕೂ ಮೊದಲು ಸಲ್ಮಾನ್ ಖಾನ್ ಅಭಿನಯದ ಪ್ರೇಮ್ ರತನ್ ಧನ್ ಪಾಯೋ ಚಿತ್ರ 40.35 ಕೋಟಿ ಗಳಿಕೆ ಮಾಡಿದ್ದೇ ದಾಖಲೆಯಾಗಿತ್ತು.
ಬಾಲಿವುಡ್ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.. ಎಲ್ಲರೂ ಮೊದಲ ದಿನ 100 ಕೋಟಿ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು, ಬಾಹುಬಲಿ ಅದನ್ನೂ ಮೀರಿ ಮುನ್ನುಗ್ಗುವ ಮೂಲಕ ಭಾರತದ ಇತಿಹಾಸದಲ್ಲಿ ಚಾರಿತ್ರಿಕ ದಾಖಲೆ ನಿರ್ಮಾಣ ಮಾಡಿದ್ದಾನೆ ಎಂದಿದ್ದಾರೆ.  ಇದೇ ವೇಳೆ ಇತ್ತೀಚಿಗೆ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದ್ದ ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾದ ದಾಖಲೆ ಮುರಿದುಬಿದ್ದಿದೆ.
 ಹಿಂದಿ ಮಾರ್ಕೆಟ್‌ ನ ಹೊಣೆ ವಹಿಸಿಕೊಂಡಿರುವ ನಟ ಕರಣ್ ಜೋಹರ್ ಟ್ವಿಟ್ಟರ್ ನಲ್ಲಿ  ಸಂಭ್ರಮ ವ್ಯಕ್ತಪಡಿಸಿದ್ದು, ಯಾರೂ ಊಹೆ ಮಾಡಲಾಗದ ಮಟ್ಟದಲ್ಲಿ ಬಾಹುಬಲಿ ಯಶಸ್ಸು ಕಂಡಿದೆ ಎಂದಿದ್ದಾರೆ..
ಬಲ್ಲಾಳ ರಾಯನ ಪಾತ್ರ ಮಾಡಿರುವ ನಟ ರಾಣ ದಗ್ಗುಬಾಟಿ ಬಾಹುಬಲಿ ಚಿತ್ರದ ಅಭಿನಯದ ಬಳಿಕ ನನ್ನ ಮಾರ್ಕೆಟ್ ವ್ಯಾಲ್ಯೂ ಉತ್ತುಂಗಕ್ಕೆ ಏರಿದೆ ಅಂತಾ ಹೇಳಿಕೊಂಡಿದ್ದಾರೆ. ಅದೇನೇ ಇರಲಿ ಇವತ್ತು ಭಾನುವಾರ ಎಷ್ಟು ಗಳಿಸುತ್ತೆ? ಬಾಹುಬಲಿ ಸಿನಿಮಾ ರಿಲೀಸ್ ಆದ ಮೂರು ದಿನದಲ್ಲಿ ಗಳಿಸಿದ ಹಣವೆಷ್ಟು ಅನ್ನೋದನ್ನು ನಾಳೆ ಹೇಳ್ತೀವಿ. ಪಿಚ್ಚರ್ ಅಭೀ ಬಾಕಿ ಹೈ. ciniadda.com  ಫಾಲೋ ಮಾಡ್ತಿರಿ..
Click here to Reply or Forward
-Ad-

Leave Your Comments