ಬಿಗ್‍ಬಾಸ್ ಮನೆಗೆ ಬಿತ್ತು ಬೆಂಕಿ..!

ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,  ಬಿಗ್​ಬಾಸ್​ ಮನೆಗೆ ಆಕಸ್ಮಿಕ ಬೆಂಕಿ ಬಿದ್ದಿದೆ. ಮೊದಲು ಬಿಗ್​ಬಾಸ್​ ಮನೆ ಬೆಂಕಿಗೆ ಆಹುತಿಯಾಗಿದೆ‌. ಬಿಗ್‍ಬಾಸ್ ಮನೆಗೆ ಹೊಂದಿಕೊಂಡಂತೆ ಅಲಂಕಾರಿಕವಾಗಿ ಮಾಡಿದ್ದ ಮೇಣದ ಮ್ಯೂಸಿಯಂಗೆ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗಿನ ಜಾವ ಮೂರು ಗಂಟೆಗೆ ಬೆಂಕಿ ಬಿದ್ದಿದ್ದು ಆ ಬಳಿಕ ಬಿಗ್  ಬಾಸ್​ ಮನೆಗೂ ಬೆಂಕಿ ವ್ಯಾಪಿಸಿ ಹೊತ್ತಿ ಉರಿದಿದೆ.
ಮೇಣದಿಂದ ಮಾಡಿದ್ದ ಮ್ಯೂಸಿಯಂ ಆದ ಕಾರಣ ಬೆಂಕಿ ಜ್ವಾಲೆ ಶೀಘ್ರವಾಗಿ ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.. ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮ್ಯೂಸಿಯಂಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಪೊಲೀಸರ ತನಿಖೆ ಬಳಿಕ ನಿಖರ ಕಾರಣ ತಿಳಿಯಲಿದೆ . ಸದ್ಯ ಮ್ಯೂಸಿಯಂನಲ್ಲಿ ವಸ್ತುಗಳು ಬೆಂಕಿಗಾಹುತಿ ಆಗಿವೆ ಅಂತಾ ಇನ್ನೋವೇಟಿವ್ ಫಿಲ್ಮ್ ಸಿಟಿ ಮೂಲಗಳಿಂದ ತಿಳಿದುಬಂದಿದೆ.
ದೇವರ ದಯೆ, ತಪ್ಪಿದ ಭಾರೀ ದುರಂತ..!
ಕನ್ನಡದ ಖಾಸಗಿ ವಾಹಿನಿಯ ಬಿಗ್​ಬಾಸ್​ ಕಾರ್ಯಕ್ರಮ ಮುಕ್ತಾಯವಾಗಿ ತಿಂಗಳಾಗುತ್ತಿರುವಾಗ ಈ ಅಗ್ನಿ ಅವಘಡ ಸಂಭವಿಸಿದ್ದು, ಸ್ಪರ್ಧಿಗಳು ಮನೆಯ ಒಳಗೆ ಇದ್ದಾಗ ಈ ಘಟನೆ ಸಂಭವಿಸಿದ್ರೆ‌ಅನ್ನೋ ಆತಂಕ ಕಾಡ್ತಿದೆ. ಅದೂ ಕೂಡ ಒಳ್ಳೆ ನಿದ್ರಾ ಸಮಯವಾದ ಬೆಳಗ್ಗೆ 3 ಗಂಟೆಗೆ ಬೆಂಕಿ ಬಿದ್ದು, ಎಲ್ಲಾ ಸ್ಪರ್ಧಿಗಳು ಗಾಢ ನಿದ್ರೆಯಲ್ಲಿ ಮಲಗಿದ್ದಾಗ ಅಗ್ನಿ ಅವಘಡ  ಸಂಭವಿಸಿದ್ರೆ ಹೆಚ್ಚಿನ ಹಾನಿಯಾಗ್ತಿತ್ತು ಅನ್ನೋದು ನಿಶ್ಚಿತ..
-Ad-

Leave Your Comments