ಬಿಗ್ ಬಾಸ್ ವಿನ್ನರ್ ಯಾರು..?

ಈಗಾಗಲೇ ಶತಕ ಪೂರೈಸಿ, ಅಂತಿಮ ವಾರದಲ್ಲಿ ಹಣಾಹಣಿ ನಡೆಸುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆಲ್ಲೋದು ಯಾರು ಅನ್ನೊ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಜನಸಾಮಾನ್ಯರಾಗಿ ಎಂಟ್ರಿಕೊಟ್ರು ಒಳ್ಳೆಯ ಹಾಸ್ಯ ಪ್ರಜ್ಞೆ ಮೂಲಕ ಜನ ಮನ ಗೆದ್ದಿರುವ ದಿವಾಕರ್ ಗೆಲ್ಲಬೇಕು ಅಂತ ಕೆಲವರು ವಾದಿಸಿದ್ರೆ, ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನಟ ಜಯರಾಮ್ ಕಾರ್ತಿಕ್ ಗೆಲ್ಲಬೇಕು ಅನ್ನೋದು ಅವರ ಅಭಿಮಾನಿಗಳ ಒಲವು. ಇನ್ನು ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿ ಗೆಲ್ಲಲೇ ಬೇಕಾದ ಸ್ಪರ್ಧಿ ಅನ್ನೋದು ಬಹುತೇಕ ಬಿಗ್ ಬಾಸ್ ವೀಕ್ಷಕರ ಕನಸಾಗಿದೆ.

ಸಮೀರ್ ಆಚಾರ್ಯ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಬಳಿಕ ಉಳಿದ ಐದು ಸ್ಪರ್ಧಿಗಳಿಗೆ ಒಂದು ಟಾಸ್ಕ್ ಕೊಡಲಾಗಿತ್ತು. ಟಾಪ್ ಫೈವ್ ಸ್ಪರ್ಧಿಗಳ ಅಂತಿಮ ಸ್ಥಾನಗಳನ್ನು ಸ್ಪರ್ಧಿಗಳೇ ನಿರ್ಧರಿಸಲು ಬಿಗ್ ಬಾಸ್ ಅವಕಾಶ ಕಲ್ಪಿಸಿದ್ರು. ಈ ಟಾಸ್ಕ್ ನಲ್ಲಿ ಮೊದಲಿಗರಾಗಿ ಬಂದ ನಟ ಜೆಕೆ, ಚಂದನ್ ಶೆಟ್ಟಿಗೆ ವಿನ್ನರ್ ಪಟ್ಟ ಕೊಟ್ರೆ ಎರಡನೇ ಸ್ಥಾನವನ್ನುವನ್ನು ತನಗೆ ಕಾಯ್ದುಕೊಂಡು ಮೂರನೇ ಸ್ಥಾನ ದಿವಾಕರ್ ನಾಲ್ಕು ಸೃತಿ ಕೊನೆ ಸ್ಥಾನ ನಿವೇದಿತಾ ಗೌಡ ಅವರಿಗೆ ನೀಡಿದ್ರು. ದಿವಾಕರ್ ಕೂಡ ಮೊದಲ ಸ್ಥಾನ ಚಂದನ್ ಶೆಟ್ಟಿಗೆ ಕೊಟ್ಟು, ನಂತ್ರ ಜೆಕೆ, ಶೃತಿ, ನಿವೇದಿತಾಗೆ ಕೊಟ್ಟು ಕೊನೆ ಸ್ಥಾನಕ್ಕೆ ತಾವೇ ನಿಂತ್ರು. ಬಳಿಕ ಶೃತಿ ಮೊದಲ ಸ್ಥಾನ ಜೆಕೆ, ನಂತರ ಚಂದನ್ ಗೆ ಕೊಟ್ರು. ಬಳಿಕ ನಿವೇದಿತಾ ಚಂದನ್ ಗೆ ಫಸ್ಟ್ ಪ್ಲೇಸ್ ಕೊಟ್ಟು ಜೆಕೆಗೆ ಸೆಕೆಂಡ್ ಪ್ಲೇಸ್ ಕೊಟ್ರು. ಮೂರನೇ ಸ್ಥಾನ ತಾವೇ ಇಟ್ಕೊಂಡ್ರು. ಹೀಗೆ ಮೂವರು ಚಂದನ್ ಶೆಟ್ಟಿಗೆ ಮೊದಲ ಸ್ಥಾನ ಕೊಟ್ರೆ ಇಬ್ಬರು ಜೆಕೆ ವಿನ್ನರ್ ಅಂದ್ರು.

ಚಂದನ್ ಮೊದಲ ಸ್ಥಾನ ಕೊಡ್ತಿದ್ದ ಹಾಗೆ ಜೆಕೆ ಆ ಸ್ಥಾನ ಒಪ್ಪಿಕೊಳ್ಳಲು ನಿರಾಕರಿಸಿ ನಾನು ನಿನಗಿಂತ ಹೆಚ್ಚು ಅರ್ಹನಲ್ಲ, ನೀನೇ ಮೊದಲ ಸ್ಥಾನಕ್ಕೆ ಅರ್ಹ, ನಾನು ಎರಡನೇ ಸ್ಥಾನಕ್ಕೆ ಸೂಕ್ತ ಅಂತ ವಾದಿಸಿದ್ರು. ಅಂದ್ರೆ ನೂರು ದಿನಗಳನ್ನು ಪೂರೈಸಿದ ಬಳಿಕ ಬಿಗ್ ಬಾಸ್ ಟೈಟಲ್ ಗೆಲ್ಲಬೇಕಾದವರು ಯಾರು ಅನ್ನೊದನ್ನ ಸ್ಪರ್ಧಿಗಳು ನಿರ್ಧರಿಸಿದ್ದಾರೆ. ಹೊರಗಡೆ ನೋಡ್ತಿರೋ ಕನ್ನಡಿಗ ಪ್ರೇಕ್ಣಕರಿಗೂ ಕೂಡ ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿಯೇ ವಿನ್ನರ್ ಆಗಬೇಕು ಎಂದುಕೊಂಡು ಕಾರ್ಯಕ್ರಮ ನೋಡ್ತಿದ್ದಾರೆ. ಆದ್ರೆ ಬಿಗ್ ಬಾಸ್ ನಲ್ಲಿ ಜನರ ಅಪೇಕ್ಷೆ ಒಂದಾದ್ರೆ ಕೊನೆಯಲ್ಲಿ ಬರುವ ಫಲಿತಾಂಶವೇ ಬೇರೆ ಇರುತ್ತೆ. ಜನರೇ ಅಯ್ಕೆ ಮಾಡಿರೋದು ಅಂತ ಹೇಳುವುದರಿಂದ ಒಲ್ಲದ ಮನಸ್ಸಿಂದಲೇ ಒಪ್ಪಿಕೊಳ್ಳಬೇಕಾಗುತ್ತೆ. ಈ ಬಾರಿ ಹಾಗೇನಾದ್ರು ಆದ್ರೆ ಚಂದನ್ ಗೆ ಪಟ್ಟ ಸಿಗದೆ ಹೋಗುತ್ತದೆ. ಎರಡು ಪ್ರೇಮ ಜೋಡಿಗಳನ್ನು ಬಿಟ್ಟು ದಿವಾಕರ್ ಗೆ ಪಟ್ಟ ಕೊಟ್ಟರೂ ಕೊಡುವ ಸಾಧ್ಯತೆ ಇದೆ.

ಜ್ಯೋತಿ ಗೌಡ, ನಾಗಮಂಗಲ

-Ad-

Leave Your Comments