ಅಮೆರಿಕ ಸೇರಲಿರುವ “ಬ್ಯೂಟಿಫುಲ್ ಮನಸುಗಳು”

ಇತ್ತೀಚಿಗೆ ಬಿಡುಗಡೆಯಾಗಿ ಚಿತ್ರರಸಿಕರ ಮನಸ್ಸುಗಳನ್ನು ಗೆದ್ದ  ಜಯತೀರ್ಥ ನಿರ್ದೇಶನದ “ಬ್ಯೂಟಿಫುಲ್ ಮನಸುಗಳು” ಚಿತ್ರ ಅಮೆರಿಕ ಸೇರಲು ಅಣಿಯಾಗಿದೆ. ಇದೇ ತಿಂಗಳು 23ರಿಂದ USAಯಲ್ಲಿ ಪ್ರದರ್ಶನ ಪ್ರಾರಂಭವಾಗಲಿದೆ.

USAನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅತಿ ಹೆಚ್ಚು ಚಿತ್ರಮಂದಿರಗಳು ಲಭ್ಯವಾಗುತ್ತಿರುವುದು ಇದೇ ಮೊದಲು. ಕೈ ಹಿಡಿಯಿರಿ,ಆಶೀರ್ವದಿಸಿರಿ.ಮುಂದಿನ ಎಲ್ಲ ಸಂವೇದನಾಶೀಲ ಕನ್ನಡ ಚಿತ್ರಗಳಿಗೂ USAನಲ್ಲಿ ಮಾರುಕಟ್ಟೆ ಹುಟ್ಟುವಲ್ಲಿ ನಿಮ್ಮ ಪ್ರೋತ್ಸಾಹವಿರಲಿ ಅಂತಾರೆ ಚಿತ್ರದ ನಿರ್ದೇಶಕ  ಜಯತೀರ್ಥ.

beautifulmanasugalu

ಶುರುವಿನಲ್ಲಿ ಬೆಂಗಳೂರಿನಲ್ಲೇ ಸರಿಯಾಗಿ ಚಿತ್ರಮಂದಿರಗಳು ಸಿಗದೇ ಪರದಾಡಿ ಕೊನೆಗೂ ಪ್ರೇಕ್ಷರನ್ನು ತಲುಪಿ ಸೈ ಎನ್ನಿಸಿಕೊಂಡ “ಬ್ಯೂಟಿಫುಲ್ ಮನಸುಗಳು” ಈಗ ಸಮುದ್ರ ದಾಟಿ ಪರದೇಶದಲ್ಲಿ ನೆಲೆಸಿರುವ ಭಾರತೀಯ ಮನಸ್ಸುಗಳನ್ನೂ ಗೆಲ್ಲಲು ಹೊರಟಿದೆ. ಇದು ನೋಡಲೇಬೇಕಾದ ಚಿತ್ರ ಎಂಬ ಅಭಿಮತ ciniadda.comದು. ಒಳ್ಳೆಯ ಸಿನಿಮಾಗಳು ಬಂದಾಗ ಗೆಲ್ಲಿಸುವ ಆ ಮೂಲಕ ಮತ್ತಷ್ಟು ಅತ್ತ್ಯುತ್ತಮ ಚಿತ್ರಗಳಿಗೆ ದಾರಿ ಮಾಡಿಕೊಡುವ ಜವಾಬ್ದಾರಿ ಪ್ರೇಕ್ಷಕರದ್ದು. ಅಂಥಾ ಜವಾಬ್ದಾರಿಯನ್ನು ಪ್ರೇಕ್ಷಕ ಮಹಾಶಯರು ನೆರವೇರಿಸುತ್ತಾರೆಂಬ ನಂಬಿಕೆಯಿಂದಲೇ ಶಿವರಾತ್ರಿಯ ಶುಭದಿನದಂದು ಅಮೆರಿಕದಲ್ಲಿ ನೆಲೆಸಿ ಕನ್ನಡ ಚಿತ್ರಗಳಿಗಾಗಿ ಕಾಯುವ ಮನಸ್ಸುಗಳನ್ನ ತಲುಪಲಿದೆ “ಬ್ಯೂಟಿಫುಲ್ ಮನಸುಗಳು”. 

 

 

-Ad-

Leave Your Comments