ಬ್ರೈನ್ ಇದ್ದವರಿಗೆ ಮಾತ್ರ “ಬಿಬಿ5” ಇಂದು ತೆರೆಗೆ

ಶಿವ ಹೋಂ ಟಾಕೀಸ್ ಲಾಂಛನದಲ್ಲಿ ಬಿ.ಜೆ. ಸೌಮ್ಯ ನಿರ್ಮಾಣದ “ಬಿ ಬಿ 5” ಇಂದು  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ರಚನೆ-ನಿರ್ದೇಶನ – ಎನ್. ಜನಾರ್ಧನ್, ಛಾಯಾಗ್ರಹಣ-ವಿಕ್ರಮ್-ಚೇತನ್ ರಾಯ್, ಸಂಗೀತ-ಚೇತನ್ ಕುಮಾರ್ ಶಾಸ್ತ್ರಿ, ಸಂಕಲನ-ಶ್ರೀಕಾಂತ್

ತಾರಾಗಣದಲ್ಲಿ – ಪೂರ್ಣಚಂದ್ರ ಮೈಸೂರು, ರಾಧಿಕಾ ಚೇತನ್, ರಾಜೇಶ್ ನಟರಂಗ, ರಷ್ಮಿ ಪ್ರಭಾಕರ್ ಹಾಗೂ ಚಿತ್ರನಿರ್ದೇಶಕ ಬಿ.ಎಂ. ಗಿರಿರಾಜ್ ಅಭಿನಯಿಸಿದ್ದಾರೆ.

ಉತ್ಸಾಹಿ ಬರಹಗಾರನೊಬ್ಬ ನಾಡಿನ ಸುಪ್ರಸಿದ್ದ ಚಲನಚಿತ್ರ ನಿರ್ದೇಶಕರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಯೊಂದು ಜರುಗುತ್ತದೆ. ಅದೇ ಸಮಯದಲ್ಲಿ ಬೆಂಗಳೂರು ನಗರ ಜೋಡಿ ಕೊಲೆಗೆ ತಲ್ಲಣಗೊಂಡಿರುತ್ತದೆ. ಈ ಮಧ್ಯೆ ಇದರ ಸುತ್ತ ನಡೆಯುವ ರೋಚಕ ಘಟನೆಗಳೇ ಚಿತ್ರದ ಕಥಾವಸ್ತು.

ನಿರ್ದೇಶಕ ಜನಾರ್ಧನ್ ಮೂಲತಃ ಸಾಫ್ಟ್ವೇರ್ ಎಂಜಿನಿಯರ್ . ಸಿನಿಮಾ ಮೇಲಿನ  ಪ್ರೀತಿಯಿಂದ ಕೈಯಲ್ಲಿದ್ದ ಕೆಲಸ ಬಿಟ್ಟು ಹೊಸಬರ ತಂಡ ಕಟ್ಟಿಕೊಂಡು ಹೊಸ ರೀತಿಯಲ್ಲಿ ಸಿನಿಮಾ ಮಾಡುವ ಉಮೇದಿನಲ್ಲಿ ಬಿಬಿ5 ಮಾಡಿದ್ದಾರೆ. ಕ್ರೈಂ ಥ್ರಿಲ್ಲರ್ ಜೋನರ್ ನಲ್ಲಿರುವ ಚಿತ್ರದಲ್ಲಿ ಪ್ರೇಮ ಕಥೆಯೂ  ಬೆರೆತಿದೆ. ಸ್ಟಾರ್ ನಟರಿಗಿಂತ ಹೆಚ್ಚಾಗಿ  ಬಿಬಿ5 ಚಿತ್ರ ಕಥೆ  ಮತ್ತು ಅದರ ಹೆಣಿಗೆಯ ರೀತಿಯಿಂದಲೇ ಜನರಿಗೆ ಇಷ್ಟವಾಗುತ್ತೆ ಅನ್ನುವ ಭರವಸೆಯಲ್ಲಿದ್ದಾರೆ ಜನಾರ್ಧನ್ . 

-Ad-

Leave Your Comments