ಸರ್ಕಾರದಿಂದ ಪಾರ್ವತಮ್ಮ ರಾಜಕುಮಾರ್ ಅವರಿಗೆ ಸಿಗಲಿದೆ ಮತ್ತೊಂದು ಗೌರವ? ಏನದು ಗೊತ್ತಾ?

ಇತ್ತೀಚೆಗೆ ವಿಧಿವಶರಾದ ಕನ್ನಡ ಚಿತ್ರರಂಗದ ವಜ್ರೇಶ್ವರಿ ಪಾರ್ವತಮ್ಮ ಅವರಿಗೆ ಸರ್ಕಾರದಿಂದ ಮತ್ತೊಂದು ಗೌರವ ಸಿಗಲಿದೆ. ಅದೇನೆಂದರೆ ಬೆಂಗಳೂರಿನ ರಸ್ತೆಯೊಂದಕ್ಕೆ ಪಾರ್ವತಮ್ಮನವರ ಹೆಸರಿಡಲು ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಬೆಂಗಳೂರಿನ ಸೌತ್ ಎಂಡ್ ರಸ್ತೆಯಿಂದ ಮಾಧವರಾವ್ ವೃತ್ತದಿಂದ ನಾಗಸಂದ್ರದವರೆಗಿನ ರಸ್ತೆಗೆ ಮರುನಾಮಕರಣ ಮಾಡಿ ಪಾರ್ವತಮ್ಮ ರಾಜ್ ಕುಮಾರ್ ಹೆಸರು ಇಡಲು ನಿರ್ಧರಿಸಿದೆ. ಪಾರ್ವತಮ್ಮ ರಾಜ್ ಕುಮಾರ್ ಅವರು ಸ್ಯಾಂಡಲ್‌ವುಡ್‌ನಲ್ಲಿ 80 ಚಿತ್ರಗಳನ್ನು ನಿರ್ಮಿಸಿದ್ದು, ಎಲ್ಲವೂ ಸದಭಿರುಚಿಯ ಚಿತ್ರಗಳು ಎಂಬುದು ವಿಶೇಷ. ರಸ್ತೆ ಮರುನಾಕರಣ ಕಾರ್ಯಕ್ರಮವನ್ನು ಶುಕ್ರವಾರ ಬೆಳಗ್ಗೆ 10.30ಕ್ಕೆ ಸೌತ್ ಎಂಡ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ನಟರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಮೇಯರ್ ಜಿ ಪದ್ಮಾವತಿ ಹಾಗೂ ಬಿಜೆಪಿ ಮುಖಂಡ ಆರ್. ಅಶೋಕ್, ಕೇಂದ್ರ ಸಚಿವ ಅನಂತ್ ಕುಮಾರ್ ಭಾಗಿಯಾಗಲಿದ್ದಾರೆ.

-Ad-

Leave Your Comments