ಅರ್ಧ ದಾರಿ ಮುಗಿಸಿದ “ಬೆಂಗಳೂರು ಟು ಕಾಶ್ಮೀರ್”

ಬಿ.ಟಿ.ಎಲ್. ಫಿಲ್ಮ್ಸ್ ಲಾಂಛನದಲ್ಲಿ ಬಿ.ಟಿ ಲಲಿತಾನಾಯಕ್ ನಿರ್ಮಿಸುತ್ತಿರುವ ಬೆಂಗಳೂರು ಟು ಕಾಶ್ಮೀರ್ ಚಿತ್ರವನ್ನು ಕಾಶ್ಮೀರದ ಸೋನ್ ಮಾರ್ಗ್ ಡಲ್ ಲೇಕ್ ಸುತ್ತ ಮುತ್ತ ಚಿತ್ರೀಕರಣ ನಡೆಸಿ ಸುಮಾರು 50 ಭಾಗದಷ್ಟು ಚಿತ್ರೀಕರಣ ಪೂರೈಸಿದೆ. ಉಳಿದ 50 ಭಾಗದ ಚಿತ್ರೀಕರಣವನ್ನು ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗುವುದು. ಓಂ ಪ್ರಕಾಶ್ ನಾಯಕ್ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕುಮಾರ್ ಛಾಯಾಗ್ರಹಣ, ಓಂ ಪ್ರಕಾಶ್ ಸಾಹಿತ್ಯವಿದೆ. ಜಯಸೂರ್ಯ, ಓಂ ಪ್ರಕಾಶ್ ನಾಯಕ್, ಉಮಾದೇವಿ, ಸ್ವಪ್ನ, ರಮ್ಯ, ಅಶ್ವಿನಿ, ಪ್ರಿನ್ಸ್, ಬಳ್ಳಾರಿ ಮಂಜುಳಮ್ಮ ಮುಂತಾದವರ ತಾರಾಬಳಗವಿದೆ.

ಏನಿದು ಕಥೆ ?
ಮದುವೆಯಾಗಲು ಇಷ್ಟವಿಲ್ಲದಿದ್ದರೂ ಕಂಡ ಕಂಡ ಹುಡುಗಿಯರಿಗೆ ಫ್ಲರ್ಟ್ ಮಾಡುವ ಸ್ವಭಾವದ ಹುಡುಗ ಆತ. ಇಂಥವನಿಗೆ ಇಷ್ಟವಿಲ್ಲದಿದ್ದರೂ ಮನೆಯಲ್ಲಿ ಆತನ ತಾತ ಬಲವಂತದಿಂದ ಮತ್ತೊಂದು ಹೆಣ್ಣನ್ನು ತಂದು ಮದುವೆ ಮಾಡಿಬಿಡುತ್ತಾರೆ. ಹಾಗೆ ಮದುವೆಯಾದ ಜೋಡಿಯನ್ನು ಕಾಶ್ಮೀರಕ್ಕೆಂದು ಕಳಿಸುತ್ತಾರೆ. ಆದರೆ ಆತ ಕಾಶ್ಮೀರಕ್ಕೆ ಕರೆದೊಯ್ದು ಹುಡುಗಿಯನ್ನು ಕೊಲೆ ಮಾಡಲು ಸ್ಕೆಚ್ ರೂಪಿಸುತ್ತಾನೆ. ಈ ತೀರಿಯಲ್ಲಿ ಸಾಗುವ ಕಥೆ ಅನೇಕ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಊಹೆಗೂ ನಿಲುಕದ ಟ್ವಿಸ್ಟ್ ಗಳು  ಈ ಚಿತ್ರದಲ್ಲಿವೆ ಅಂತಾರೆ ಚಿತ್ರತಂಡದವರು.

-Ad-

Leave Your Comments